ವಿಜಯ ಸಂಘರ್ಷ ನ್ಯೂಸ್ 
ಕೆ.ಆರ್.ಪೇಟೆ: ತಾಲೂಕಿನ ಕಸಬಾ ಹೋಬಳಿಯ ಬಂಡಿಹೊಳೆ ಹಾಲು ಉತ್ಪಾದಕರ ಸಂಘದ ನೂತನ ಅಧ್ಯಕ್ಷ ರಾಗಿ ಬಿ.ಎನ್ ಸುರೇಶ(ಬಂಕ್ ಶ್ರೀರಾಮೇಗೌಡ) ,ಉಪಾಧ್ಯಕ್ಷರಾಗಿ ರಮೇಶ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಸಂಘದ ಮುಂದಿನ ಐದು ವರ್ಷದ ಆಡಳಿತ ಅವಧಿಗೆ ನಡೆದ ಚುನಾವಣೆ ಯಲ್ಲಿ ಅಧ್ಯಕ್ಷರ ಸ್ಥಾನ ಬಯಸಿ ಬಿ.ಎನ್ ಸುರೇಶ,ಉಪಾಧ್ಯಕ್ಷ ಸ್ಥಾನ ಬಯಸಿ ರಮೇಶ್ ನಾಮಪತ್ರ ಸಲ್ಲಿಸಿದರು ಉಳಿದ ಯಾವ ನಿರ್ದೇಶಕರಿಂದಲೂ ನಾಮಪತ್ರ ಸಲ್ಲಿಕೆಯಾಗದ ಕಾರಣ ಅದಿರೋಧ ವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣೆ ಅಧಿಕಾರಿ ಸಲೀಂ ಘೋಷಣೆ ಮಾಡಿದರು.ಸಹ ಚುನಾವಣಾಧಿಕಾರಿಯಾಗಿ ಸಂಘದ ಕಾರ್ಯದರ್ಶಿ ಪ್ರವೀಣ್ ಕಾರ್ಯ ನಿರ್ವಹಿಸಿದರು.
ಬೆಂಬಲಿಗರಿಂದ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅಧ್ಯಕ್ಷ ಸುರೇಶ ಬಿ.ಎಸ್. ಗ್ರಾಮದ ಮುಖಂಡರು ಸಂಘದ ನಿರ್ದೇಶಕರ ಸಹಕಾರದಿಂದ ಸರಕಾರ ಮನೋಭಾವನೆಯಿಂದ ಅವಿರೋಧವಾಗಿ ಆಯ್ಕೆ ಮಾಡಿದ್ದಾರೆ. ನನ್ನ ಆಡಳಿತ ಅವಧಿಯಲ್ಲಿ ಸಂಘ ವನ್ನು ಮಾದರಿ ಸಂಘವಾಗಿ ರೂಪಿಸಲು ಶ್ರಮವಹಿಸುತ್ತೇನೆ ಎಂದು ಭರವಸೆ ನೀಡಿದವರು ಗುಣಮಟ್ಟದ ಹಾಲು ಪೂರೈಕೆ ಮಾಡುವ ಮೂಲಕ ಸಂಘದ ಅಭಿವೃದ್ಧಿಗೆ ಎಲ್ಲರೂ ಸಹಕಾರ ನೀಡಬೇಕು. ನನ್ನ ಮೇಲೆ ವಿಶ್ವಾಸವಿಟ್ಟು ಸಂಘದ ಅಧ್ಯಕ್ಷ ನಾಗಲು ಸಹಕರಿಸಿದ ಕಾರ್ಯಕಾರಿ ಸಮಿತಿಯ ನಿರ್ದೇಶಕರು ಮತ್ತು ಸಂಘದ ಸದಸ್ಯರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಹೇಳಿದರು.
ಬಳಿಕ ಮಾತನಾಡಿದ ಸಂಘದ ಮಾಜಿ ಅಧ್ಯಕ್ಷ ಹಾಲಿ ನಿರ್ದೇಶಕ ಕಾಯಿ ಮಂಜೇಗೌಡ ನಮ್ಮ ನಾಯಕರಾದ ಶಾಸಕ ಹೆಚ್.ಟಿ ಮಂಜು, ಟಿ.ಎ.ಪಿ.ಸಿ.ಎಂ.ಎಸ್ ನಿರ್ದೇಶಕ ಬಿ.ಎಲ್ ದೇವರಾಜು, ಮನ್ಮುಲ್ ನಿರ್ದೇಶಕರಾದ ಡಾಲು ರವಿ, ಎಂ.ಬಿ ಹರೀಶ್ ಮಾರ್ಗದರ್ಶನದಲ್ಲಿ ಚುನಾವಣೆ ನಡೆಯದೆ ಅವಿರೋಧ ವಾಗಿ ಅಧ್ಯಕ್ಷ ಉಪಾಧ್ಯಕ್ಷ ಆಯ್ಕೆ ಯಾಗಿದೆ.ನೂತನ ಅಧ್ಯಕ್ಷ ಉಪಾಧ್ಯಕ್ಷ ರು ನಮ್ಮೆಲ್ಲರ ಸಲಹೆ ಸಹಕಾರ ಪಡೆದು ಸಂಘದ ಅಭಿವೃದ್ಧಿಗೆ ಪ್ರಾಮಾಣಿಕ ವಾಗಿ ಶ್ರಮ ವಹಿಸಬೇಕು. ಹಾಲು ಉತ್ಪಾದಕರು ಗುಣಮಟ್ಟದ ಹಾಲು ಸರಬರಾಜು ಮಾಡುವ ಮೂಲಕ ಸಂಘದ ಅಭಿವೃದ್ಧಿಗೆ ಕೈಜೋಡಿಸ ಬೇಕು ಎಂದರು.
ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಘೋಷಣೆ ಆಗುತ್ತಿದಂತೆ ಬೆಂಬಲಿಗರು, ಮುಖಂಡರು ಸಿಹಿ ತಿನಿಸಿ ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು.
ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ರಮೇಶ್ ನಿರ್ದೇಶಕರಾದ ಸಂತೋಷ್ ಬಿ. ಟಿ,ಶ್ರೀಕಾಂತ್ ಬಿ.ಆರ್,ಮಂಜುನಾಥ್ ಬಿ.ಆರ್, ನಿರೀಕ್ಷಣ ಬಿ.ಎಂ,ಶಾಂತಮ್ಮ, ಧನಲಕ್ಷ್ಮೀ, ಬಸವರಾಜು ಬಿ.ಆರ್, ಬಸವರಾಜು, ಜವರನಾಯ್ಕ, ಗ್ರಾಮ ಹಿರಿಯ ಮುಖಂಡರಾದ ಎಂ.ಬಿ ದೇವರಾಜು, ರಾಮಕೃಷ್ಣೇಗೌಡ ,ವಿಶ್ವನಾಥ್,ಗ್ರಾ. ಪಂ ಸದಸ್ಯ ದರ್ಶನ್, ದೇವರಸೆಗೌಡ, ಕಿಟ್ಟಣ್ಣ, ಪುರುಷೋತ್ತಮ್,ಶ್ರೀನಿವಾಸ್,ಶ್ರೀಧರ್, ಅಂಜನಿಗೌಡ,ಪ್ರಭ,ರಾಜೇಗೌಡ ಹೇಮಂತ್, ಕಾಂತರಾಜು, ರೈತ ಸಂಘ ಮಂಜೇಗೌಡ,ನಂಜೇಗೌಡ,ಲೋಕನಾಥ್,ಯುವ ಮುಖಂಡರಾದ ಚಂದು, ಪ್ರಸಾದ್,ವೃತ್ವಿಕ್,ಪಾಂಡು,ಉಮೇಶ್, ಪಾಪಣ್ಣಿ, ಕಾರ್ತಿಕ್, ಭೈರ,ಬಿ ಎಂ ಪುನೀತ್, ಅವಿನಾಶ್, ತೇಜ, ಸಂತೋಷ್, ಯುವರಾಜ್, ಸುರೇಂದ್ರ, ಯೋಗೇಶ್, ಸುನಿಲ್, ಪ್ರವೀಣ್, ಸಚಿನ್, ದಿಲೀಪ್,ನಂದು,ಚಂದ್ರ ಮುರುಳಿ, ಬಿ.ಎಂ ಗುಂಡ,ರಘು, ಸೇರಿದಂತೆ ಉಪಸ್ಥಿತರಿದ್ದರು
*✍️ಸುದ್ದಿಯೊಂದಿಗೆ ಮನು ಮಾಕವಳ್ಳಿ ಕೆ ಆರ್ ಪೇಟೆ*
Tags
ಕೆ ಆರ್ ಪೇಟೆ ವರದಿ