ಕೆ.ಆರ್.ಪೇಟೆ ತಾಲ್ಲೂಕಿನ ಐತಿಹಾಸಿಕ ಗ್ರಾಮವಾದ ಹೊಸಹೊಳಲು ಗ್ರಾಮದ ಹೊಯ್ಸಳ ಶಿಲ್ಪಕಲಾ ದೇವಾಲಯದ ಶ್ರೀ ಲಕ್ಷ್ಮೀನಾರಾಯಣಸ್ವಾಮಿ ಬ್ರಹ್ಮರಥೋತ್ಸವ ಸಾವಿರಾರು ಭಕ್ತ ಸಮೂಹದಲ್ಲಿ ಸಡಗರ ಸಂಭ್ರಮದಿಂದ ಜರಗಿತು.
ಶ್ರೀಲಕ್ಷ್ಮೀ ನಾರಾಯಣಸ್ವಾಮಿ ಉತ್ಸವ ಮೂರ್ತಿಯನ್ನು ಹೆಗಲ ಮೇಲೆ ಹೊತ್ತು ಶ್ರೀ ರಥದಲ್ಲಿ ವಿರಾಜಮಾನವಾಗಿದ್ದ ಉತ್ಸವ ಮೂರ್ತಿಗೆ ಸಾಂಪ್ರದಾಯಿಕ ಪೂಜೆ ಸಲ್ಲಿಸಿ ರಥೋತ್ಸವಕ್ಕೆ ತಾಲೂಕು ದಂಡಾಧಿಕಾರಿ ಡಾ:ಎಸ್.ಯು ಲೋಕೇಶ್, ಸಮಾಜ ಸೇವಕ ಆರ್.ಟಿ.ಓ ಮಲ್ಲಿಕಾರ್ಜುನ್, ಎಂ.ಡಿ.ಸಿ.ಸಿ ಬ್ಯಾಂಕ್ ಉಪಾಧ್ಯಕ್ಷ ಹೆಚ್ ಕೆ ಅಶೋಕ್, ಪುರಸಭಾ ಅಧ್ಯಕ್ಷೆ ಪಂಕಜ ಪ್ರಕಾಶ್ ವಿಶೇಷ ಅಲಂಕಾರ ದಲ್ಲಿ ಶ್ರೀ ಲಕ್ಷ್ಮೀನಾರಾಯಣ ಸ್ವಾಮಿಯ ಭವ್ಯ ರಥದ ಮೇಲೆ ಮೂಲ ವಿಗ್ರಹ ಅಲಂಕರಿಸುತ್ತಿದ್ದಂತೆ ಭಕ್ತಸಾಗರದ ಜೊತೆಗೂಡಿ ಸಂಪ್ರದಾಯಕವಾಗಿ ಚಾಲನೆ ನೀಡಿದರು.
ನೆರೆದಿದ್ದ ಭಕ್ತರು ಶ್ರೀ ಲಕ್ಷ್ಮಿನಾರಾ ಯಣನ ನಾಮಸ್ಮರಣೆ ಮುಗಿಲು ಮುಟ್ಟಿತು.ದೇವಾಲಯದ ಸುತ್ತಲೂ ಪ್ರದಕ್ಷಿಣೆ ಹಾಕಿ ಭಕ್ತಿಯ ಪ್ರದರ್ಶನ ಮಾಡಿ ಭಕ್ತಸಾಗರ ಜೊತೆಗೂಡಿ ಬ್ರಹ್ಮರಥೋತ್ಸವ ಎಳೆದು ಮಾತನಾಡಿ ಎಂ ಡಿ ಸಿ ಬ್ಯಾಂಕ್ ಉಪಾಧ್ಯಕ್ಷ ಹೆಚ್.ಕೆ ಅಶೋಕ್ ನಮ್ಮ ಹೊಸಹೊಳಲು ಗ್ರಾಮ ಸಾಂಸ್ಕೃತಿಕ ನೆಲೆ ಹೊಂದಿರುವ ವಿಶೇಷ ಗ್ರಾಮ. ಪ್ರತಿವರ್ಷವೂ ಅತ್ಯಂತ ವಿಜೃಂಭಣೆ ಯಿಂದ ಭಕ್ತಿ ಪೂರ್ವಕವಾಗಿ ಜಾತ್ರಾ ಮಹೋತ್ಸವವನ್ನು ಆಚರಿಸಲಾಗು ತ್ತದೆ. ಲಕ್ಷ್ಮೀ ನಾರಾಯಣಸ್ವಾಮಿ ದೇವರಿಗೆ ವಿಶೇಷವಾಗಿ ವಿವಿಧ ಬಗೆಯ ಹೂವಿನ ಅಲಂಕಾರ ಮಾಡಿ ವಿಶೇಷ ಪೂಜೆ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ಸಡಗರ ಸಂಭ್ರಮ ದಿಂದ ಆಚರಿಸಲಾಗುತ್ತದೆ.
ಲಕ್ಷ್ಮೀ ನಾರಾಯಣ ಸ್ವಾಮಿ ದೇವರ ಆಶೀರ್ವಾದದಿಂದ ನನ್ನ ಕ್ಷೇತ್ರ ಬರದಿಂದ ತತ್ತರಿಸುವ ರೈತರು ಒಳಿತಾಗಬೇಕು. ನಾಡಿಗೆ ಉತ್ತಮ ಮಳೆ,ಬೆಳೆ ಆಗುವಂತೆ ಕರುಣಿಸಲಿ ಹಾಗೂ ನಾಡಿನ ಜನರು ಸಮೃದ್ಧಿಯ ಜೀವನ ನಡೆಸಲು ಆಶೀರ್ವಾದ ಮಾಡುವಂತೆ ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದರು.
ಜಾನಪದ ಕಲಾತಂಡಗಳ ನೃತ್ಯವು ರಥೋತ್ಸವ ಮತ್ತು ಜಾತ್ರಾ ಸೌಂದರ್ಯವನ್ನು ಹೆಚ್ಚಿಸಿದವು ಭಕ್ತರು ಶ್ರೀ ರಥದ ಕಳಸಕ್ಕೆ ಬಾಳೆಹಣ್ಣು ಹಾಗೂ ಜವನವನ್ನು ಎಸೆದು ಪುನೀತರಾದರು. ರಥೋತ್ಸವದಲ್ಲಿ ಭಾಗವಹಿಸಿದ್ದ ಭಕ್ತಾದಿಗಳಿಗೆ ಪುಳಿಯೊಗರೆ, ಮೊಸರನ್ನ, ಮಜ್ಜಿಗೆ ಪಾನಕ ಪ್ರಸಾದವನ್ನು ವಿತರಿಸಲಾಯಿತು.
ಡಿವೈಎಸ್ಪಿ ಚಲುವರಾಜು, ಇನ್ಸ್‌ಪೆಕ್ಟರ್ ಸುಮಾರಾಣಿ ನೇತೃತ್ವದಲ್ಲಿ ಹೊಸಹೊಳಲು ಜ್ರಾತ್ರೆ ಮತ್ತು ರಥೋತ್ಸವ ನಡೆಯುವ ಸ್ಥಳದಲ್ಲಿ ಮೊಕ್ಕಾಂ ಹೂಡಿ ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರು.
ಈ ಸಂದರ್ಭದಲ್ಲಿ ಶ್ರೀ ಲಕ್ಷ್ಮೀ ನಾರಾಯಣ ಸ್ವಾಮಿ ದೇವಾಲಯ ಸಮಿತಿಯ ಅಧ್ಯಕ್ಷ ರಾಮಚಂದ್ರು, ಪುರಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಆರ್.ರವೀಂದ್ರಬಾಬು, ಪುರಸಭಾ ಸದಸ್ಯರಾದ ಹೆಚ್.ಆರ್.ಲೋಕೇಶ್, ಹೆಚ್.ಎನ್.ಪ್ರವೀಣ್,ಕೆ.ಬಿ.ಮಹೇಶ್, ಶಾಸಕರ ಸಹೋದರ ಹೆಚ್.ಟಿ. ಲೋಕೇಶ್, ಗ್ರೇಡ್-2 ತಹಸೀಲ್ದಾರ್ ಲೋಕೇಶ್, ರಾಜಸ್ವ ನಿರೀಕ್ಷಕ ಜ್ಞಾನೇಶ್, ಗ್ರಾಮ ಆಡಳಿತ ಅಧಿಕಾರಿ ಜಗದೀಶ್, ಮುಖಂಡರಾದ ರಾಮೇಗೌಡ, ಚಿಕ್ಕೇಗೌಡ, ಡಾ.ಶ್ರೀನಿವಾಸ ಶೆಟ್ಟಿ, ಹೆಚ್.ಎಸ್. ಕೃಷ್ಣೇಗೌಡ, ಪ್ರಕಾಶ್, ಪುನೀತ್, ಕಾಂತರಾಜು,ಸೇರಿದಂತೆ ಸಾವಿರಾರು ಭಕ್ತಾಧಿಗಳು ಭಾಗವಹಿಸಿದ್ದರು.
*✍️ಸುದ್ದಿಯೊಂದಿಗೆ ಮನು ಮಾಕವಳ್ಳಿ ಕೆ ಆರ್ ಪೇಟೆ*