ಶಿವಮೊಗ್ಗ-ಡೆಂಗ್ಯೂ ಸೋಲಿಸಲು ಸ್ವಚ್ಛಗೊಳಿಸಿ-ಮುಚ್ಚಿಡಿ:ಡಾ: ಕೆ.ಎಸ್. ನಟರಾಜ್

ವಿಜಯ ಸಂಘರ್ಷ ನ್ಯೂಸ್ 
ಶಿವಮೊಗ್ಗ: ಡೆಂಗ್ಯೂ ಮತ್ತು ಚಿಕನ್ ಗುನ್ಯಾ ರೋಗಗಳು ಹೆಚ್ಚಾಗಿ ವರದಿ ಯಾಗುತ್ತಿವೆ. ಸೊಳ್ಳೆಗಳ ಉತ್ಪತ್ತಿ ತಾಣಗಳಾದ ಸಿಮೆಂಟ್ ತೊಟ್ಟಿಗಳು ಟೈರ್ ಗಳು ಬ್ಯಾರೆಲ್ ಗಳು ನಿರ್ಮಾಣ ಹಂತದಲ್ಲಿ ಇರುವ ಕಟ್ಟಡಗಳು ಮತ್ತು ಘನ ತ್ಯಾಜ್ಯ ವಸ್ತುಗಳಲ್ಲಿ ನೀರು ನಿಂತು ಡೇಂಗ್ಯೂ ಮತ್ತು ಚಿಕನ್ ಗುನ್ಯಾ ಹರಡುವ ಸೊಳ್ಳೆಗಳ ಯಥೇಚ್ಛವಾಗಿ ಉತ್ಪತ್ತಿಯಾಗುತ್ತಿವೆ. ಆದ್ದರಿಂದ ಮಳೆಗಾಲ ಪ್ರಾರಂಭವಾಗುತ್ತಿರು ವುದರಿಂದ ಡೆಂಗ್ಯೂ ಹಾಗೂ ಚಿಕನ್ ಗುನ್ಯಾ ರೋಗಗಳು ಹರಡುವ ಸಾಧ್ಯತೆ ಹೆಚ್ಚಾಗಿರುತ್ತದೆ ಆದ್ದರಿಂದ ಇವುಗಳನ್ನು ನಿಯಂತ್ರಿಸಲು ಮುಂಜಾಗ್ರತಾ ಕ್ರಮ ವನ್ನು ತೆಗೆದುಕೊಳ್ಳುವುದು ತುಂಬಾ ಅತ್ಯಗತ್ಯ ಎಂದು ಜಿಲ್ಲಾ ಕುಟುಂಬ ಕಲ್ಯಾಣ ಮತ್ತು ಆರೋಗ್ಯ ಇಲಾಖೆಯ ಅಧಿಕಾರಿ ಡಾ: ಕೆ.ಎಸ್. ನಟರಾಜ್ ಅಭಿಪ್ರಾಯಪಟ್ಟರು.

ಅವರು ಶುಕ್ರವಾರ ರಾಷ್ಟ್ರೀಯ ಡೇಂಗಿ ದಿನಾಚರಣೆಯ ಅಂಗವಾಗಿ ಬಾಪೂಜಿ ಆಯುರ್ವೇದಿಕ್ ಕಾಲೇಜಿನಲ್ಲಿ ಜನ ಜಾಗೃತಿ ಜಾಥಕ್ಕೆ ಚಾಲನೆ ನೀಡಿ ಮಾತನಾಡಿ, ಡೆಂಗಿ ನಿಯಂತ್ರಣ ಪ್ರತಿಯೊಬ್ಬನ ಜವಾಬ್ದಾರಿ ಪ್ರತಿಯೊಬ್ಬ ನಾಗರಿಕರು ತಮ್ಮ ಸುತ್ತಮುತ್ತ ಇರುವ ನೀರಿನ ಸಂಗ್ರಹಗಳನ್ನು ಸ್ವಚ್ಛಗೊಳಿಸಿ ಮುಚ್ಚಿಡುವ ಮುಖಾಂತರ ಡೆಂಗಿ ನಿಯಂತ್ರಿಸಲು ಸಹಕರಿಸಬೇಕೆಂದು ಕರೆ ನೀಡಿದರು. 

ಜಿಲ್ಲಾ ಆಶ್ರಿತ ರೋಗವಾಹಕ ರೋಗ ಗಳ ನಿಯಂತ್ರಣ ಅಧಿಕಾರಿ ಡಾ:ಗುಡದಪ್ಪ ಕಸಬಿ ಮಾತನಾಡಿ, ಡೆಂಗಿ ರೋಗವು ವೈರಸ್ ನಿಂದ ಬರುವ ಕಾಯಿಲೆಯಾಗಿದ್ದು ಈಡೀಸ್ ಈಜಿಪ್ಟ್ ಎಂಬ ಹೆಣ್ಣ ಸೊಳ್ಳೆ ಕಚ್ಚುವುದರ ಮುಖಾಂತರ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ ಈಡೀಸ್ ಈಜಿಪ್ಟ್ ಸೊಳ್ಳೆಯು ಸ್ವಚ್ಛವಾದ ನೀರಿನಲ್ಲಿ ಉತ್ಪತ್ತಿಯಾಗುವ ಸೊಳ್ಳೆ ಯಾಗಿದ್ದು ಮನೆಯ ಒಳಾಂಗಣ ಹಾಗೂ ಹೊರಾಂಗಣದಲ್ಲಿ ಸಂಗ್ರಹ ವಾಗುವ ನೀರಿನ ಮೂಲಗಳನ್ನು ಪರಿಶೀಲಿಸಿ ಸ್ವಚ್ಛಗೊಳಿ ಸುವ ಮುಖಾಂತರ ಡೆಂಗಿ ನಿಯಂತ್ರಿಸಲು ಸಹಕರಿಸಬೇಕು ಎಂದು ತಿಳಿಸಿದರು. 

ಈ ಜಾಗೃತಿ ಜಾತದಲ್ಲಿ ಬೆಂಗಳೂರಿನ ಜಂಟಿ ನಿರ್ದೇಶಕರ ಕಚೇರಿಯ ವೀಕ್ಷಕರಾಗಿ ಆಗಮಿಸಿದ ದಯಾನಂದ್ ಮಾತನಾಡುತ್ತಾ ಸೊಳ್ಳೆ ಉತ್ಪತ್ತಿ ತಾಣಗಳನ್ನು ನಿರ್ಮೂಲನೆ ಮಾಡುವುದರ ಮುಖಾಂತರ ಡೆಂಗಿ ನಿಯಂತ್ರಣದಲ್ಲಿ ಕೈಜೋಡಿಸಬೇಕು ಎಂದು ಕರೆ ನೀಡಿದರು.

ಬಾಪೂಜಿ ಆಯುರ್ವೇದಿಕ್ ಕಾಲೇಜಿನ ಅಧ್ಯಕ್ಷ ಎಂ.ವಿ.ಪಿ.ಆರಾಧ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ನಾರಾಯಣ್, ತಿಪ್ಪೇಸ್ವಾಮಿ ಯಜುರ್ವೇದ, ಬಾಪೂಜಿ ವಿದ್ಯಾ ಸಂಸ್ಥೆಯ ಪಂಕಜ್ ಪ್ರಸಾದ್, ಡಾ:ಕವಿತಾ,ಡಾ: ಶೀಲಾ,ಡಾ:ಸ್ವಾತಿ, ಡಾ:ಚಂದ್ರಶೇಖರ್,ರೋಟರಿ ಮಲೆನಾಡು ಕ್ಲಬ್ಬಿನ ಅಧ್ಯಕ್ಷ ಮುಕ್ತ ಆಲಿ,ಆರೋಗ್ಯ ಇಲಾಖೆಯ ಸಿಬ್ಬಂದಿಗಳು, ಕಾರ್ಯಕರ್ತರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. 

ಜಾಗೃತಿ ಜಾತಾವು ಆಯುರ್ವೇದ ಕಾಲೇಜಿ ನಿಂದ ಮುಖ್ಯ ರಸ್ತೆಯಲ್ಲಿ ತೆರಳಿ ನವುಲೇ ಹಾಗೂ ವಿವಿಧ ಬಡಾವಣೆಗಳಲ್ಲಿ ಜಾಗೃತಿ ಮೂಡಿಸಿತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು