ನ್ಯಾಯ ಬೆಲೆ ಅಂಗಡಿ ಮಾಲೀಕರ ಬೇಡಿಕೆಗಳ ಈಡೇರಿಕೆಗೆ ಸಚಿವರಲ್ಲಿ ಮನವಿ

ವಿಜಯ ಸಂಘರ್ಷ ನ್ಯೂಸ್ 

ಭದ್ರಾವತಿ: ಕರ್ನಾಟಕ ರಾಜ್ಯ ಸರ್ಕಾರಿ ಪಡಿತರ ವಿತರಕರ ಸಂಘದ ವತಿ ಯಿಂದ ನಗರ ನ್ಯಾಯ ಬೆಲೆ ಅಂಗಡಿ ಮಾಲೀಕರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಸಚಿವ ಕೆ.ಎಚ್ ಮುನಿಯಪ್ಪನವರಿಗೆ ಮನವಿ ಸಲ್ಲಿಸಿ ಒತ್ತಾಯಿಸಲಾಗಿದೆ.

ಸಂಘದ ಸಂಘಟನಾ ರಾಜ್ಯ ಕಾರ್ಯದರ್ಶಿ ಹಾಗೂ ಜಿಲ್ಲಾಧ್ಯಕ್ಷ ಸಿದ್ದಲಿಂಗಯ್ಯನವರ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು. 

2024ರ ಮಾರ್ಚ್ ತಿಂಗಳ ನ್ಯಾಯ ಬೆಲೆ ಅಂಗಡಿಯವರಿಗೆ ಬರಬೇಕಾದ ಕಮೀಷನ್ ಬಾಕಿ ಇದ್ದು, ತಕ್ಷಣ ನೀಡುವುದು, ನ್ಯಾಯಬೆಲೆ ಅಂಗಡಿ ಮಾಲೀಕರಿಗೆ ನೀಡುತ್ತಿರುವ ಕಮೀಷನ್ ಹಣ ಮುಖಾಂತರ ನೀಡುವಂತೆ ಕೋರಲಾಗಿದೆ, ನ್ಯಾಯಬೆಲೆ ಅಂಗಡಿಗಳು ತಿಂಗಳ 30 ದಿನಗಳು ಪೂರ್ತಿ ತೆಗೆಯಬೇಕೆಂಬ ಸರ್ಕಾರದ ನಿಯಮವಿದ್ದು, ಸರ್ಕಾರ ದಿಂದ ಜನರಿಗೆ ದಿನನಿತ್ಯ ಬಳಸುವ ಸಾಮಾಗ್ರಿಗಳಾದ ಎಣ್ಣೆ, ಸಕ್ಕರೆ, ತೊಗರಿ ಬೇಳೆ, ಕಡಲೆಕಾಳು, ಇತರೆ ಕಾಟನ್ ಬಟ್ಟೆಗಳಾದ ಪಂಚೆ, ಸೀರೆ ನ್ಯಾಯಯುತ ವಾದ ಬೆಲೆಗೆ ನೀಡಿದ್ದಲ್ಲಿ ನಮ್ಮ ಸ್ವಂತ ಹಣದಿಂದ ಸರ್ಕಾರಕ್ಕೆ ಭರ್ತಿ ಮಾಡಿ ಜನರಿಗೆ ನಿಗದಿತ ಬೆಲೆಗೆ ನೀಡುತ್ತೇವೆ. 

ಈ ಹಿನ್ನಲೆಯಲ್ಲಿ ಅಗತ್ಯ ಕ್ರಮ ಕೈಗೊಳ್ಳುವುದು ಹಾಗು 2018ರ ಸಾಲಿನಲ್ಲಿ ಇ-ಕೆವೈಸಿ ಹಣದ ಬಾಕಿ ಯಿದ್ದು, ನ್ಯಾಯಬೆಲೆ ಅಂಗಡಿ ಮಾಲೀಕರು ತಮ್ಮ ಕೆಲಸ ಶೇ:98ರಷ್ಟು ಸಂಪೂರ್ಣವಾಗಿ ಮಾಡಿದ್ದು, ಸರ್ಕಾರ ನಮಗೆ ಕೊಡಬೇಕಾದ ಕಮೀಷನ್ ಹಣ ಪ್ರಸಕ್ತ 2025ರ ಮಾರ್ಚ್ ತಿಂಗಳ ಒಳಗಾಗಿ ನೀಡುವಂತೆ ಮನವಿಯಲ್ಲಿ ಒತ್ತಾಯಿಸಲಾಗಿದೆ. 


ನಗರ ನ್ಯಾಯ ಬೆಲೆ ಅಂಗಡಿ ಮಾಲೀಕರ ಸಂಘದ ಅಧ್ಯಕ್ಷ ಎಸ್.ಆರ್ ನಾಗರಾಜ, ಎನ್. ರಾಜೇಂದ್ರ, ಕೃಷ್ಣಜಿರಾವ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು