ವಿಜಯ ಸಂಘರ್ಷ ನ್ಯೂಸ್
ಭದ್ರಾವತಿ: ಸರ್ಕಾರಿ ನೌಕರರ ಸಂಘ ಆಶ್ರಿತ ವಿಶ್ವೇಶ್ವರಾಯ ವಿದ್ಯಾ ಸಂಸ್ಥೆ ಯಲ್ಲಿ ಬುಧವಾರ ಸ್ತ್ರೀರೋಗ ಹಾಗೂ ಪ್ರಸೂತಿ ಶಾಸ್ತ್ರ ಸಂಘದ ವತಿಯಿಂದ SOGS ರಜತ ಸಂಭ್ರಮದ ಅಡಿಯಲ್ಲಿ 'ಮಹಿಳಾ ಆರೋಗ್ಯ ದೇಶದ ಸೌಭಾಗ್ಯ' ಎಂಬ ವಿಷಯದ ಕುರಿತ ಉಪನ್ಯಾಸ ಕಾರ್ಯಕ್ರಮ ನಡೆಯಿತು.
ಹೊಸಸೇತುವೆ ರಸ್ತೆಯ ವಿಶ್ವೇಶ್ವರಾಯ ವಿದ್ಯಾ ಸಂಸ್ಥೆಯಲ್ಲಿ ಹಮ್ಮಿಕೊಳ್ಳ ಲಾಗಿದ್ದ ಕಾರ್ಯಕ್ರಮದಲ್ಲಿ ಸ್ತ್ರೀ ರೋಗ ತಜ್ಞೆ ಡಾ:ವೀಣಾ ಭಟ್ ರವರು SOGS ರಜತ ಸಂಭ್ರಮದ ಅಡಿಯಲ್ಲಿ 'ಮಹಿಳಾ ಆರೋಗ್ಯ ದೇಶದ ಸೌಭಾಗ್ಯ' ಎಂಬ ವಿಷಯದ ಕುರಿತ ಉಪನ್ಯಾಸ ನೀಡಿದರು.
ಬಿ.ಇಡಿ. ಪ್ರಶಿಕ್ಷಣಾರ್ಥಿಗಳು ಹಾಗೂ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ಗಳಿಗೆ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.