ವಿಜಯ ಸಂಘರ್ಷ ನ್ಯೂಸ್
ಭದ್ರಾವತಿ: ಮುಸ್ಸಂಜೆ ಹೊತ್ತಲ್ಲಿ ಐವರು ಯುವಕರ ಗುಂಪೊoದು ಕಾರಲ್ಲಿ ಬಂದು ಬೈಕ್ ಸವಾರರೀರ್ವ ರಿಗೆ ಲಾಂಗು,ಮಚ್ಚುಗಳಿoದ ಹಲ್ಲೆಗೆ ಯತ್ನಿಸಿರುವ ಘಟನೆ ನಡೆದಿದೆ.
ನಗರದ ಹಳದಮ್ಮನ ಬೀದಿ ವಾಸಿ ಗಳಾದ ವಿಶ್ವ ಯಾನೆ ಮುದ್ದೆ ಮತ್ತು ಸಂದೀಪ ಎನ್ನುವವರು ಶುಕ್ರವಾರ ಸಂಜೆ ಬೈಕಿನಲ್ಲಿ ಕುಳಿತು ಕಂಚಿಬಾಗಿಲ ವೃತ್ತದ ಮೂಲಕ ಹಾದು ಹೋಗುತ್ತಿ ದ್ದಾಗ ಕಾರೊಂದರಲ್ಲಿ ಬಂದ ಐವರು ಯುವಕರಗುಂಪು ಬೈಕಿನ ಹಿಂಬಾಗಕ್ಕೆ ಡಿಕ್ಕಿಹೊಡೆದಾಗ ಬೈಕ್‌ನಿಂಧ ವಿಶ್ವ ಮತ್ತು ಸಂದೀಪ ಕೆಳಗೆಬಿದ್ದಿದ್ದಾರೆ, ಕಾರಲ್ಲಿಬಂದವರು ಕಾರಿಂದ ಕೆಳಗಿಳಿದು ಕೈಯಲ್ಲಿ ಮಚ್ಚು,ಲಾಂಗುಗಳನ್ನು ಹಿಡಿದುಕೊಂಡು ವಿಶ್ವ ಮತ್ತು ಸಂದೀಪರ ಮೇಲೆ ಹಲ್ಲೆಗೆ ಪ್ರಯತ್ನಿಸಿ ದಾಗ ಇಬ್ಬರು ಹಲ್ಲೆಯಿಂದ ತಪ್ಪಿಸಿ ಕೊಂಡಿದ್ದಾರೆ. ಘಟನಾ ಸ್ಥಳಕ್ಕೆ ಜನ ಸೇರುತ್ತಿದ್ದಂತೆ ಕಾರಲ್ಲಿ ಬಂದ ಐವರು ಕಾರಲ್ಲಿ ಕುಳಿತು ಪರಾರಿಯಾಗಿದ್ದಾರೆ.
ಹಲ್ಲೆಯಿಂದ ತಪ್ಪಸಿಕೊಂಡ ವಿಶ್ವ ಮತ್ತು ಸಂದೀಪ ಅವರುಗಳಿಗೆ ಕಾರು ಬೈಕಿಗೆ ಗುದ್ದಿದ ಪರಿಣಾಮ ಕೆಳಗೆ ಬಿದ್ದು ಸಣ್ಣ ಪುಟ್ಟ ಪೆಟ್ಟಾಗಿದ್ದು, ಅವರಿಬ್ಬರು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾ ಗಿದ್ದು, ಘಟನೆ ಕುರಿತಂತೆ ಹಳೇನಗರ ಪೋಲಿಸ್ ಠಾಣೆಯಲ್ಲಿ ದೂರುದಾಖಲಾಗಿದೆ. ಹಲ್ಲೆಗೆಯತ್ನಿಸಿ ಪರಾರಿ ಯಾದವರ ಪತ್ತೆಗಾಗಿ ಪೋಲಿಸರು ಕಾರ್ಯಾ ಚರಣೆ ಕೈಗೊಂಡಿದ್ದಾರೆ.
ಈ ಎರಡು ತಂಡಗಳ ನಡುವೆ ಕೆಲವು ತಿಂಗಳ ಹಿಂದೆ ತರಿಕೆರೆ ರಸ್ತೆಯಲ್ಲಿ ನಡೆದ ಹೊಡೆದಾಟದ ಸಂಬoಧ ಪ್ರತಿಕಾರಕ್ಕಾಗಿ ಈ ಘಟನೆ ನಡೆದಿದೆ ಎನ್ನಲಾಗಿದ್ದು,ಪೋಲಿಸರ ತನಿಖೆ ಯಿಂದ ಸತ್ಯಾಂಶ ತಿಳಿದುಬರಬೇಕಿದೆ.
Tags
ಭದ್ರಾವತಿ ಕ್ರೈಮ್ ವರದಿ