ಮಹಿಳೆ ಕಾಣೆಯಾಗಿದ್ದಾರೆ

ವಿಜಯ ಸಂಘರ್ಷ ನ್ಯೂಸ್ 
ಭದ್ರಾವತಿ: ಹಳೇನಗರ ಪೊಲೀಸ್ ಠಾಣೆ ವ್ಯಾಪ್ತಿಯ ಭದ್ರಾವತಿ ಸಿದ್ಧಾರೂಢನಗರ ಮಾತೃಶ್ರಿ ನಿಲಯ ವಾಸಿ ಬಿ.ಎಸ್. ನವೀನ್‌ ಕುಮಾರ್ ಎಂಬುವವರ ತಾಯಿ ಲಲಿತಮ್ಮ (70) ಎಂಬ ಮಹಿಳೆ ಮನೆಯಿಂದ ಏ. 08 ರಂದು ಹೊರಗೆ ಹೋದವರು ಈವರೆಗೂ ವಾಪಸ್ಸು ಬಂದಿರುವುದಿಲ್ಲ.

ಈಕೆಯ ಚಹರೆ 5.2 ಅಡಿ ಎತ್ತರ, ಸಾಧಾರಣ ಮೈಕಟ್ಟು, ಕೋಲುಮುಖ, ಎಣ್ಣೆಗೆಂಪು ಮೈಬಣ್ಣ ಹೊಂದಿದ್ದು, ಹಣೆಯ ಮೇಲೆ ಸಾಸಿವೆ ಕಾಳು ಗಾತ್ರದ 3 ಕಪ್ಪು ಮಚ್ಚೆ ಇರುತ್ತದೆ. ಮೈಮೇಲೆ ಬಿಳಿ ಹೂವಿನ ಕೆಂಪು ಬಣ್ಣದ ನೈಟಿ ಧರಿಸಿದ್ದು, ಕೈಯಲ್ಲಿ 4 ಕಾಲಿನ ಸಿಲ್ವರ್ ವಾಕಿಂಗ್ ಸ್ಟಿಕ್ ಇರುತ್ತದೆ. 

ಈ ಮಹಿಳೆಯ ಕುರಿತು ಯಾವುದೇ ಮಾಹಿತಿ ಸಿಕ್ಕಲ್ಲಿ ಭದ್ರಾವತಿ ಹಳೇನಗರ ಪೊಲೀಸ್ ಠಾಣೆಯನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸ್ ಪ್ರಕಟಣೆ ತಿಳಿಸಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು