ವಿಜಯ ಸಂಘರ್ಷ ನ್ಯೂಸ್
ಹೊಸನಗರ: ಪ್ರವಾಸಕ್ಕೆ ಬಂದಿದ್ದ ವ್ಯಕ್ತಿಯೊಬ್ಬರು ಅಬ್ಬಿಫಾಲ್ಸ್ ಗೆ ಇಳಿದು ಪ್ರಾಣ ಕಳೆದುಕೊಂಡಿದ್ದಾರೆ.ರಮೇಶ್ (44) ಮೃತರು.
ಬೆಂಗಳೂರಿನ ನಾಗರಬಾವಿಯಲ್ಲಿರುವ ಖಾಸಗಿ ಕಂಪನಿಯಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ ರಮೇಶ್, ಮೂಲತಃ ತಮಿಳುನಾಡಿನವರೆಂದು ತಿಳಿದು ಬಂದಿದೆ.
ರಮೇಶ್ ತನ್ನ ಭಾವ ಮತ್ತು ಸ್ನೇಹಿತ ರೊಂದಿಗೆ ಹೊಸನಗರದ ಪ್ರವಾಸಿ ಸ್ಥಳಗಳಿಗೆ ಆಗಮಿಸಿದ್ದರು. ಫಾಲ್ಸ್ನಲ್ಲಿ ಸ್ನಾನ ಮಾಡುವಾಗ ಬಂಡೆಕಲ್ಲಿನಿಂದ ಇಳಿದಿದ್ದು, ಹರಿವಿನ ರಭಸಕ್ಕೆ ಕೊಚ್ಚಿ ಕೊಂಡು ಹೋಗಿದ್ದಾರೆ.
ಫಾಲ್ಸ್ನ ಕೆಳಭಾಗದಲ್ಲಿ ಶವ ಸಿಕ್ಕಿದ್ದು, ಮರಣೋತ್ತರ ಪರೀಕ್ಷೆಗೆ ಹೊಸ ನಗರದ ಆಸ್ಪತ್ರೆಗೆ ರವಾನಿಸಲಾಗಿದೆ. ನಗರ ಪೊಲೀಸ್ ಠಾಣೆಯ ಪಿಎಸ್ಐ ಶಿವಾನಂದ ಕೊಳಿ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.