ವಿಜಯ ಸಂಘರ್ಷ ನ್ಯೂಸ್
ಭದ್ರಾವತಿ: ಹೇಳಿ ಕೇಳಿ ಶಿಕ್ಷಕಿ, ಚಾಕ್ ಪೀಸ್ ಇಡುವ ಕೈಗಳು ತನ್ನ ಪ್ರಿಯಕರ ನೊಂದಿಗೆ ಸೇರಿ ತಾಳಿ ಕಟ್ಟಿದ ಗಂಡ ನನ್ನೇ ಫಿನಿಷ್ ಮಾಡಿದಳು. 2016 ರಲ್ಲಿ ಘಟನೆ ನಡೆದಿದ್ದು ನ್ಯಾಯಾಲಯ ಈ ಪ್ರಕರಣದ ಆರೋಪಿ ಗಳಿಗೆ ಜೈಲಿನ ಕಂಬಿ ಎಣಿಸುವಂತೆ ಮಾಡಿದೆ.
ನಗರದ ಜನ್ನಾಪುರ ಎನ್ ಟಿ ಬಿ ರಸ್ತೆಯ ಶಿಕ್ಷಕಿ ಲಕ್ಷ್ಮಿ ಮೊದಲನೇ ಆರೋಪಿಯಾದರೆ, ಕೃಷ್ಣಮೂರ್ತಿ @ ಕಿಟ್ಟಿ ಬಿನ್ ರಾಮಯ್ಯ, ಡ್ರೈವರ್ ಕೆಲಸ ವಾಸ ಎನ್.ಟಿ.ಬಿ ರಸ್ತೆ, ಜನ್ನಾಪುರ ಎರಡನೇ, ಶಿವರಾಜ @ ಶಿಷು @ ಶಿವರಾಜು ಹೋಂಗಾರ್ಡ್ ಕೆಲಸ ವಾಸ ಎನ್.ಟಿ.ಬಿ ರಸ್ತೆ, ಜನ್ನಾಪುರ ಇವರು ಪ್ರಕರಣದ ಮೂವರು ಆರೋಪಿಗಳು.
ಲಕ್ಷ್ಮೀ ಸರ್ಕಾರಿ ಶಾಲಾ ಶಿಕ್ಷಕಿಯಾಗಿ ಯಾಗಿದ್ದು, ಗಂಡ ಇಂತಿಯಾಜ್ ಪ್ರಾಥಮಿಕ ಶಾಲೆ ಶಿಕ್ಷಕರಾಗಿದ್ದರು. ಸುಮಾರು 5 ವರ್ಷ ಗಳ ಹಿಂದೆ ಲಕ್ಷ್ಮೀ ಗುಲ್ಬರ್ಗ ಜಿಲ್ಲೆಯಲ್ಲಿ ಇದ್ದಾಗ ಇಂತಿಯಾಜ್ ಹಾಗೂ ಲಕ್ಷ್ಮೀ ನಡುವೆ ಪ್ರೇಮಾಂಕುರವಾಗಿದೆ. ಈ ಪ್ರೀತಿ ಮದುವೆ ತನಕ ಹೋಗಿ ರಿಜಿಸ್ಟರ್ ಮ್ಯಾರೇಜ್ ಆಗಿದ್ದಾರೆ. ಮದುವೆ ನಂತರ ಇಂತಿಯಾಜ್ ಗುಲ್ಬರ್ಗದಿಂದ ಸೊರಬ ತಾಲೂಕಿನ ತೆಲಗುಂದ ಗ್ರಾಮದ ಸರ್ಕಾರಿ ಶಾಲೆಗೆ ವರ್ಗಾವಣೆ ಯಾಗಿ ಬಂದಿದ್ದರು. ಇಬ್ಬರ ಜೀವನ ರೈಲು ಬಂಡೆಯಂತೆ ಸುಮಧುರುವಾಗಿ ಸಾಗುತ್ತಿತ್ತು. ಈ ನಡುವೆ ಪತ್ನಿ ಲಕ್ಷ್ಮೀ ಕೂಡ ಭದ್ರಾವತಿಯ ಅಂತರ ಗಂಗೆ ಶಾಲೆಗೆ ಬಂದು ಕೆಲಸ ಮಾಡುತ್ತಿದ್ದರು. ಹೀಗಿರುವಾಗ ಲಕ್ಷ್ಮೀ ಬಾಲ್ಯ ಸ್ನೇಹಿತ ಕೃಷ್ಣಮೂರ್ತಿ ಎಂಟ್ರಿ ಕೊಟ್ಟಿದ್ದ. ಆತನೂ ಸಹ ಲಕ್ಷ್ಮೀ ಮನೆ ಬಳಿಯೇ ಮನೆ ಮಾಡಿ ಕೊಂಡಿದ್ದ. ಇದನ್ನೇ ಸದುಪಯೋಗ ಮಾಡಿಕೊಂಡಿದ್ದ ಕಿಟ್ಟಿ ಲಕ್ಷ್ಮೀಯೊಂದಿಗೆ ಸಲುಗೆಯಿಂದ ಇರುವಂತೆ ಮಾಡಿತ್ತು. ಇದು ಗಂಡ ಇಂತಿಯಾಜ್ ಗೆ ಇಷ್ಟವಾಗಲಿಲ್ಲ. ಪರಿಣಾಮ ದಂಪತಿಯಲ್ಲಿ ಕಲಹ ಉಂಟಾಯಿತು. ಅಲ್ಲದೇ ಇವರ ಸಂಬಂಧದ ಬಗ್ಗೆ,, ಅನುಮಾನ ಬಂದು ಕೃಷ್ಣಮೂರ್ತಿ ಯೊಂದಿಗೆ ಏಕೆ ಹೆಚ್ಚಾಗಿ ಪೋನ್ ಮಾಡುವುದು, ಮೆಸೇಜ್ ಮಾಡುವುದು ಮಾಡುತ್ತೀಯಾ ಎಂದು ಆಗಾಗ, ಜಗಳ ಮಾಡುತ್ತಿದ್ದರು. ಈ ವಿಷಯವಾಗಿ ಸ್ನೇಹಿತ ಕೃಷ್ಣಮೂರ್ತಿ ಹಾಗೂ ಲಕ್ಷ್ಮೀ ಗೆ ಸಂಬಂಧಿ ಕರು ಬುದ್ದಿವಾದ ಹೇಳಿದ್ದರೂ ಪ್ರಯೋಜನ ವಾಗಿಲ್ಲ. ಹೀಗಿರುವಾಗ ಇಂತಿಯಾಜ್ ಹೆಂಡತಿ ಮನೆಗೆ ಹೋಗಿ ಹೆಂಡತಿ ಯನ್ನು ರಂಜಾನ್ ಹಬ್ಬಕ್ಕೆ ಮನೆಗೆ ಕರೆದುಕೊಂಡು ಬರುತ್ತೇನೆ ಎಂದು ಹೋಗಿದ್ದರು. ಆಗ ಪ್ರಿಯಕರನ ಸಂಬಂಧ ಇಬ್ಬರ ನಡುವೆ ಜಗಳ ವಾಗಿದೆ. ಜಗಳದ ಭರದಲ್ಲಿ ಹೆಂಡತಿ ಲಕ್ಷ್ಮೀ ಗಂಡನ ತಲೆಗೆ ಆಯುಧದಿಂದ ಹಲ್ಲೆ ಮಾಡಿದ್ದಾಳೆ. ಆಗ ಗಂಡ ತೀವ್ರ ರಕ್ತಸ್ರಾವ ವಾಗಿ ಸ್ಥಳದಲ್ಲಿ ಮೃತಪಟ್ಟಿ ದ್ದರು. ಬಳಿಕ ಪತಿ ಇಂತಿಯಾಜ್ ತಮ್ಮನಿಗೆ ಲಕ್ಷ್ಮೀ ಪೋನ್ ಮಾಡಿ ಬೇಗ ಭದ್ರಾವತಿಗೆ ಬಾ ನಿನ್ನ ಹತ್ತಿರ ಮಾತ ನಾಡುವುದಿದೆ ಎಂದು ಹೇಳಿದ್ದಾಳೆ. ಮೃತ ಇಂತಿಯಾಜ್ ತಮ್ಮ ಸೀದಾ ಮನೆಯಿಂದ ಹೊರಟು ಭದ್ರಾವತಿಯ ಲಕ್ಷ್ಮಿ ಮನೆಗೆ ಬಂದಿದ್ದಾನೆ. ತಮ್ಮ ಹೋಗುತ್ತಿದ್ದಂತೆ ಲಕ್ಷ್ಮೀ ಜೋರಾಗಿ ಅಳಲು ಶುರುಮಾಡಿ ದ್ದಾಳೆ. ಅಲ್ಲದೇ ಏನಾಯಿತು ಹೇಳಿ ಏಕೆ ಅಳುತ್ತಿರಾ ಎಂದು ಕೇಳಿದ್ದಾರೆ. ಅದಕ್ಕೆ ಲಕ್ಷ್ಮೀ
ನಿನ್ನ ಅಣ್ಣ ಹೋದರು ಎಂದು ಹೇಳಿದ್ದಾಳೆ. ನಿನ್ನೆ ರಾತ್ರಿ 7-30 ಕ್ಕೆ ನನಗೂ ಮತ್ತು ನನ್ನ ಗಂಡನಿಗೂ ಜಗಳವಾಗಿತ್ತು ಎಂದಿದ್ದಾಳೆ.
ಲಕ್ಷ್ಮೀ ಕೊಟ್ಟ ಕಾರಣವೇನು?
ಇಂತಿಯಾಜ್ ಸುಮಾರು ದಿನಗಳಿಂದ ನನ್ನ ಸ್ಯಾಲರಿಯಲಿ, ಲೋನ್ ಮಾಡಿಕೊಡು ಮತ್ತು ಕೃಷ್ಣಮೂರ್ತಿ ಯೊಂದಿಗೆ ಸಂಬಂಧ ಇದೆ ಎಂದು ಅನುಮಾನಗೊಂಡು ಹಿಂಸೆ ಮಾಡಿ ಹೊಡೆಯುತ್ತಿದ್ದರು. ಈ ದಿನ ಅದೇ ವಿಷಯದಲ್ಲಿ ವಿಪರೀತ ಜಗಳ ಮಾಡಿ ನನಗೆ ತುಂಬಾ ಹೊಡೆದರು. ನನಗೆ ಮೈ ಕೈ ನೋವಾಗಿ ಸಿಟ್ಟಿನಿಂದ ಮನೆ ಯಲ್ಲಿದ್ದ ಒಂದು ಕಬ್ಬಿಣದ ಪೈಪ್ ತೆಗೆದುಕೊಂಡು ನನ್ನ ಗಂಡನ ತಲೆಗೆ ಹೊಡೆದೆ. ಆಗ ಅವರು ಕೆಳಕ್ಕೆ ಬಿದ್ದರು. ತಲೆಯಲಿ ರಕ್ತ, ಬಂದು ನೆಲವೆಲ್ಲ, ರಕ್ತವಾಯಿತು. ನಾನು ಗಾಬರಿಯಾಗಿ ಏನು ಮಾಡಬೇಕೆಂದು ಗೊತ್ತಾಗದೆ ನನ್ನ ಪರಿಚಯದ ಮತ್ತು ಪಕ್ಕದ ಮನೆಯವರಾದ ಶಿವರಾಜ ಮತ್ತು ಅವರ ತಮ್ಮ ಕೃಷ್ಣಮೂರ್ತಿ ರವರ ಮನೆಗೆ ಹೋಗಿ ಬಾಗಿಲು ಬಡಿದು ಅವರಿಗೆ ವಿಷಯ ತಿಳಿಸಿದೆ ಎಂದಳು.
ಭದ್ರಾನದಿಗೆ ಶವ:-
ಇಂತಿಯಾಜ್ ಮೃತರ ನಂತರ ಲಕ್ಷ್ಮೀ ಹಾಗೂ ಕೃಷ್ಣಮೂರ್ತಿ ಸ್ನೇಹಿತ ಶಿವರಾಜ್ ಹೆಣವನ್ನು ಹೊಳೆಗೆ ಎಸೆಯೋಣ ಎಂದು ತೀರ್ಮಾನಿಸಿ ದರು. ಬಳಿಕ ಹೆಣವನ್ನು ಬಟ್ಟೆಯಲ್ಲಿ, ಸುತ್ತಿ ರಾತ್ರಿ ಶವವನ್ನು ಹೊಳೆಗೆ ಎಸೆದಿದ್ದಾರೆ. ಅಲ್ಲದೇ ನಾನು ಕೂಡ ಸಾಯಬೇಕು ಎಂದುಕೊಂಡೆ ಆದರೆ ನನ್ನ ಮಗು ಚಿಕ್ಕದಿದೆ ಹಾಗಾಗಿ ಬದುಕಿದ್ದೀನಿ, ದಯವಿಟ್ಟು ಯಾರಿಗೂ ಹೇಳಬೇಡ, ನೀನೇ ನನ್ನನ್ನು ಕಾಪಾಡ ಬೇಕು.ಲಕ್ಷ್ಮೀ ತನ್ನ ಸ್ನೇಹಿತರಿಗೆ ಹೇಳಿದ್ದಳು. ಈ ಸಂಬಂಧ ನ್ಯೂಟನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣ ಬೆನ್ನತ್ತಿದ ಆಗಿನ ಪಿಎಸ್ ಐ ಚಂದ್ರಶೇಖರ್ ಎಲ್ಲವನ್ನು ತನಿಖೆ ಕೈಗೊಂಡು ಕೋರ್ಟ್ ಗೆ ಚಾರ್ಜ್ ಶೀಟ್ ಸಲ್ಲಿಸಿದ್ದರು. ಸರ್ಕಾರಿ ಅಭಿಯೋಜಕಿ ರತ್ನಮ್ಮ ಪಿ.ವಾದ ಮಂಡಿಸಿ ಜೈಲು ಶಿಕ್ಷೆ ಕೊಡಿಸುವಲ್ಲಿ ಯಶಸ್ವಿಯಾದರು.
ಶಿಕ್ಷಕಿ ಲಕ್ಷ್ಮಿ , ಕೃಷ್ಣಮೂರ್ತಿ ಇವರು ಪ್ರಕರಣದ ಮೂವರು ಆರೋಪಿ ಗಳಾಗಿದ್ದು, ಮೊದಲ ಇಬ್ಬರಿಗೆ ಜೀವಾವಧಿ ಶಿಕ್ಷೆ, ಮೂರನೇ ಆರೋಪಿಗೆ ನ್ಯಾಯಾಲಯ ಏಳು ವರ್ಷ ಶಿಕ್ಷೆ ವಿಧಿಸಿದೆ.