ವಿಜಯ ಸಂಘರ್ಷ ನ್ಯೂಸ್
ಭದ್ರಾವತಿ: ಮಾಜಿ ಸಿಎಂ ದಿ: ಜೆ.ಹೆಚ್ ಪಟೇಲ್ ರ ಹೋರಾಟ ನಡೆದು ಬಂದ ಹಾದಿ ಮಂತ್ರಿ, ಮುಖ್ಯಮಂತ್ರಿಗಳಾ ದಾಗ ರಾಜ್ಯದ ರೈತ ಮತ್ತು ಕಾರ್ಮಿಕ ವರ್ಗಕ್ಕೆ ಎಲ್ಲಾ ಸಮಾಜದ ಪರವಾಗಿ ತೆಗೆದುಕೊಂಡ ಉತ್ತಮ ಕಾರ್ಯಗಳ ಕುರಿತು ಇಂದಿನ ಯುವ ಮುಖಂಡರು, ರಾಜಕಾರಣಿಗಳಿಗೆ ಯುವಕರಿಗೆ ಆಡಳಿತಗಾರರಿಗೆ ಧೀಮಂತ ನಾಯಕನ ಜೀವನ ಚರಿತ್ರೆ ಪರಿಚಯಿ ಸುವ ಮೂಲಕ ಪಟೇಲರ ಚಿಂತನೆ ಗಳನ್ನು ತಿಳಿಸಬೇಕಿದೆ ಎಂದು ಸಾಮಾ ಜಿಕ ಹೋರಾಟಗಾರ ಶಶಿಕುಮಾರ್ ಎಸ್ ಗೌಡ ಒತ್ತಾಯಿಸಿದರು.
ಗುರುವಾರ ತಾಲೂಕು ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿ, ಪಟೇಲರ ಸಮಗ್ರ ಜೀವನ ಚರಿತ್ರೆ ಯನ್ನು ತಲುಪಿಸುವ ಸಲುವಾಗಿ ವಿವಿ ಯನ್ನು ಸ್ಥಾಪಿಸಿ ಅಥವಾ ಅಸ್ತಿತ್ವದಲ್ಲಿ ರುವ ವಿವಿಗೆ ಪಟೇಲರ ಹೆಸರಿಡ ಬೇಕೆಂದು ಆಗ್ರಹಿಸಿ ತಹಸೀಲ್ದಾರ್ ರವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ ಅವರು ಪಟೇಲರ ಚಿಂತನೆಗಳು ಉಳಿಸಿಕೊಡಬೇಕೆಂದು ಮನವಿಯಲ್ಲಿ ಕೊರಿದ್ದಾರೆ.
ಪ್ರತಿಭಟನೆಯಲ್ಲಿ ಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಬಿ.ಎನ್. ರಾಜು ಸೇರಿದಂತೆ ಅನೇಕರು ಭಾಗವಹಿಸಿದ್ದರು.