ಭದ್ರಾವತಿ-ಇ-ಸ್ವತ್ತಿಗೆ 25 ಸಾವಿರ ಡಿಮ್ಯಾಂಡ್ -ಗ್ರಾಪಂ ಎದುರೇ ಪ್ರತಿಭಟನೆ

ವಿಜಯ ಸಂಘರ್ಷ ನ್ಯೂಸ್ 
ಭದ್ರಾವತಿ: ಎಡೆಹಳ್ಳಿ ಗ್ರಾ ಪಂ ಯಲ್ಲಿ ಇ-ಸ್ವತ್ತು ಮಾಡಿಕೊಡದ ಹಿನ್ನೆಲೆಯಲ್ಲಿ ಗ್ರಾ ಪಂ ಎದುರೇ ಗ್ರಾಮಸ್ಥರು ಪ್ರತಿಭಟನೆ ನಡೆಸಿರುವ ಘಟನೆ ವರದಿಯಾಗಿದೆ.

 ಎಡೆಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಜ್ಞಾನೇಶ್ ಎಂಬುವರು ಸರ್ವೆ ನಂಬರ್ 60/6 ರಲ್ಲಿ 34 ಗುಂಟೆ ಭೂಮಿಯನ್ನು ಹೊಂದಿದ್ದು ಈ ಜಾಗಕ್ಕೆ ಭೂ ಪರಿವರ್ತನೆ ಆಗಿರುತ್ತದೆ ಭೂ ಪರಿವರ್ತನೆ ಹಾಗೂ ಇತರೆ ಎಲ್ಲಾ ದಾಖಲಾತಿಗಳು ನೀಡಿದರು ಸಹ ಈ ಸ್ವತ್ತು ನೀಡುವಲ್ಲಿ ಗ್ರಾಮ ಪಂಚಾಯತಿ ಸಿಬ್ಬಂದಿಗಳು ಹಾಗೂ ಅಧಿಕಾರಿಗಳು ಲಂಚ ಕೇಳಿದ್ದಾರೆ ಎಂದು ಆರೋಪಿಸಲಾಗಿದೆ.

ಇ-ಸ್ವತ್ತಿಗೆ 25 ಸಾವಿರ ರೂ. ಹಣದ ಬೇಡಿಕೆ ಇಟ್ಟ ಕಾರಣ ಇಂದು ಜ್ಞಾನೇಶ ಕುಟುಂಬ ಸಮೇತರಾಗಿ ಯಡೇಹಳ್ಳಿ ಗ್ರಾಪಂ ಎದುರು ಪ್ರತಿಭಟನೆ ನಡೆಸಿದ್ದಾರೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು