ಭದ್ರಾವತಿ-ಒಂಟಿ ಸಲಗ ದಾಳಿಗೆ ಕಾವಲುಗಾರ ಬಲಿ

ವಿಜಯ ಸಂಘರ್ಷ ನ್ಯೂಸ್ 
ಭದ್ರಾವತಿ: ವಿಶ್ವೇಶ್ವರಯ್ಯ ಕಬ್ಬಿಣ ಹಾಗೂ ಉಕ್ಕು ಕಾರ್ಖಾನೆಯ (ವಿಐಎಸ್ಎಲ್) ವಸತಿಗೃಹದ ಕಾವಲುಗಾರ ನೋರ್ವ ಕಾಡಾನೆಯ ದಾಳಿಯಿಂದ ಸಾವನ್ನಪ್ಪಿದ ಘಟನೆ ತಾಲೂಕಿನ ಕೆಂಚಮ್ಮನ ಗುಡ್ಡದಲ್ಲಿ ಸಂಭವಿಸಿದೆ.

ಒಂಟಿ ಸಲಗವೊಂದು ಕಾವಲುಗಾರ ಕುಮಾರ್ (50) ಎಂಬವರನ್ನು ತುಳಿದು ಸಾಯಿಸಿದೆ. ಕೆಂಚಮ್ಮನ ಗುಡ್ಡದ ಬಳಿ ವಿಐಎಸ್ಎಲ್ ವಸತಿಗೃಹಗಳಿವೆ. ಗುರುವಾರ ರಾತ್ರಿ ಸುಮಾರು 10:30ರ ಸುಮಾರಿಗೆ ಇಲ್ಲಿನ ವಸತಿಗೃಹದ ಚೆಕ್​ಪೋಸ್ಟ್​ ಬಳಿ ಇದ್ದ ಕಾವಲುಗಾರನ​​ ಮೇಲೆ ಏಕಾಏಕಿ ಸಲಗ ದಾಳಿ ಮಾಡಿದೆ. ತೀವ್ರ ಗಾಯಗೊಂಡ ಕುಮಾರ್​​ ಸ್ಥಳದಲ್ಲಿಯೇ ಸಾವನ್ನಪ್ಪಿ ದ್ದಾರೆ ಎಂದು​ ಮೂಲಗಳು ತಿಳಿಸಿವೆ.

ಕುಮಾರ್ ಬಂಡಿಗುಡ್ಡದ ನಿವಾಸಿ ಯಾಗಿದ್ದು, ಇಲ್ಲಿನ ವಿಐಎಸ್ಎಲ್ ವಸತಿಗೃಹದ ಕಾವಲುಗಾರನಾಗಿ ಕೆಲಸ ಮಾಡುತ್ತಿದ್ದರು. ಕಾಡಾನೆ ದಾಳಿಯಿಂದ ಈ ಭಾಗದ ಗ್ರಾಮಸ್ಥರು ಭಯಭೀತ ರಾಗಿದ್ದಾರೆ. ಘಟನಾ ಸ್ಥಳಕ್ಕೆ ಭದ್ರಾವತಿ ವಲಯ ಅರಣ್ಯ ಅಧಿಕಾರಿ ದುರ್ಗಪ್ಪ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

20 ಲಕ್ಷ ರೂ. ಪರಿಹಾರ- ಆರ್​ಎಫ್​ಒ:

ಆರ್​ಎಫ್​ಒ ದುರ್ಗಪ್ಪ, ನಿನ್ನೆ ರಾತ್ರಿ ಕುಮಾರ್​​ ಕರ್ತವ್ಯಕ್ಕೆ ಹೋಗಿದ್ದಾಗ ಒಂಟಿ ಸಲಗ ದಾಳಿ ನಡೆಸಿದೆ. ಈ ಭಾಗವು ದಟ್ಟ ಅರಣ್ಯದಿಂದ ಕೂಡಿದೆ. ಇಲ್ಲಿ ಆನೆಗಳು ಸೇರಿದಂತೆ ಅನೇಕ ವನ್ಯಜೀವಿ ಗಳಿವೆ. ಒಂಟಿ ಸಲಗದ ಓಡಾಟದ ಬಗ್ಗೆ ಸುತ್ತಮುತ್ತಲಿನ ಗ್ರಾಮಸ್ಥರಿಗೆ ಎಚ್ಚರಿಕೆ ನೀಡಿ, ಜಾಗೃತಿ ಮೂಡಿಸಲಾಗಿತ್ತು. ಮೃತನ ಕುಟುಂಬಕ್ಕೆ ಅರಣ್ಯ ಇಲಾಖೆ ವತಿಯಿಂದ 20 ಲಕ್ಷ ರೂ. ಪರಿಹಾರ ನೀಡಲಾಗುವುದು ಎಂದು ತಿಳಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು