ಪಹಲ್ಗಾಮ್ ಉಗ್ರರ ದಾಳಿ: ಹುತಾತ್ಮರಿಗೆ ಕ್ರೈಸ್ತ ಬಾಂಧವರಿಂದ ಶ್ರದ್ದಾಂಜಲಿ ಸಭೆ

ವಿಜಯ ಸಂಘರ್ಷ ನ್ಯೂಸ್ 
ಭದ್ರಾವತಿ: ಅಖಿಲ ಭಾರತ ಕ್ರೈಸ್ತ ಮಹಾಸಭಾ ಮತ್ತು ಭದ್ರಾವತಿ ಸಂಯುಕ್ತ ಕ್ರೈಸ್ತ ಬಾಂಧವ ರಿಂದ ಜಮ್ಮು ಕಾಶ್ಮೀರದಲ್ಲಿ ಉಗ್ರರ ದಾಳಿಗೆ ಹುತಾತ್ಮರಿಗೆ ಹಾಗೂ ಕ್ರೈಸ್ತರ ಜಗದ್ಗುರುಗಳಾದ ಪೋಪ್ ಫ್ರಾನ್ಸಿಸ್ ರವರ ಸಂತಾಪ ಹಾಗೂ ಖಂಡನೀಯ ಸಭೆ ನಡೆಯಿತು. 

ನಗರದ ಅಂಡರ್ ಬ್ರಿಡ್ಜ್ ಸಮೀಪದ ಡಾ: ಬಿ.ಆ‌ರ್.ಅಂಬೇಡ್ಕರ್ ಪುತ್ತಳಿ ಮುಂಭಾಗ ದಲ್ಲಿ ಏರ್ಪಡಿಸಲಾಗಿದ್ದ ಸಭೆಯಲ್ಲಿ ಸಂಯುಕ್ತ ಕ್ರೈಸ್ತ ಸಂಘದ ಅಧ್ಯಕ್ಷ ಸೆಲ್ವರಾಜ್, ಅಖಿಲ ಭಾರತ ಕ್ರೈಸ್ತ ಮಹಾಸಭಾ ಜಿಲ್ಲಾಧ್ಯಕ್ಷ ಸುರೇಶ್ ನಾಯ್ಕ,ರೆಮಂಡ್, ಜೋಸೆಫ್, ಸ್ಟೀಫನ್ ಕ್ರಿಸ್ಟೋಫ‌ರ್ ಇನ್ನಿತರರು ಮಾತನಾಡಿದರು. 
ವಿವಿಧ ಚರ್ಚ್ ಗಳ ಫಾದರ್ ಗಳು, ಪ್ರಮುಖರು,ನೂರಾರು ಸಮಾಜದ ಭಾಂದವರು ಭಾಗವಹಿಸಿದ್ದರು. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು