ವಿಜಯ ಸಂಘರ್ಷ ನ್ಯೂಸ್
ಭದ್ರಾವತಿ: ಶಾಲೆಯ ಆರಂಭದ ದಿನ ಅತ್ಯಂತ ಸಂಭ್ರಮದಿಂದ ಪ್ರಾರಂಭ ವಾಗಿದೆ. ಶೈಕ್ಷಣಿವಾಗಿ ನಮ್ಮ ತಾಲೂಕಿ ನಲ್ಲಿ ವಿದ್ಯಾರ್ಥಿಗಳು ಸಾಧನೆ ಮಾಡಿದ್ದಾರೆ ಇದು ಈ ಬಾರಿಯೂ ಸಹ ಮುಂದುವರೆಯಬೇಕಿದೆ ಎಂದು ಬಿಇಓ ಎ.ಕೆ.ನಾಗೇಂದ್ರಪ್ಪ ತಿಳಿಸಿದರು.
ಶುಕ್ರವಾರ ತಾಲ್ಲೂಕಿನ ಎರೇಹಳ್ಳಿ ಸರ್ಕಾರಿ ಶಾಲೆಯಲ್ಲಿ ಈ ವರ್ಷದ ಶೈಕ್ಷಣಿಕ ವರ್ಷ ಆರಂಭದ ದಿನ ವಿದ್ಯಾರ್ಥಿಗಳಿಗೆ ಮಕ್ಕಳಿಗೆ ಪಠ್ಯ ಪುಸ್ತಕ ವಿತರಿಸಿ ಮಾತನಾಡಿದರು.
ಸರ್ಕಾರಿ ಶಾಲೆ ಅಷ್ಟೇ ಅಲ್ಲದೆ ಆಂಗ್ಲ ಮಾಧ್ಯಮ ಶಾಲೆಯಾಗಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬಗ್ಗೆ ಈಗಾಗಲೇ ಎಲ್ಲರೂ ಮಾತನಾಡುತ್ತಿ ದ್ದಾರೆ. ಮಕ್ಕಳ ಬಗ್ಗೆ ಪೋಷಕರು ಸಹ ಕಾಳಜಿ ವಹಿಸಬೇಕು ಎಂದರು.
ಶಾಲೆಯ ಅಭಿವೃದ್ಧಿಗೆ ಕೇವಲ ಶಿಕ್ಷಕರ ಪ್ರಯತ್ನ ಮಾತ್ರವಲ್ಲ. ಸ್ಥಳೀಯ ಚುನಾಯಿತ ಪ್ರತಿನಿಧಿಗಳು, ಶಾಲಾಭಿ ವೃದ್ಧಿ ಸಮಿತಿ ಅಧ್ಯಕ್ಷರು, ಪದಾಧಿಕಾರಿ ಗಳು, ಪೋಷಕರು ಹಾಗೂ ಈ ಶಾಲೆಯ ಹಳೆಯ ವಿದ್ಯಾರ್ಥಿಗಳು ಸಹಕಾರ ಅತಿಮುಖ್ಯ ಎಂದರು.
ಪ್ರಾಸ್ತಾವಿಕ ನುಡಿಯನ್ನಾಡಿದ ಶಾಲೆಯ ಮುಖ್ಯ ಶಿಕ್ಷಕ ಕೋಗಲೂರು ತಿಪ್ಪೇಸ್ವಾಮಿ ಸರ್ಕಾರ ನಿಗಧಿ ಪಡಿಸಿದ ಬೇಸಿಗೆ ಶಿಬಿರ ಅತ್ಯಂತ ಯಶಸ್ಸು ಕಂಡಿದೆ. ಗ್ರಂಥಾಲಯ ಮೇಲ್ವಿಚಾರ ಕರು, ಸೇರಿದಂತೆ ಎಲ್ಲರೂ ಸಹಕಾರ ದಿಂದ ಯಶಸ್ವಿ ಗೆ ಕಾರಣ ಕರ್ತರಾಗಿ ದ್ದೀರಿ,ಮಕ್ಕಳಿಗೆ ಯಾವುದೇ ಕೊರತೆ ಆಗದಂತೆ ಶಿಕ್ಷಣ ಇಲಾಖೆ ನೋಡಿ ಕೊಳ್ಳುತ್ತಿದೆ. ಜಿಲ್ಲೆಯಲ್ಲಿ ಮಾದರಿ ಶಾಲೆಯಾಗಿ ಈ ಶಾಲೆ ಗುರುತಿಸಿ ಕೊoಡಿದೆ ಎಂದರು.
ಅರಿವು ಕೇಂದ್ರದ ಮೇಲ್ವಿಚಾರಕಿ ಮಾಲಾ ಮಾತನಾಡಿ, ಪಟ್ಟಣ ಪ್ರದೇಶ ಗಳಲ್ಲಿ ಬೇಸಿಗೆ ಶಿಬಿರಗಳನ್ನು ಹಣನೀಡಿ ಪಡೆಯಬೇಕಿದೆ. ಆದರೆ ಗ್ರಾಮೀಣ ಮಟ್ಟದ ವಿದ್ಯಾರ್ಥಿಗಳಿಗೆ ಸರ್ಕಾರ ಉಚಿತ ಶಿಬಿರ ಏರ್ಪಡಿಸಿದೆ. ಶಿಬಿರದಲ್ಲಿ ವಿದ್ಯಾರ್ಥಿಗಳಿಗೆ ಮಾತ್ರ ವಲ್ಲದೆ ಪೋಷಕರು ಸಹ ಕಸೂತಿ ಕೆಲಸಗಳನ್ನು ಕಲಿತು ಪ್ರಯೋಜನ ಪಡೆದುಕೊಂಡಿದ್ದಾರೆ ಎಂದರು.
ಗ್ರಾಮ ಪಂಚಾಯತ್ ಅಧ್ಯಕ್ಷರಾದ ಮಾಲತಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಕುಮಾರ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಲೋಕೇಶ್, ಉಪಾಧ್ಯಕ್ಷೆ ಶೋಭಾ, ಸದಸ್ಯರು,
ಸಿ ಆರ್ ಪಿ ಲಲಿತ ಕುಮಾರಿ ಸೇರಿದಂತೆ ಪೋಷಕರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಇದೆ ಸಂದರ್ಭದಲ್ಲಿ ಶಾಲೆಯ ಹಳೆಯ ವಿದ್ಯಾರ್ಥಿನಿ ಸೌಮ್ಯ ಎಸ್ ಎಸ್ ಎಲ್ ಸಿ ಯಲ್ಲಿ 595 ಅಂಕ ಪಡೆದು ಗ್ರಾಮಕ್ಕೆ ಕೀರ್ತಿ ತಂದ ಪ್ರಯುಕ್ತ ಶಾಲೆಯ ವತಿಯಿಂದ ಸನ್ಮಾನಿಸಿ ಗೌರವಿಸ ಲಾಯಿತು. ನಂತರ ಬೇಸಿಗೆ ಶಿಬಿರದ ಪ್ರಯೋಜನ ಪಡೆದುಕೊಂಡ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರಗಳನ್ನ ವಿತರಿಸಿ ಪ್ರೋತ್ಸಾಹಿಸಲಾಯಿತು.