ವಿಜಯ ಸಂಘರ್ಷ ನ್ಯೂಸ್
ಭದ್ರಾವತಿ: ಮೊಬೈಲ್ ಹೆಚ್ಚಿನ ಬಳಕೆ ಯಿಂದ ಕಣ್ಣಿಗೆ ಸಮಸ್ಯೆಯನ್ನು ಉಂಟು ಮಾಡುತ್ತದೆ. ಆದ್ದರಿಂದ ನಿರ್ಧಿಷ್ಟ ಸಮಯದಲ್ಲಿ ಮಾತ್ರ ಮೊಬೈಲ್ ಉಪಯೋಗಿಸುವಂತೆ ಆಶೀರ್ವಾದ ಕಣ್ಣಿನ ಆಸ್ಪತ್ರೆಯ ನೇತ್ರ ತಜ್ಞ ಡಾ.ಅರುಣ್ ಸಲಹೆ ನೀಡಿದರು.
ಮಂಗಳವಾರ ನಗರದ ಅನನ್ಯ ಎಜುಕೇಶನ್ ಟ್ರಸ್ಟ್ ಹಾಗೂ ಆಶೀರ್ವಾದ ಕಣ್ಣಿನ ಆಸ್ಪತ್ರೆ ಇವರ ಸಂಯುಕ್ತ ಆಶ್ರಯದಲ್ಲಿ ಶಾಲಾ ಆವರಣದಲ್ಲಿ 3 ನೇ ತರಗತಿಯಿಂದ 10 ನೇ ತರಗತಿಯವರೆಗೆ ವಿದ್ಯಾರ್ಥಿಗಳಿಗೆ ಕಣ್ಣಿನ ತಪಾಸಣೆ ಶಿಬಿರದಲ್ಲಿ ಮಾತನಾಡಿದರು.
ಟ್ರಸ್ಟ್ ಕಾರ್ಯದರ್ಶಿ ಬಿ.ಎಸ್.ಅನಿಲ್ ಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಆಡಳಿತಾಧಿಕಾರಿ ವೇಣು ಗೋಪಾಲ್, ಮುಖ್ಯ ಶಿಕ್ಷಕ ಕಲ್ಲೇಶ್ ಕುಮಾರ್ ಕೆ, ಉಪ ಮುಖ್ಯೋಪಾಧ್ಯಾ ಯಿನಿ ಸುನಿತಾ ಆರ್, ಅನನ್ಯ ಹ್ಯಾಪಿ ಹಾರ್ಟ್ನ ಮುಖ್ಯ ಶಿಕ್ಷಕಿ ತನುಜ ಅನಿಲ್ ಇನ್ನಿತರರಿದ್ದರು.
ರಾಧಿಕಾ ಸ್ವಾಗತ, ನಿರೂಪಣೆ, ಹಾಗೂ ವಂದಿಸಿದರು. ಶಾಂತಿ ಮಂತ್ರದೊoದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.