ವಿಜಯ ಸಂಘರ್ಷ ನ್ಯೂಸ್
ಭದ್ರಾವತಿ: ನಗರದ ಶ್ರೀ ತಿರುಮಲ
ಚಾರಿಟಬಲ್ ಪೌಂಡೇಶನ್ ವತಿ ಯಿಂದ ಅಸಹಾಯಕರಿಗೆ ಹಾಗೂ ವಿಕಲಾಂಗ ಕುಟುಂಬದವರಿಗೆ ಸ್ವಾಭಿಮಾನದಿಂದ ಜೀವನ ಸಾಗಿಸಲು ತರಕಾರಿ ಗಾಡಿ ಹಾಗೂ ಬೇಕಾದ ಬಂಡವಾಳದ ಜೊತೆಗೆ ಸಹಾಯ ಹಸ್ತ ನೀಡಲು ಮುಂದಾಗಿದೆ.
ಶನಿವಾರ ಫೌಂಡೇಶನ್ ಸಂಸ್ಥಾಪಕ ಪ್ರಶಾಂತ್ ನಗರದ ಓರ್ವ ಮಹಿಳೆಗೆ ತರಕಾರಿ ತಳ್ಳುಗಾಡಿ, ಮಾರಾಟಕ್ಕೆ ಬೇಕಾದ ತರಕಾರಿ ಹಾಗೂ ಧನ ಸಹಾಯ ನೀಡಿ ಮಹಿಳೆಗೆ ಶುಭ ಹಾರೈಸಿದರು.
ನಂತರ ಮಾತನಾಡಿದ ಅವರು, ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿನ ಬಡ ಹಾಗೂ ವಿಕಲಾಂಗರು ಹಸಿವಿ ನಿಂದ ಬಳಲಬಾರದು. ಈ ಉದ್ದೇಶ ದಿಂದ ಟ್ರಸ್ಟ್ ವತಿಯಿಂದ ಸಹಾಯ ಹಸ್ತ ನೀಡಲಾಗುತ್ತಿದೆ. ಕ್ಷೇತ್ರದ ಗ್ರಾಮೀಣ ಪ್ರದೇಶದ ಹಲವೆಡೆ ಬಡ ಕುಟುಂಬಗಳ ನಿರ್ವಹಣೆಗೆ ಮೇಕೆ, ಕುರಿ ಗಳನ್ನು ನೀಡಿ ಜೀವನಾoಶಕ್ಕೆ ಸಹಾಯ ಮಾಡಲಾಗುತ್ತಿದೆ ಎಂದರು. ಇದೆ ಸಂದರ್ಭ ದಲ್ಲಿ ಸ್ಥಳದಲ್ಲಿದ್ದ ಹಲವರು ಸಹಾಯ ಪಡೆದ ವಿಕಲಾಂಗ ಮಹಿಳೆಗೆ ಧನ ಸಹಾಯ ನೀಡಿದರು.
ಈ ಸಂದರ್ಭದಲ್ಲಿ ಸ್ಥಳೀಯ ಪ್ರಮುಖ ರಾದ ಅಬ್ದುಲ್ ಖದಿರ್, ತೀರ್ಥೇಶ್, ವಿಕಲಚೇತನ ಇಲಾಖೆಯ ಜಗದೀಶ್, ಸಮಾಜ ಕಲ್ಯಾಣ ಇಲಾಖೆಯ ಶಿವಕುಮಾರ್, ಡಿಎಸ್ಎಸ್ ಅಂಗವಿಕಲರ ವಿಭಾಗದ ಜಿಲ್ಲಾಧ್ಯಕ್ಷ ಕಾಣಿಕ್ ರಾಜ್,ಪ್ರದೀಪ, ರಾಜಶೇಖರ್, ನಾಗರಾಜ್, ಸಚಿನ್, ಇಂದ್ರೇಶ್, ಮಹಮದ್ ಸಲ್ಮಾನ್, ರಂಗಸ್ವಾಮಿ ಇನ್ನಿತರರು ಉಪಸ್ಥಿತರಿದ್ದು ಸಹಾಯ ಹಸ್ತಕ್ಕೆ ಮುಂದಾಗಿದ್ದಾರೆ.
ಬಡ, ಅಸಹಾಯಕ ಕುಟುಂಬಗಳ ನೆರವಿಗೆ ಸಹಾಯ ಹಸ್ತ ನೀಡಬೇಕೆಂಬ ಹಂಬಲ ಇರುವ ಹೃದಯವಂತರು +919901822925 ಸಂಪರ್ಕಿಸ ಬಹುದು ಎಂದು ಕೊರಿದ್ದಾರೆ.