ಹಿರೀಕಳಲೆ ಗ್ರಾ.ಪಂ ನೂತನ ಅಧ್ಯಕ್ಷರಾಗಿ ರತ್ನಮ್ಮ ರಾಮಕೃಷ್ಣ ಅವಿರೋಧ ಆಯ್ಕೆ

ವಿಜಯ ಸಂಘರ್ಷ ನ್ಯೂಸ್ 
ಕೆ.ಆರ್.ಪೇಟೆ: ತಾಲ್ಲೂಕಿನ ಕಸಬಾ ಹೋಬಳಿಯ ಹಿರೀಕಳಲೆ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷರಾಗಿ ರತ್ನಮ್ಮ ರಾಮಕೃಷ್ಣ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಹಿಂದಿನ ಅಧ್ಯಕ್ಷೆ ರಾಜಮ್ಮ ರಾಮಕೃಷ್ಣೇ ಗೌಡ ಅವರಿಂದ ರಾಜೀನಾಮೆಯಿಂದ ತೆರವಾದ ಅಧ್ಯಕ್ಷಸ್ಥಾನಕ್ಕೆ ಇಂದು ನಡೆದ ಚುನಾವಣೆ ಯಲ್ಲಿ ಹಿರೀಕಳಲೆ ರತ್ನಮ್ಮ ರಾಮಕೃಷ್ಣ ಹೊರತಪಡಿಸಿ ಉಳಿದ ಯಾವ ಸದಸ್ಯರು ನಾಮಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ರತ್ನಮ್ಮ ರಾಮಕೃಷ್ಣ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ ತಾಲೂಕು ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಡಾ:ಲೋಕೇಶ್ ಘೋಷಿಸಿದರು.

ನೂತನ ಅಧ್ಯಕ್ಷರನ್ನ ಅಭಿನಂದಿಸಿ ಮಾತನಾಡಿದ ಪುರಸಭಾ ಸದಸ್ಯ ರವೀಂದ್ರ ಬಾಬು ಯಾರಿಗೂ ಅಧಿಕಾರ ಶಾಶ್ವತವಲ್ಲ ನಾವು ಮಾಡುವ ಕೆಲಸ ಗಳು ಶಾಶ್ವತವಾಗಿರುತ್ತವೆ, ಗ್ರಾ.ಪಂ.ಗೆ ಇಂದು ನೇರವಾಗಿ ಉದ್ಯೋಗ ಖಾತ್ರಿ ಯೋಜನೆಯಡಿ ಸಾಕಷ್ಟು ಅನುದಾನ ಬರುತ್ತಿದೆ. ಗ್ರಾಮಗಳ ಸಮಗ್ರ ಅಭಿವೃ ದ್ಧಿಯ ಜತೆಗೆ ಜನರ ಸಮಸ್ಯೆಗಳನ್ನು ಬಗೆಹರಿಸಬೇಕು.ಮಾದರಿ ಗ್ರಾಮ ಪಂಚಾ ಯಿತಿ ನಿರ್ಮಿಸುವಲ್ಲಿ ಅಧ್ಯಕ್ಷರ ಜತೆ ಪ್ರತಿಯೊಬ್ಬ ಸದಸ್ಯರು ಕೈಜೋಡಿ ಸಬೇಕು ಎಂದು ಕಿವಿ ಮಾತು ಹೇಳಿದರು.

ಬಳಿಕ ಮಾತನಾಡಿದ ನೂತನ ಅಧ್ಯಕ್ಷೆ ರತ್ನಮ್ಮ ರಾಮಕೃಷ್ಣ ನನ್ನ ಅವಧಿಯಲ್ಲಿ ಪಕ್ಷಭೇದ ಮರೆತು ಸರ್ವ ಸದಸ್ಯರು ಜೊತೆಗೂಡಿ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಬರುವ ಪ್ರತಿ ಗ್ರಾಮ ಗಳಲ್ಲಿ ರಸ್ತೆ, ಚರಂಡಿ, ವಿದ್ಯುತ್ ದೀಪಗಳು, ಕುಡಿಯುವ ನೀರು, ಜಾನುವಾರು ನೀರು ಕುಡಿಯುವ ತೊಟ್ಟಿ, ಜಾನುವಾರು ಕೊಟ್ಟಿಗೆ ಹಾಗೂ ಕೆರೆ-ಕಟ್ಟೆ ಅಭಿವೃದ್ಧಿ ಇದರ ಜೊತೆಗೆ ಸರ್ಕಾರ ಇಲಾಖೆಯಿಂದ ಬರುವ ಸವಲತ್ತು ಗಳನ್ನು ಸದುಪಯೋಗ ಮಾಡಿಕೊಂಡು ಗ್ರಾಮಗಳ ಅಭಿವೃದ್ಧಿಗೆ ಒತ್ತು ನೀಡುತ್ತಾ ಪಂಚಾಯಿತಿಯ ವ್ಯಾಪ್ತಿಯಲ್ಲಿ ಗ್ರಾಮಗಳ ಅಭಿವೃದ್ಧಿ ಶ್ರಮಿಸಿ,ಅಭಿವೃದ್ಧಿ ಕಡೆ ಹೆಚ್ಚಿನ ಗಮನ ಹರಿಸುತ್ತ ನನ್ನ ಅಧಿಕಾರದ ಅವಧಿ ಯಲ್ಲಿ ಯಾವುದೇ ಲೋಪದೋಷ ಗಳು ಬರದ ಹಾಗೆ ಸರ್ಕಾರದಿಂದ ಸಾರ್ವಜನಿಕರಿಗೆ ಸಿಗುವ ಸೌಲಭ್ಯ ಗಳನ್ನು ಅರ್ಹ ಫಲಾನುಭವಿ ಗಳಿಗೆ ಸಿಗುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ ಎಂದು ಭರವಸೆ ನೀಡಿದರು.

