ವಿಜಯ ಸಂಘರ್ಷ ನ್ಯೂಸ್
ಕೆ.ಆರ್.ಪೇಟೆ: ಡಾ:ಬಿ.ಆರ್. ಅಂಬೇಡ್ಕರ್ ಅವರು ಒಂದು ಸಮುದಾಯದ ನಾಯಕರು ಎನ್ನುವ ರೀತಿಯಲ್ಲಿ ಬಿಂಬಿಸ ಲಾಗುತ್ತಿದೆ. ಅವರ ಬಗ್ಗೆ ಕೆಲವರಲ್ಲಿ ತಪ್ಪು ಕಲ್ಪನೆ ಗಳಿವೆ.ಅವರು ಜಾತಿ, ಸಮುದಾಯ ಮೀರಿ ಬೆಳೆದವರು. ಜಾತಿ ಪದ್ಧತಿ ವಿರುದ್ಧ ಹೋರಾಡಿ ಸಂವಿಧಾನದಲ್ಲಿ ಆ ಬಗ್ಗೆ ಕಾನೂನುಗಳನ್ನೇ ರೂಪಿಸಿದ್ದಾರೆ ಎಂದು ಸಮಾಜ ಸೇವಕ ಆರ್.ಟಿ.ಓ ಮಲ್ಲಿಕಾರ್ಜುನ್ ಹೇಳಿದರು.
ತಾಲ್ಲೂಕಿನ ಶೀಳನೆರೆ ಹೋಬಳಿಯ ರಾಜಘಟ್ಟ ಗ್ರಾಮದಲ್ಲಿ ಸಂವಿಧಾನ ಶಿಲ್ಪಿ ಡಾ: ಬಿ.ಆರ್.ಅಂಬೇಡ್ಕರ್ ಅವರ 134 ನೇ ಜಯಂತೋತ್ಸವದ ಪ್ರಯುಕ್ತ ಗ್ರಾಮದ ಬಿ.ಆರ್ ಅಂಬೇಡ್ಕರ್ ಯುವ ಬಳಗದ ನೂತನ ಸಂಘದ ನಾಮಫಲಕವನ್ನು ಅನಾವರಣಗೊಳಿಸಿದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಅಂಬೇಡ್ಕರ್ ಅವರ ಬಗ್ಗೆ ಅರ್ಥ ಮಾಡಿಕೊಳ್ಳ ಬೇಕಾದರೆ ಅವರ ಹೋರಾಟದ ಜೀವನದಲ್ಲಿ ಅವರು ಅನುಭವಿಸಿದ ಸನ್ನಿವೇಶಗಳನ್ನು ಅರ್ಥಮಾಡಿಕೊಳ್ಳಬೇಕಿದೆ.ರಾಜಕೀಯ ಸ್ವಾತಂತ್ರ್ಯ, ಆರ್ಥಿಕ ಸಮಾನತೆ ಗಿಂತ ಸಾಮಾಜಿಕ ಸಮಾನತೆ ಅತಿ ಮುಖ್ಯವಾಗಿತ್ತು ಎಂದು ಪ್ರತಿಪಾದಿಸಿದ ಅವರು ಪ್ರಸ್ತುತ ರಾಷ್ಟ್ರ ಸಾಮಾಜಿಕ, ಆರ್ಥಿಕ ಪ್ರಗತಿ ಸಾಧಿಸಿದೆ. ಅದರ ಹಿಂದೆ ಅಂಬೇಡ್ಕರ್ ಅಂತ ಮಹಾನ್ ನಾಯಕರ ಶ್ರಮ ಪಾಂಡಿತ್ಯ ಅಡಗಿದೆ ಎನ್ನುವುದನ್ನು ಅರಿಯಬೇಕು. ಅವರ ತತ್ತ್ವ ಆದರ್ಶ ನಮ್ಮೆಲ್ಲರಿಗೂ ಸ್ಫೂರ್ತಿಯಾಗಬೇಕು ಎಂದರು.
ಸಮಾಜ ಸೇವಕ ಆರ್.ಟಿ.ಓ ಮಲ್ಲಿಕಾರ್ಜುನ್ ಗ್ರಾಮಕ್ಕೆ ಆಗಮಿಸುತ್ತಿದ್ದಂತೆ ಕಾರ್ಯಕ್ರಮದ ವೇದಿಕೆಯವರೆಗೂ ತಮಟೆ ವಾದ್ಯದ ಮೂಲಕ ಪಟಾಕಿ ಸಿಡಿಸಿ ಅದ್ದೂರಿ ಯಾಗಿ ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಕೆ.ಆರ್.ಪೇಟೆ ತಾಲ್ಲೂಕು ಛಲವಾದಿ ಮಹಾಸಭಾ ವೇದಿಕೆಯ ಅಧ್ಯಕ್ಷ ಹುಚನಹಳ್ಳಿ ನಟರಾಜು,ಹಿರಿಯ ಮುಖಂಡ ರಾದ ಚೋಟಯ್ಯ,ಸ್ವಾಮಿಯ್ಯ ,ತಮ್ಮಣ್ಣ, ಮುನಿಯಯ್ಯ,ರಂಗಸ್ವಾಮಿ,ಶಿವರಾಜು,
ಯುವ ಮುಖಂಡ ವಿವೇಕ್, ಹರೀಶ್ ಪ್ರೇಮ್ ಕುಮಾರ್, ಸೇರಿದಂತೆ ಉಪಸ್ಥಿತರಿದ್ದರು.
*✍️ಸುದ್ದಿಯೊಂದಿಗೆ ಮನು ಮಾಕವಳ್ಳಿ ಕೆ ಆರ್ ಪೇಟೆ*
Tags
ಕೆ ಆರ್ ಪೇಟೆ ವರದಿ