ವಿಜಯ ಸಂಘರ್ಷ ನ್ಯೂಸ್
ಭದ್ರಾವತಿ: ಎಲ್ಲರಲ್ಲೂ ಪ್ರತಿಭೆಗಳು ಅಡಗಿರುತ್ತವೆ. ಕೆಲವರ ಪ್ರತಿಭೆಗಳನ್ನು ಮುಂದೆ ತರಲು ಸೂಕ್ತ ವೇದಿಕೆ ಗಳಿಲ್ಲದೆ ಎದುರಿಗೆ ತೋರಿಸಿಕೊಳ್ಳಲು ಸಾಧ್ಯವಿಲ್ಲವಾಗಿದೆ ಎಂದು ಶ್ರೀ ಶಂಕರ ಮಠದ ಆಡಳಿತಾಧಿಕಾರಿ ಡಾ.ಪಿ. ನಾರಾಯಣ ಅಭಿಪ್ರಾಯ ಪಟ್ಟರು.
ಶಂಕರಘಟ್ಟ ಶ್ರೀಶಾ ಕಲಾ ವೇದಿಕೆ, ಶ್ರೀ ಶಾರದಾ ಶಂಕರ ಭಜನಾ ಮಂಡಳಿ ಶ್ರೀ ಶೃಂಗೇರಿ ಶಂಕರಮಠ, ಕವಿವೃಕ್ಷ ಬಳಗ ಇವರ ಸಂಯುಕ್ತಾಶ್ರಯದಲ್ಲಿ ಶಿವಮೊಗ್ಗದ ಶ್ರೀ ಶೃಂಗೇರಿ ಶಂಕರಮಠದ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಕಾರ್ಮಿಕ ದಿನಾಚರಣೆ ಹಾಗೂ ಶ್ರೀ ಶಂಕರ ಜಯಂತಿ ಪ್ರಯುಕ್ತ ಕವಿಗೋಷ್ಠಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪ್ರತಿಭೆಗಳಿಗೆ ವೇದಿಕೆಗಳು ಸಿಕ್ಕಾಗ ಆ ವ್ಯಕ್ತಿ ಇಂಥ ದೊಡ್ಡ ವೇದಿಕೆಯಲ್ಲಿ ನನ್ನನ್ನು ಸ್ವೀಕರಿಸುತ್ತಾರೋ ಇಲ್ಲವೋ ಅನ್ನೋ ಹಿಂಜರಿಕೆ ಇರುತ್ತದೆ. ಆದರೆ ಇಂದು ಎಲ್ಲರಿಗೂ ಇವತ್ತು ಸರ್ವೇ ಸಾಮಾನ್ಯವಾದ ವೇದಿಕೆ ನಿರ್ಮಾಣ ಮಾಡಿ ಸೂಕ್ತ ವೇದಿಕೆ ನಿರ್ಮಾಣ ದೊಂದಿಗೆ ಎಲ್ಲಾ ಒಟ್ಟು ಸೇರಿ ಮಾಡುವ ಮೂಲಕ ಈ ವೇದಿಕೆ ಪ್ರತಿಭೆಗಳನ್ನು ಗುರುತಿಸುವುದಕ್ಕೆ ಉತ್ತಮ ವೇದಿಕೆಯಾಗಲಿ. ನಿಮ್ಮ ಪ್ರತಿಭಾ ಪುರಸ್ಕಾರ ನಿರಂತರವಾಗಿ ನಡೆಯಲಿ. ಎಲ್ಲೆಡೆಯೂ ಇರುವ ಪ್ರತಿಭಾ ವಂತರು ನಿಮ್ಮ ಹೆಸರನ್ನು ನಿರಂತರವಾಗಿ ಹೇಳುವಂತಾಗಲಿ ಎಂದು ಹಾರೈಸಿದರು.
ಶ್ರೀ ಶೃಂಗೇರಿ ಶಂಕರಮಠದ ಅರ್ಚಕರಾದ ಶ್ರೀ ಮಂಜುನಾಥ ಭಟ್ಟರ ವೇದಘೋಷದೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು.
ಶ್ರೀಶಾ ಕಲಾ ವೇದಿಕೆಯ ಸಂಸ್ಥಾಪಕಿ ಆಶಾ ಶ್ರೀಧರ್ ಪ್ರಾಸ್ತಾವಿಕದಲ್ಲಿ ನುಡಿಗಳಲ್ಲಿ ವೇದಿಕೆ ನಡೆದುಬಂದ ಹಾದಿಯನ್ನು ತಿಳಿಸಿದರು.
ನಂತರ ಜಾನಪದ ಹಾಡುಗಳ ಕಣಜ ಲಕ್ಷ್ಮೀದೇವಮ್ಮ ಚನ್ನಗಿರಿ ಇವರಿಗೆ ಜಾನಪದ ರತ್ನ ಬಿರುದು, ಮುಖ್ಯ ಮಂತ್ರಿ ಸ್ವರ್ಣ ಪದಕ ವಿಜೇತ, ಖಾಕಿಕವಿ ಮಂಜುನಾಥ್ ಇವರನ್ನು ಶ್ರೀಶಾ ಕಲಾ ವೇದಿಕೆ ಹಾಗೂ ಕವಿವೃಕ್ಷ ಬಳಗದ ವತಿಯಿಂದ ಶಿಕ್ಷಕಿ, ಕವಯಿತ್ರಿ ಪೂರ್ಣಿಮಾ ವೀರ ಬಸಪ್ಪ ಇವರನ್ನು ಸನ್ಮಾನಿಸಲಾಯಿತು.
ಕವಿವೃಕ್ಷ ಬಳಗದ ರಾಜ್ಯಾಧ್ಯಕ್ಷ ವೀರೇಶ್ ಹಿತ್ತಲಮನಿ, ಜಿಲ್ಲಾಧ್ಯಕ್ಷ ಮಂಜುನಾಥ್ ಶುಭ ಹಾರೈಸಿದರು.
ಶಿವಮೊಗ್ಗ, ಹಾಸನ, ಶೃಂಗೇರಿ, ಬಳ್ಳಾರಿ ಹಾಗೂ ಚೆನೈಯಿಂದ ಆಗಮಿಸಿದ ಸುಮಾರು 40ಕ್ಕೂ ಹೆಚ್ಚು ಕವಿಗಳು ಮಹಿಳೆ ಹಾಗೂ ಕಾರ್ಮಿಕ ವಿಷಯಗಳಿಗೆ ಸಂಬಂಧಿಸಿದಂತೆ ಕವಿಗೋಷ್ಠಿಯಲ್ಲಿ ಕವನ ವಾಚನ ಮಾಡಿದರು.
ಶ್ರೀ ಶಾರದಾ ಭಜನಾ ಮಂಡಳಿಯ ಸದಸ್ಯೆಯರಿಂದ ಗಾಯನ, ಏಕಪಾತ್ರಾಭಿ ನಯ, ಪುಟ್ಟ ಮಕ್ಕಳಿಂದ ನೃತ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.
ಸಿರಿಗನ್ನಡ ವೇದಿಕೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಎನ್.ಉಮೇಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಲಕ್ಷ್ಮೀ ಪ್ರಾರ್ಥಿಸಿ, ಶಾರದಾ ಗುಂಡೂರಾವ್ ಸ್ವಾಗತಿಸಿದರೆ,ಕಾಮಾಕ್ಷಿ ನಿರೂಪಿಸಿದರು. ಆಶಾ ಶ್ರೀಧರ್ ವಂದಿಸಿದರು.
ಶಾಂತಾಲಕ್ಷ್ಮೀ, ಶ್ರೀಧರ್, ಸುಹಾಸ್, ಕಿರಣ್, ಪ್ರೇಮಾ, ವಿನೋದ, ಉಷಾ ಅಡಿಗ, ಸುಮ ಪಟ್ಟಾಭಿರಾಮ, ಮಾಲತಿ, ಮತ್ತಿತರು ಉಪಸ್ಥಿತರಿದ್ದರು.