ಮಹಿಳೆ ಆರೋಗ್ಯವಂತಳಾದರೆ ಸಮಾಜ ಆರೋಗ್ಯವಾಗಿರುತ್ತದೆ:ಡಾ: ವೀಣಾ ಭಟ್

ವಿಜಯ ಸಂಘರ್ಷ ನ್ಯೂಸ್ 
ಭದ್ರಾವತಿ: ಆರೋಗ್ಯವಂತ ಮಹಿಳೆ ಯಿಂದ ಸ್ವಾಧ್ಯ ಸಮಾಜದ ನಿರ್ಮಾಣ ಸಾಧ್ಯ. ನಮ್ಮ ನಡೆವಳಿಕೆಗಳು ಸರಿ ಇದ್ದರೆ ಎಲ್ಲವೂ ಸರಿ ಹೋಗುತ್ತದೆ ಎಂದು ವೈದ್ಯ ಸಾಹಿತಿ, ಸ್ತ್ರೀ ರೋಗ ತಜ್ಞರು ಕಿತ್ತೂರು ರಾಣಿ ಚನ್ನಮ್ಮ ರಾಜ್ಯ ಪ್ರಶಸ್ತಿ ವಿಜೇತೆ ಡಾ:ವೀಣಾ ಎಸ್ ಭಟ್ ಹೇಳಿದರು.

ಅವರು ತಾಲ್ಲೂಕಿನ ಗೌರಾಪುರದ ಗಣೇಶ ಸಮುದಾಯ ಭವನದಲ್ಲಿ ಕರ್ನಾಟಕ ರಾಜ್ಯ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ತಾಲ್ಲೂಕು ಘಟಕದ ವತಿಯಿಂದ ಆಯೋಜಿ ಸಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಕಾರ್ಯಕ್ರಮದಲ್ಲಿ ಪ್ರಧಾನ ಉಪನ್ಯಾಸ ನೀಡಿದರು.

ಸರಿಯಾದ ಜೀವನ ಕ್ರಮದಿಂದ ಮಾತ್ರ ನಮ್ಮ ಆರೋಗ್ಯವೇ ಹೊರತು ಔಷಧಿ ಮಾತ್ರೆಗಳಿo ದಲ್ಲ.ಕೃತಕ ಪಾನೀಯಗಳ ಬಳಕೆ ಆರೋಗ್ಯದ ಮೇಲೆ ದುಷ್ಪರಿ ಣಾಮ ಬೀರುವ ಸಾಧ್ಯತೆ ಇದೆ ಎಂದರು.

ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮನ್ವಯಾಧಿಕಾರಿ ವಿ.ಹೆಚ್. ಪಂಚಾಕ್ಷರಿ ಕಾರ್ಯಕ್ರಮ ಉಧ್ವಾಟಿಸಿ ಮಾತನಾಡಿ, ಮಹಿಳೆರಿಂದಲೆ ಸಂಸ್ಕೃತಿ ದೇಶದ ಬುನಾದಿ ಮಹಿಳಾ ಶಿಕ್ಷಕಿ ಯರಿಂದಲೇ ಹೆಚ್ಚಿನ ಕಾಳಜಿಯುಕ್ತ ಮಕ್ಕಳ ಶೈಕ್ಷಣಿಕ ಅಭಿವೃದ್ಧಿ ಸಾಧ್ಯವೆಂದರು.

ರಾಜ್ಯ ಸರ್ಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಲೇಶ್ ನವುಲೆ ಸರ್ವಜ್ಞನ ವಚನಗಳನ್ನು ಉಲ್ಲೇಖಿಸಿ ಮಾತನಾಡಿ, ಮಹಿಳಾ ಸಬಲಿ ಕರಣ ಇಂದಿನ ಅಗತ್ಯ ವೆಂದರು.

ಜಿಲ್ಲಾ ಗ್ರಾಮೀಣ ಪ್ರಾ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸತೀಶ್ ಪಿ.ಕೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಗೌರವಾಧ್ಯಕ್ಷ ಕೋಗಲೂರು ತಿಪ್ಪೇಸ್ವಾಮಿ ಪಾಸ್ತಾವಿಕ ನುಡಿಗಳನ್ನಾಡಿದರು.

ಈ ಸಂದರ್ಭದಲ್ಲಿ ತಾಲ್ಲೂಕಿನ ಐದು ವಿಭಾಗಗಳಿಂದ ಐದು ಗ್ರಾಮೀಣ ಸಾಧಕಿಯರಾದ ಅನಿತಾ ಮೇರಿ,
ವೀಣಾ,ಲತಾ, ಬೇಬಿ, ಜ್ಞಾನ ಪೂರ್ಣಮ್ಮ ಮತ್ತು ಭಾಗ್ಯಲಕ್ಷ್ಮಿ ಯವರಿಗೆ ಪ್ರಶಸ್ತಿಯ ದಾನಿ ನಿವೃತ್ತ ಶಿಕ್ಷಕ ರಂಗಪ್ಪ ಸನ್ಮಾನಿಸಿದರು.

ವೈ ಜಗದೀಶ್ ಅತಿಥಿ ವೀಣಾಭಟ್ ರವರ ಪರಿ ಚಯಿಸಿದರು. ಆರಂಭದಲ್ಲಿ ಶ್ರೀದೇವಿ ಶಿಕ್ಷಕಿ ಪ್ರಾರ್ಥಿಸಿ, ಸ್ವಾಗತಿಸಿದರು. ಜೆ.ಎಚ್.ರಮೇಶ್ ವoದಿಸಿದರು.

ಉದ್ಯಮಿ ಬಿ.ಕೆ.ಜಗನ್ನಾಥ, ಪ್ರಮುಖ ರಾದ ಎಲ್ ಓ ಲೋಕೇಶ, ಶಕುಂತಲಾ, ರಂಗನಾಥ, ಮಂಜುನಾಥ ಎನ್ ಡಿ ಹನುಮಂತಪ್ಪ ಉಪಸ್ಥಿತರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು