ವಿಜಯ ಸಂಘರ್ಷ ನ್ಯೂಸ್
ಭದ್ರಾವತಿ: ಹಳೇನಗರ ಪೊಲೀಸ್ ಠಾಣೆ ವ್ಯಾಪ್ತಿಯ ಸಿರಾಜ್ (40)ಎಂಬ ವ್ಯಕ್ತಿಯು ಫೆ.15 ರ ಸಂಜೆ 5 ಗಂಟೆ ಯಿoದ ಕಾಣೆಯಾಗಿದ್ದಾರೆ.
ಕಾಣೆಯಾದ ಸಿರಾಜ್ ಸಾಧಾರಣ ಮೈಕಟ್ಟು, ಕೋಲು ಮುಖ, ಕಪ್ಪು ಮೈಬಣ್ಣ, ಸುಮಾರು 5.6 ಅಡಿ ಎತ್ತರ, ಪ್ಯಾಂಟು ಶರ್ಟ್ ಧರಿಸಿರುತ್ತಾರೆ.
ಕುಡಿದ ಅಮಲಿನಲ್ಲಿ ಇದ್ದಂತೆ ನಡೆಯುತ್ತಿರುತ್ತಾರೆ. ಈ ರೀತಿಯ ವ್ಯಕ್ತಿಯು ಪತ್ತೆಯಾದಲ್ಲಿ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕೆಂದು ಹಳೇನಗರ ಪೊಲೀಸ್ ಠಾಣೆಯ ಠಾಣಾಧಿಕಾರಿ ತಿಳಿಸಿದ್ದಾರೆ.