ಭದ್ರಾವತಿ-ಸ್ಥಗಿತಗೊಂಡ ಮೆಸ್ಕಾಂ ವಿದ್ಯುತ್ ಬಿಲ್ ಕೌಂಟರ್(ಎಟಿಪಿ) ಆರಂಭಕ್ಕೆ ಒತ್ತಾಯ

ವಿಜಯ ಸಂಘರ್ಷ ನ್ಯೂಸ್ 
ಭದ್ರಾವತಿ: ನಗರದ ಜನ್ನಾಪುರ, ಎನ್.ಟಿ.ಬಿ. ಕಛೇರಿ ಆವರಣದಲ್ಲಿ 40 ವರ್ಷದಿಂದ ಮೆಸ್ಕಾಂ ವಿದ್ಯುತ್ ಬಿಲ್ ಪಾವತಿಸುವ ಕೌಂಟರ್ ಇಲಾಖೆ ಯಿಂದ ಸ್ಥಗಿತಗೊಂಡಿರು ವುದರಿಂದ ಈ ಭಾಗದ ಜನರಿಗೆ ಅನಾನುಕೂಲ ವಾಗಿದ್ದು ಕೂಡಲೇ ಪುನರ್ ಸ್ಥಾಪಿಸು ವಂತೆ ನಗರಸಭಾ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಆರ್. ವೇಣು ಗೋಪಾಲ್ ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ. 

ಈ ಭಾಗದಲ್ಲಿ ಅನೇಕ ಕೊಳಚೆ ಪ್ರದೇಶಗಳಿದ್ದು ಹೆಚ್ಚಿನಾoಶ ಬಡತನ ರೇಖೆಗಿಂತ ಕೆಳಮಟ್ಟದಲ್ಲಿರುವ ಅನಕ್ಷರಸ್ತರಾಗಿರುವುದರಿಂದ ಮೊಬೈಲ್ ನಲ್ಲಿ ವಿದ್ಯುತ್ ಬಿಲ್ ಪಾವತಿಸುವ ಬಗ್ಗೆ ತಿಳುವಳಿಕೆ ಇಲ್ಲದ್ದಾಗಿದೆ. ಅಲ್ಲದೆ ಸ್ಥಳೀಯ ನಿವಾಸಿಗಳು ಬಿಲ್ ಕಟ್ಟಲು ದೂರ ಕ್ರಮಿಸಬೇಕಿದೆ. ಈ ಹಿನ್ನಲೆಯಲ್ಲಿ ಸ್ಥಗಿತ ಗೊಂಡಿರುವ ಕೌಂಟರ್ ನ್ನು ಪುನಃ ಆರಂಭಿಸುವಂತೆ ಮನವಿಯಲ್ಲಿ ಒತ್ತಾಯಿಸಿದ್ದಾರೆ.

ವಯೋವೃದ್ದರು, ಮಹಿಳೆಯರು ಮಳೆಗಾಲ ಹಾಗೂ ಬೇಸಿಗೆ ಕಾಲದಲ್ಲಿ ಬಿಲ್ ಕಟ್ಟಲು ತೊಂದರೆಯಾಗುತ್ತಿರು ವುದರಿಂದ ಇವರು ಗಳಿಗೆ ಅನುಕೂಲ ಕಲ್ಪಿಸುವ ದೃಷ್ಟಿಯಿಂದ ಈ ಹಿಂದೆ ಜನ್ನಾಪುರ ಎನ್.ಟಿ.ಬಿ. ಕಛೇರಿಯಲ್ಲಿ ವಿದ್ಯುತ್ ಬಿಲ್ ಪಾವತಿಸುವ ಕೌಂಟರ್ ಕಾರ್ಯಾರಂಭ ಆಗಿರುವ ರೀತಿಯಲ್ಲೇ ಸದರಿ ಕಛೇರಿಯಲ್ಲಿ ತುರ್ತಾಗಿ ವಿದ್ಯುತ್ ಬಿಲ್ ಪಾವತಿಸುವ ಕೌಂಟರ್‌ನ್ನು ಪ್ರಾರಂಭಿಸುವುದರ ಬಗ್ಗೆ ಅಗತ್ಯ ಕ್ರಮ ತೆಗೆದುಕೊಳ್ಳುವಂತೆ ಮನವಿಯಲ್ಲಿ ಕೊರಿದ್ದಾರೆ. 

ಕ್ಷೇತ್ರ ವ್ಯಾಪ್ತಿ ಸಿಂಗನಮನೆ, ತ್ಯಾವರ ಘಟ್ಟ, ಕಂಬದಾಳು ಹೊಸೂರು, ಗ್ರಾಮ ಪಂಚಾಯತ್ ವ್ಯಾಪ್ತಿಯ ಹಳ್ಳಿಗಳಲ್ಲಿ ವಿದ್ಯುತ್‌ ಸರಬರಾಜಿನಲ್ಲಿ ವ್ಯತ್ಯೆಯ ಆಗುತ್ತಿರುವುದರಿಂದ ಗ್ರಾಮಸ್ಥರಿಗೆ. ರೈತರಿಗೆ, ಶಾಲಾ ಕಾಲೇಜು ವಿದ್ಯಾರ್ಥಿ/ವಿದ್ಯಾರ್ಥಿನಿ ಯರಿಗೆ ತೊಂದರೆ ಆಗುತ್ತಿರುವುದರಿಂದ ಸದರಿ ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಹಳ್ಳಿಗಳಲ್ಲಿ ಗ್ರಾಮಸ್ಥರಿಗೆ, ರೈತರಿಗೆ ಶಾಲಾ ಕಾಲೇಜು ವಿದ್ಯಾರ್ಥಿ/ ವಿದ್ಯಾರ್ಥಿನಿ ಯರಿಗೆ ಅನುಕೂಲ ಕಲ್ಪಿಸುವ ದೃಷ್ಟಿಯಿಂದ ತುರ್ತಾಗಿ ಸೂಕ್ತವಾದ ಜಾಗದಲ್ಲಿ ಸರ್ವೀಸ್ ಸ್ಟೇಷನ್ ಕಾರ್ಯಾರಂಭ ಮಾಡುವುದರ ಬಗ್ಗೆ ಅಗತ್ಯ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿದ್ದಾರೆ.

ಗ್ರಾ ಪಂ ವ್ಯಾಪ್ತಿಯಲ್ಲಿ ಗ್ರಾಮೀಣೋ ತ್ಸವ ಮತ್ತು ನಗರ ಪ್ರದೇಶದ ಸ್ಲಂ ನಿವಾಸಿಗಳ ಹಾಗೂ ಬೃಹತ್ ಸಮಾವೇಶದ ಕಾರ್ಯಕ್ರಮ ನಡೆಯಲಿರುವುದರಿಂದ ಕಾರ್ಯಕ್ರಮ ಕ್ಕೆ ಕೇಂದ್ರ ಹಾಗೂ ರಾಜ್ಯ ಸಚಿವರು ಗಳು ಆಗಮಿಸುವುದರಿಂದ ಇಂಬುಕೊಡಲು ಕೆಲಸ ಕಾರ್ಯಗಳಿಗೆ ಅಗತ್ಯ ಕ್ರಮ ತೆಗೆದುಕೊಂಡು ಗ್ರಾಮಸ್ಥರಿಗೂ ಶಾಲಾ ಕಾಲೇಜು ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೂ ರೈತರಿಗೂ ಹಾಗೂ ನ್ಯೂಟೌನ್ ಭಾಗದ ನಾಗರೀಕರಿಗೂ,ಅನುಕೂಲ ಮಾಡಿ ಕೊಡಬೇಕೆಂದು ವಿನಂತಿಸಿದ್ದಾರೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು