ಇಂಜಿನೀಯರ‍್ಸ್ ದಿನಾಚರಣೆ ಅಂಗವಾಗಿ ವಿಐಎಸ್‌ಪಿ ಯಿಂದ ನಾನಾ ಕಾರ್ಯ ಕ್ರಮಗಳು

ವಿಜಯ ಸಂಘರ್ಷ ನ್ಯೂಸ್ 
ಭದ್ರಾವತಿ:ಅತ್ಯುತ್ತಮ ಇಂಜಿನೀಯರ್, ರಾಜನೀತಿಜ್ಞ ದಾರ್ಶನಿಕ,ಸರ್.ಎಂ. ವಿಶ್ವೇಶ್ವರಾಯ ರವರ ಜನ್ಮದಿನವನ್ನು ಇಂಜಿನೀಯರ‍್ಸ್ ದಿನಾಚರಣೆಯನ್ನಾಗಿ ಸೋಮವಾರ ವಿಐಎಸ್‌ಪಿ ಕಾರ್ಖಾನೆಯಲ್ಲಿ ಆಚರಿಸಿ ಗೌರವ ವಂದನೆಗಳನ್ನು ಸಲ್ಲಿಸಿತು.

 ಕಾರ್ಯಪಾಲಕ ನಿರ್ದೇಶಕ ಬಿ.ಎಲ್. ಚಂದ್ವಾನಿ, ಮುಖ್ಯ ಮಹಾಪ್ರಬಂಧಕ (ಸ್ಥಾವರ)ಕೆ.ಎಸ್. ಸುರೇಶ್, ಮಹಾ ಪ್ರಬಂಧಕ ಎಲ್.ಪ್ರವೀಣ್ ಕುಮಾರ್,(ಮಾನವ ಸಂಪನ್ಮೂಲ ಮತ್ತು ಸಾರ್ವಜನಿಕ ಸಂಪರ್ಕ) ಕಾರ್ಮಿಕರ ಸಂಘದ ಅಧ್ಯಕ್ಷ ಜೆ.ಜಗದೀಶ್, ಅಧಿಕಾರಿಗಳ ಸಂಘದ ಪಾರ್ಥಸಾರಥಿ ಮಿಶ್ರಾ ಇವರುಗಳು ಕಾರ್ಖಾನೆ ಆವರಣದೊಳಗಿರುವ ಸರ್. ಎಂ. ವಿಶ್ವೇಶ್ವರಾಯರವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. 

ಕಾರ್ಯಕ್ರಮದಲ್ಲಿ ಅಧಿಕಾರಿಗಳು, ಕಾರ್ಮಿಕರು, ಗುತ್ತಿಗೆ ಕಾರ್ಮಿಕರು ಭಾಗವಹಿಸಿ ಮಹಾನ್ ವ್ಯಕ್ತಿತ್ವಕ್ಕೆ ತಮ್ಮ ಗೌರವ ವಂದನೆಗಳನ್ನು ಸಲ್ಲಿಸಿದರು.
ಮಾವಿನಕೆರೆ ಗ್ರಾಮದಲ್ಲಿ ಉಚಿತ ವೈಧ್ಯಕೀಯ ಆರೋಗ್ಯ ಶಿಬಿರ:
ಸಹ್ಯಾದ್ರಿ ನಾರಾಯಣ ಮಲ್ಟಿಸ್ಪೆಷಾ ಲಿಟಿ ಆಸ್ಪತ್ರೆ, ಶಂಕರ ಕಣ್ಣಿನ ಆಸ್ಪತ್ರೆ, ತಾಲ್ಲೂಕು ಸರ್ಕಾರಿ ಆಸ್ಪತ್ರೆ ಮತ್ತು ವಿಐಎಸ್‌ಎಲ್ ಆಸ್ಪತ್ರೆಗಳ ಸಹಯೋಗದೊಂದಿಗೆ ಮಾವಿನಕೆರೆ ಗ್ರಾಮದಲ್ಲಿ ಸಮಗ್ರ ಉಚಿತ ವೈಧ್ಯಕೀಯ ಆರೋಗ್ಯ ತಪಾಸಣಾ ಕಾರ್ಯಕ್ರಮ ಯಶಸ್ವಿಯಾಗಿ ಆಯೋಜಿಸಿತು.
ಹೃದಯಶಾಸ್ತ್ರ, ಮೂಳೆ ಚಿಕಿತ್ಸೆ, ಸಾಮಾನ್ಯ ತಪಾಸಣೆ, ನೇತ್ರವಿಜ್ಞಾನ, ದಂತವೈದ್ಯಶಾಸ್ತ್ರ, ನರರೋಗ ಮತ್ತು ಸ್ತ್ರಿರೋಗದಂತಹ ಕ್ಷೇತ್ರ ಗಳಲ್ಲಿ ತಜ್ಞವೈದ್ಯರು ಭಾಗವಹಿಸುವ ಮೂಲಕ ಆರೋಗ್ಯ ಸಮಾಲೋಚನೆ ಮತ್ತು ರೋಗನಿರ್ಣಯ ಸೇವೆಗಳನ್ನು ನೀಡಲಾಯಿತು. ಈ ಉಪಕ್ರಮದ ಭಾಗವಾಗಿ ರಕ್ತದೊತ್ತಡ (ಬಿಪಿ), ರಕ್ತದಲ್ಲಿನ ಸಕ್ಕರೆ ಪರೀಕ್ಷೆ, ಕಣ್ಣಿನ ಪರೀಕ್ಷೆ, ದಂತ ತಪಾಸಣೆ, ಎಲೆಕ್ಟ್ರಿಕಾರ್ಡಿಯೋಗ್ರಾಮ್ (ಇಸಿಜಿ), 2ಡಿ ಎಕೋಕಾರ್ಡಿಯೋಗ್ರಫಿ (೨ಡಿ ಎಕೋ) ನರರೋಗ ಮತ್ತು ಸ್ತ್ರಿಸಂಬoಧಿತ ರೋಗಗಳ ತಪಾಸಣೆ ಮಾಡಲಾಯಿತು.

ಕಾರ್ಯಪಾಲಕ ನಿರ್ದೇಶಕ ಬಿ.ಎಲ್. ಚಾಂದವಾನಿ ಕಾರ್ಯಕ್ರಮ ಉದ್ಘಾಟಿಸಿ ದರು. ಮಾವಿನಕೆರೆ ಗ್ರಾಮ ಪಂಚಾಯ್ತಿ ಅಧ್ಯಕ್ಷ ಸುರೇಶ, ಸದಸ್ಯ ಉಮೇಶ್,, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪ್ರೀತಿ, ವಿಐಎಸ್‌ಎಲ್‌ನ ಅಧಿಕಾರಿ ಎಲ್. ಪ್ರವೀಣ್ ಕುಮಾರ್, ಡಾ:ಕೆ.ಎಸ್.ಸುಜೀತ್ ಕುಮಾರ್, ಶ್ರೀ ಅಜಯ್ ಸೋಂಕುಮಾರ್, ಡಾ|| ಎಸ್.ಎನ್. ಸುರೇಶ್, ಎಮ್.ಎಲ್. ಯೋಗೀಶ್, ಅಪರ್ಣ, ಶಂಕರ ಕಣ್ಣಿನ ಆಸ್ಪತ್ರೆಯ ಡಾ|| ಸುಶ್ಮಿತ, ಪ್ರದೀಪ. ಆರ್.ಎಸ್, ಶಿವ, ನೇತ್ರ ತಜ್ಞ, ಸಂಗೀತ, ದೀಪಿಕ. ಸಹ್ಯಾದ್ರಿ ನಾರಾಯಣ ಆಸ್ಪತ್ರೆಯ ಡಾ|| ಶರತ್, ಡಾ|| ನಿತಿನ್, ಡಾ|| ಸಾಹಿತ್ಯ, ಗಣೇಶ್, ಮಮತ, ಭಾರತಿ, ತಾಲ್ಲೂಕು ಸರ್ಕಾರಿ ಆಸ್ಪತ್ರೆಯ ಡಾ|| ಗಿರೀಶ್, ಹರೀಶ್, ಮೋಹನ್, ಕು.ನ್ಯಾನ್ಸಿ, ಮಂಜುಳ ಮತ್ತು ಅನಿತ. ಭಾಗವಹಿಸಿದ್ದರು. 264 ಗ್ರಾಮಸ್ಥರು ಈ ಶಿಬಿರದ ಸದುಪ ಯೋಗ ಪಡಿಸಿ ಕೊಂಡರು. ಭಾಗವಹಿ ಸಿದ್ದ ಶಿಬಿರಾರ್ಥಿಗಳಿಗೆ ಉಚಿತ ಔಷಧಿಗಳನ್ನು ವಿತರಿಸಲಾಯಿತು.

ಸೈಲ್-ವಿಐಎಸ್‌ಎಲ್ ನ ‘ಹಸಿರೆಡೆಗೆ-ನಮ್ಮ ನಡೆ’ ಉಪಕ್ರಮದಡಿಯಲ್ಲಿ ನುಗ್ಗೆ ಮತ್ತು ಪಪ್ಪಾಯಿಯ ಉತ್ತಮ ತಳಿಯ 1500 ಬೀಜಗಳನ್ನು ಗ್ರಾಮಸ್ಥರಿಗೆ ಉಚಿತವಾಗಿ ವಿತರಿಸಲಾಯಿತು.

1 ಕಾಮೆಂಟ್‌ಗಳು

ನವೀನ ಹಳೆಯದು