ಭದ್ರಾವತಿ-ಎಂಪಿಎಂ ಶಿಕ್ಷಣ ಸಂಸ್ಥೆ:ಕಡಿಮೆ ಶುಲ್ಕ ಉತ್ತಮ ಶಿಕ್ಷಣ

ವಿಜಯ ಸಂಘರ್ಷ ನ್ಯೂಸ್
ಭದ್ರಾವತಿ: ಎಂಪಿಎಂ ಶಿಕ್ಷಣ ಸಂಸ್ಥೆ
ಆಶ್ರಯದಲ್ಲಿ ಪೇಪರ್ ಟೌನ್ ಆಂಗ್ಲ ಶಾಲೆ ಹಾಗೂ ಸ್ವತಂತ್ರ ಪದವಿಪೂರ್ವ ಕಾಲೇಜು ದೀರ್ಘ ಕಾಲದಿಂದ ಅಸ್ಥಿತ್ವ ದಲ್ಲಿದ್ದು ಸಾವಿರಾರು ವಿದ್ಯಾರ್ಥಿ ಗಳ ಭವಿಷ್ಯ ರೂಪಿಸುವಲ್ಲಿ ಯಶಸ್ವಿ ಯಾಗಿರುತ್ತದೆ.

 ಶಾಲಾ-ಕಾಲೇಜಿನಲ್ಲಿ ನುರಿತ ಬೋಧಕ ಸಿಬ್ಬಂದಿಗಳಿದ್ದು, ಉತ್ತಮ ಪರಿಸರದಿಂದ ಕೂಡಿದ್ದು, ಪ್ರತಿ ವರ್ಷ ಉತ್ತಮ ಫಲಿತಾಂಶ ನೀಡುತ್ತಾ ಬಂದಿದೆ.

ಪೇಪರ್ ಟೌನ್ ಪ್ರೌಢ ಶಾಲೆ ಪುನರಾರಂಭಗೊಳ್ಳುವ ನಿರೀಕ್ಷೆಯಿದ್ದು, ಶಿಕ್ಷಣ ಸಂಸ್ಥೆಗೂ ಇದಕ್ಕೂ ಯಾವುದೇ ಸಂಬಂಧವಿರುವುದಿಲ್ಲ. ವಿದ್ಯಾರ್ಥಿ ಗಳಿಗೆ ಅತ್ಯಂತ ಕಡಿಮೆ ಶುಲ್ಕ ನಿಗಧಿ ಪಡಿಸಲಾಗಿದ್ದು, ಮೇಲ್ಕಂಡ ಶಿಕ್ಷಣ ಸಂಸ್ಥೆಗಳಲ್ಲಿ ದಾಖಲಾತಿ ಪ್ರಕ್ರಿಯೆ ಮುಂದುವರೆದಿದೆ ಎಂದು ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು