ಬಸ್ ಹರಿದು ಸಾವಿಗಿಡಾದ ವ್ಯಕ್ತಿ ಕುಟುಂಬಕ್ಕೆ ಆರ್‌.ಟಿ.ಓ ಮಲ್ಲಿಕಾರ್ಜುನ್ ಸಾಂತ್ವಾನ

ವಿಜಯ ಸಂಘರ್ಷ ನ್ಯೂಸ್ 
ಕೆ ಆರ್ ಪೇಟೆ: ತಾಲ್ಲೂಕಿನ ಕಸಬಾ ಹೋಬಳಿಯ ಬಳ್ಳೆಕೆರೆ ಗ್ರಾಮದ ನಿವಾಸಿ ಹರೀಶ್(35) ಕೆ.ಆರ್.ಪೇಟೆ ಕೆ.ಎಸ್.ಆರ್ .ಟಿ.ಸಿ ನಿಲ್ದಾಣದ ಸಮೀಪ ರಸ್ತೆ ಬದಿ ಯಲ್ಲಿ ನಿಂತಿದ್ದ ಹರೀಶ್ ಗೆ ಬೆಂಗಳೂರು ಕಡೆಗೆ ತೆರಳುತ್ತಿದ್ದ ಕೆ.ಎಸ್.ಆರ್.ಟಿ.ಸಿ ಬಸ್ ಹರೀಶ್ ಮೇಲೆ ಹರಿದು ಸ್ಥಳದಲ್ಲೆ ತೀವ್ರ ಗಾಯಗೊಂಡು ನರಳುತ್ತಿದ್ದ ಅವರನ್ನ ಸ್ಥಳೀಯರ ಸಾಕಾರದಿಂದ ತಾಲ್ಲೂಕು ಆಸ್ಪತ್ರೆಗೆ ರವಾನಿಸಿದ್ದಾರೆ. ಚಿಕಿತ್ಸೆ ಫಲಕಾರಿ ಯಾಗದೆ ವ್ಯಕ್ತಿ ಆಸ್ಪತ್ರೆಯಲ್ಲಿ ಸಾವಿಗೀಡಾಗಿದ್ದಾರೆ. 

ಕುಟುಂಬಕ್ಕೆ ಆಧಾರವಾಗಿದ್ದ ಹರೀಶ ಅವರ ಸಾವಿನ ಸುದ್ದಿ ತಿಳಿದು ಮರಣೋತ್ತರ ಪರೀಕ್ಷೆಗಾಗಿ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯ ಶವಗಾರದಲ್ಲಿದ ಮೃತ ದರ್ಶನ ಪಡೆದು ಕುಟುಂಬಸ್ಥರಿಗೆ ಸಾಂತ್ವಾನ ಜೊತೆಗೆ ಆರ್ಥಿಕ ಸಹಾಯ ನೀಡಿ ಮಾತನಾಡಿದ ಸಮಾಜ ಸೇವಕ ಆರ್.ಟಿ.ಓ ಮಲ್ಲಿಕಾರ್ಜುನ್ ಸಾರ್ವಜನಿ ಕರು ರಸ್ತೆ ಬದಿ ನಡೆದುಕೊಂಡು ಹೋಗ ಬೇಕಾದರೆ ಅಥವಾ ವಾಹನಗಳಲ್ಲಿ ಸಂಚರಿಸುವಾಗ ಜಾಗೃತೆಯಿಂದ ಚಲಿಸ ಬೇಕು ಇಲ್ಲದಿದ್ದರೆ ಇಂತಹ ಅಪಾಯಕಾರಿ ಅಪಘಾತಗಳನ್ನು ಮರು ಕಳಿಸುತ್ತವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಕೆ.ಆರ್.ಪೇಟೆ ಪಟ್ಟಣ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಈ ಸಂದರ್ಭದಲ್ಲಿ ಮೃತ ಹರೀಶ್ ತಂದೆ ಕೆಂಪಟ್ಟೆಗೌಡ,ತಾಯಿ ಅನುಲಾ, ಮುಖಂಡರಾದ ಕೃಷ್ಣೆಗೌಡ, ಧನಂಜಯ್, ಪುರುಷೋತ್ತಮ್, ವಕೀಲ ಬೋರೇಗೌಡ, ಭುವನೇಶ್,ಸ್ವಾಮಿ,ಎ.ಎಸ್.ಐ ಚಂದ್ರು ಸೇರಿದಂತೆ ಉಪಸ್ಥಿತರಿದ್ದರು.

*✍️ಸುದ್ದಿಯೊಂದಿಗೆ ಮನು ಮಾಕವಳ್ಳಿ ಕೆ ಆರ್ ಪೇಟೆ*

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು