ವಿಜಯ ಸಂಘರ್ಷ ನ್ಯೂಸ್
ಶಿವಮೊಗ್ಗ: ನಗರದ ವೀರಶೈವ ಕಲ್ಯಾಣ ಮಂದಿರದಲ್ಲಿ ಆಯೋಜಿಸಿದ್ದ ಕದಳಿ ವನಿತ ಸಮಾಜದ 32ನೇ ವಾರ್ಷಿಕೋತ್ಸವ ಹಾಗೂ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ನೆರವೇರಿತು.
ಡಾ.ಬಿ.ಎಸ್.ಗಿರಿಜಾ ಪ್ರಸನ್ನ ಕುಮಾರ್ ಮಾತನಾಡಿ ಮಹಿಳೆಯರಿಗೆ ಇತ್ತೀಚೆಗೆ ಸಾಮಾನ್ಯವಾಗಿ ಕಂಡುಬರುತ್ತಿರುವ ಸ್ತನ ಕ್ಯಾನ್ಸರ್ ಹಾಗೂ ಗರ್ಭ ಕೊರಳ ಕ್ಯಾನ್ಸರ್ ಇವುಗಳನ್ನು ಪ್ರಾಥಮಿಕ ಹಂತದಲ್ಲಿ ಪತ್ತೆಹಚ್ಚಬಹುದಾಗಿದೆ. ಕಾಯಿಲೆ ಗುಣಪಡಿಸುವ ಬಗ್ಗೆ ಸೂಕ್ತ ವೈದ್ಯರಲ್ಲಿ ಮಾರ್ಗದರ್ಶನ ಪಡೆಯ ಬೇಕು ಎಂದರು.
ನೂತನ ಅಧ್ಯಕ್ಷರಾಗಿ ಸುಜಾತ ಬಸವರಾಜ್, ಉಪಾಧ್ಯಕ್ಷೆ ಉಮಾ, ಕಾರ್ಯದರ್ಶಿ ಸವಿತಾ, ಸಹ ಕಾರ್ಯದರ್ಶಿ ಸುರೇಖಾ ಖಜಾಂಚಿ ನಿರ್ಮಲ, ನಿರ್ದೇಶಕರಾಗಿ ಲತಾ ಶಂಕರ್, ಮಂಜುಳಾ ,ವನಜಾಕ್ಷಿ ಹಾಗೂ ಜಯಮ್ಮ ಪದಗ್ರಹಣ ಮಾಡಿದರು . ಸದಸ್ಯನಿಯರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಈಗಿನ ಅಧ್ಯಕ್ಷ ಅರುಣ ಚಂದ್ರಶೇಖರ್ , ಸವಿತಾ ,ರೂಪ, ಶೈಲಾ, ಭಾರತಿ ,ವಾಸಂತಿ, ಶೋಭಾ ,ಗಿರಿಜಾ ಜ್ಯೋತಿ ಉಪಸ್ಥಿತರಿದ್ದರು.
ಕದಳಿ ವನಿತ ಸಮಾಜದಿಂದ ಬಸವೇಶ್ವರ ಶಾಲೆಯ ಎಸ್ ಎಸ್ ಎಲ್ ಸಿ ಹಾಗೂ ಪಿಯು ವಿದ್ಯಾರ್ಥಿ ಗಳಿಗೆ ಹಾಗೂ ಸದಸ್ಯನಿಯರ ಮಕ್ಕಳಲ್ಲಿ ಎಸ್ ಎಸ್ ಎಲ್ ಸಿ ಹಾಗೂ ಪಿಯು ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿ ತೇರ್ಗಡೆ ಆಗಿರುವ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ಅತಿಥಿಗಳಾಗಿ ಡಾ.ಬಿ.ಎಸ್. ಗಿರಿಜಾ ಪ್ರಸನ್ನ ಕುಮಾರ್ ಆಗಮಿಸಿದ್ದರು.
Tags
ಶಿವಮೊಗ್ಗ ವರದಿ