ಬಳಿಕ ಮಾತನಾಡಿದ ಕಾಂಗ್ರೆಸ್ ಮುಖಂಡ ಹಿರೀಕಳಲೆ ಮಂಜುನಾಥ್ ನೂತನ ಅಧ್ಯಕ್ಷರು ಹಾಗೂ ಸರ್ವ ಸದಸ್ಯರ ವಿಶ್ವಾಸಕ್ಕೆ ತೆಗೆದು ಕೊಂಡು ಪಕ್ಷಬೇಧ ಮರೆತು ಪಂಚಾಯತಿಗೆ ಬರುವ ಅನುದಾನ ಬಳಕೆ ಮಾಡಿ ಕೊಂಡು ಪಂಚಾಯತಿಯನ್ನು ಮಾದರಿ ಯನ್ನಾಗಿ ಮಾಡಲು ಶ್ರಮವಹಿಸಬೇಕು ಸಲಹೆ ನೀಡಿದರು.

ನೂತನ ಅಧ್ಯಕ್ಷರ ಆಯ್ಕೆ ಘೋಷಣೆ ಯಾಗುತ್ತಿದ್ದಂತೆಯೇ ಬೆಂಬಲಿಸಿದ ಕಾರ್ಯಕರ್ತರು ಪಟಾಕಿ ಸಿಡಿಸಿ,ಸಿಹಿ ವಿತರಿಸಿ ಸಂಭ್ರಮಿಸಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಹಿರೀಕಳಲೆ ಮಂಜುನಾಥ್, ಪುರಸಭೆ ಮಾಜಿ ಸದಸ್ಯ ವಿನೋದ್ ಕುಮಾರ್, ಕಸಬಾ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಪುರುಷೋತ್ತಮ್,ಮುಖಂಡರಾದ ಚಿಕ್ಕೋನಹಳ್ಳಿ ಮಂಜುನಾಥ್, ಹೆಚ್.ಎಂ ರಾಮೇಗೌಡ, ಬಲರಾಮ್, ನಾಗರಾಜ್,ದೇವರಾಜು,ಹೆಚ್ ಜೆ ಬಸವರಾಜು,ಗ್ರಾ.ಪಂ ಉಪಾಧ್ಯಕ್ಷ ಟಿ ಎನ್ ಮಹೇಶ್, ಸದಸ್ಯರಾದ ರಾಜಮ್ಮ, ಮಂಜುನಾಥ್, ಸುಂದ್ರಮ್ಮ, ಪದ್ಮಮ್ಮ, ಪುಷ್ಪಲತಾ, ಮಮತ, ಕಾಂತರಾಜು, ನಾಗರಾಜು, ಶಿಲ್ಪಾ, ಮಂಜೇಗೌಡ, ಜಯರಾಮ, ಮಂಜಮ್ಮ, ಶಿವಯ್ಯ, ಸಂತೋಷ್, ಶಾಂತ, ಮರಿಯಮ್ಮ, ಭಾಗ್ಯಮ್ಮ, ಕಾಳಮ್ಮ,ಪಿಡಿಓ ಎಂ. ಆರ್ ನವೀನ್, ಕಾರ್ಯದರ್ಶಿ ರವಿ ಪಿ.ಬಿ ಹಿರಿಕಳಲೆ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಯುವಕರು ಉಪಸ್ಥಿತರಿದ್ದರು.

*✍️ಸುದ್ದಿಯೊಂದಿಗೆ ಮನು ಮಾಕವಳ್ಳಿ ಕೆ ಆರ್ ಪೇಟೆ*

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು