ಭದ್ರಾವತಿ-ಮಾರಣಾಂತಿಕ ಹಲ್ಲೆ ಪ್ರಕರಣ: 10 ವರ್ಷ ಜೈಲು ಶಿಕ್ಷೆ, ದಂಡ | ಏನಿದು ಪ್ರಕರಣ?

ವಿಜಯ ಸಂಘರ್ಷ ನ್ಯೂಸ್ 
ಭದ್ರಾವತಿ: ತಾಲೂಕಿನ ರಾಮನಕೊಪ್ಪ ನಿವಾಸಿ ರಮೇಶ್(ಹೆಸರು ಬದಲಿಸ ಲಾಗಿದೆ) ಎನ್ನುವವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಪ್ರಕರಣದಲ್ಲಿ ಆರೋಪಿಗೆ 10 ವರ್ಷಗಳ ಕಾಲ ಜೈಲು ಶಿಕ್ಷೆ ಹಾಗೂ 26,000 ರೂ.ದಂಡ ವಿಧಿಸಲಾಗಿದೆ.

ಪ್ರಕರಣ ಕುರಿತಂತೆ ನಾಲ್ಕನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಶ್ರೀಮತಿ ಇಂದಿರ ಮೈಲಸ್ವಾಮಿ ಚೆಟ್ಟಿಯಾರ್ ತೀರ್ಪು ನೀಡಿದ್ದು, ಆರೋಪಿಯನ್ನು ಕಿರಣ್ ಎಂದು ಗುರುತಿಸಲಾಗಿದೆ.

ಏನಿದು ಪ್ರಕರಣ..?

ಶಿವಮೊಗ್ಗ ತಾಲೂಕಿನ ಯಲವಟ್ಟಿ ಗ್ರಾಮದ ರಮೇಶ್ ಹಾಗೂ ಭದ್ರಾವತಿ ತಾಲೂಕಿನ ರಾಮನಕೊಪ್ಪದ ರಮ್ಯಾ(ಹೆಸರು ಬದಲಿಸಲಾಗಿದೆ) ಎನ್ನುವವರು ಪ್ರೀತಿಸಿ ವಿವಾಹವಾಗಿ ದ್ದರು. ಆದರೆ, ಈ ವಿವಾಹಿತೆ ಯಲವಟ್ಟಿ ಗ್ರಾಮದ ಕಿರಣ್ ಎನ್ನುವವನ ಜೊತೆ ಸಂಬoಧ ಬೆಳೆಸಿ ಅವನ ಜೊತೆ ಓಡಿ ಹೋಗಿದ್ದರು. ಆನಂತರ ಇಬ್ಬರನ್ನೂ ಕರೆಸಿ, ರಮೇಶ್ ಹಾಗೂ ರಮ್ಯಾ ಜೊತೆ ಬುದ್ದಿವಾದ ಹೇಳಿದ ಸಂಬoಧಿಕರು ಕಿರಣ್'ನನ್ನು ಬಿಟ್ಟು ಪತಿಯೊಂದಿಗೆ ವಾಸಿಸುವಂತೆ ಮಾಡಿದ್ದರು.

ಆದರೆ, 2022ರ ಒಂದು ದಿನ ರಮೇಶ್ ಹಾಗೂ ಕುಟುಂಬಸ್ಥರು ರಾತ್ರಿ ಮಲಗಿದ್ದ ವೇಳೆ ಸುಮಾರು 1.30ರ ವೇಳೆಗೆ ದುಷ್ಕರ್ಮಿ ಯೊಬ್ಬ ಮನೆಗೆ ನುಗ್ಗಿ ರಮೇಶನ ಕುತ್ತಿಗೆ, ಎಡಗಡೆ ಕೆನ್ನೆ, ಎಡಗಡೆ ಹಣೆಗೆ ಹಲ್ಲೆ ಮಾಡಿ ಪರಾರಿ ಯಾಗಿದ್ದನು. ಈ ಕುರಿತಂತೆ ಪ್ರಕರಣ ದಾಖಲಾಗಿತ್ತು.

ತನಿಖೆ ನಡೆಸಿ, ಆರೋಪಿಯನ್ನು ಪತ್ತೆ ಮಾಡಿ, ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿತ್ತು. ವಿಚಾರಣೆ ನಡೆಸಿದ ನ್ಯಾಯಾ ಲಯ ಆರೋಪಿಯ ಅಪರಾಧ ಸಾಬೀತಾಗಿದ್ದು, ಆತನಿಗೆ 10 ವರ್ಷ ಕಾರಾಗೃಹ ವಾಸ ಹಾಗೂ 26,000 ಸಾವಿರ ರೂ. ದಂಡ ವಿಧಿಸಲಾಗಿದೆ. 

ಪ್ರಕರಣದ ತನಿಖಾಧಿಕಾರಿಯಾಗಿ ಗ್ರಾಮಾಂತರ ಠಾಣೆಯ ಅರುಣ್ ಕುಮಾರ್ ಕರ್ತವ್ಯ ನಿರ್ವಹಿಸಿದ್ದರು. ಸರ್ಕಾರಿ ಅಭಿಯೋಜಕರಾಗಿ ಪಿ.ರತ್ನಮ್ಮ ವಾದ ಮಂಡಿಸಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು