ವಿಜಯ ಸಂಘರ್ಷ ನ್ಯೂಸ್
ಭದ್ರಾವತಿ: ಗ್ರಂಥಾಲಯಗಳು ಜ್ಞಾನದ ಸಂಖ್ಯೆತವಾಗಿದ್ದು ಪ್ರತಿಯೊಬ್ಬರು ಸದುಪಯೋಗ ಪಡೆದುಕೊಂಡು ಜ್ಞಾನದ ಬೆಳಕಲ್ಲಿ ಮುನ್ನೆಡೆಯುವಂತೆ ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ. ನಾಗೇಂದ್ರಪ್ಪ ಕರೆ ನೀಡಿದರು.
ತಾಲ್ಲೂಕಿನ ಯರೇಹಳ್ಳಿ ಗ್ರಾಮ ಪಂಚಾಯಿತಿ ಗ್ರಂಥಾಲಯ ಹಾಗೂ ಅರಿವು ಕೇಂದ್ರದಲ್ಲಿ ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭದಲ್ಲಿ ಶಿಬಿರಾರ್ಥಿ ಗಳಿಗೆ ಅಭಿನಂದನ ಪತ್ರಗಳನ್ನು ವಿತರಿಸಿ ಮಾತನಾಡಿದರು.
ಯರೇಹಳ್ಳಿ ಗ್ರಂಥಾಲಯ ಅರಿವು ಕೇಂದ್ರದ ಬೇಸಿಗೆ ಶಿಬಿರವು ತಾಲೂಕಿನ ಮಾದರಿ ಶಿಬಿರವಾಗಿ ಯಶಸ್ವಿ ಗೊಂಡಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಪತ್ರಕರ್ತ ಆರ್.ವಿ.ಕೃಷ್ಣ ಮಾತನಾಡಿ, ನಗರ ಪ್ರದೇಶಗಳಲ್ಲಿ ಬೇಸಿಗೆ ಶಿಬಿರ ದಲ್ಲಿ ಭಾಗವಹಿಸಲು ನಿಗದಿತ ಶುಲ್ಕ ನೀಡಬೇಕಿದೆ. ಗ್ರಾಮೀಣ ಪ್ರದೇಶದಲ್ಲಿ ಉಚಿತ ಶಿಬಿರಗಳ ಆಯೋಜನೆ ಯಿಂದ ಮಕ್ಕಳಿಗೆ ವಿಭಿನ್ನ ತರಬೇತಿ ನೀಡಿರುವುದು ಅಭಿನಂದಾನಾರ್ಹ. ಮಕ್ಕಳ ವಿದ್ಯಾಭ್ಯಾಸದಲ್ಲಿಯು ಸಹ ಪ್ರಾಶಸ್ತ್ಯ ನೀಡಿ ಮುಂದೆ ಉತ್ತಮ ಪ್ರಜೆಗಳಾಗಿ ಎಂದು ಶುಭಹಾರೈಸಿದರು.
ಗ್ರಾಮ ಪಂಚಾಯಿತಿ ಗ್ರಂಥಾಲಯ ಹಾಗೂ ಅರಿವು ಕೇಂದ್ರದ ಮೇಲ್ವಿ ಚಾರಕಿ ಮಾಲಾ ಮಾತನಾಡಿ, ಬೇಸಿಗೆ ಶಿಬಿರದಲ್ಲಿ ಕೇವಲ ಮಕ್ಕಳ ಕಲಿಕೆ ಜೊತೆಗೆ ಮಕ್ಕಳ ಪೋಷಕರಿಗೆ ವಿವಿಧ ತರಬೇತಿ ನೀಡಲಾಗಿದೆ. ತರಬೇತಿ ಪಡೆದ ಕಸೂತಿ ಕೆಲಸಗಳಿಂದ ಮುಂದೆ ಜೀವನೋಪಾಯಕ್ಕೂ ಮಾರ್ಗವಾಗಲಿ ಎಂದು ತರಬೇತಿ ನೀಡಲಾಗಿದೆ. ಅಲ್ಲದೆ ಶಿಬಿರದಲ್ಲಿ ಉತ್ತಮ ತರಬೇತುದಾರರು ತರಬೇತಿ ನೀಡಿದ್ದಾರೆ ಎಂದರು.
ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳು/ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರೂ ಶಾಲಾ ಮುಖ್ಯ ಶಿಕ್ಷಕರು/ಸಹಶಿಕ್ಷಕರು ಎಸ್ ಡಿಎಂಸಿ ಅಧ್ಯಕ್ಷರು, ಸದಸ್ಯರೂ, ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿಗಳು ಶಿಬಿರದಲ್ಲಿ ಭಾಗವಹಿಸಿದ ಮಕ್ಕಳಿಗೆ ಅಭಿನಂದನ ಪತ್ರಗಳನ್ನು ನೀಡಿ ಮಕ್ಕಳಿಗೆ ಪ್ರೋತ್ಸಾಹಿಸಿದರು. ವಿದ್ಯಾರ್ಥಿನಿ ತನು ಶಿಬಿರದ ವರದಿ ಮಂಡಿಸಿದರು.