ಶಿವಮೊಗ್ಗ-ರಕ್ತದಾನಿಗಳಿಗಿಂತ ಶ್ರೇಷ್ಠ ದಾನಿಗಳು ಮತ್ತೊಬ್ಬರಿಲ್ಲ:ಡಾ ದಿನೇಶ್

ವಿಜಯ ಸಂಘರ್ಷ ನ್ಯೂಸ್ 
ಶಿವಮೊಗ್ಗ: ದಾನಗಳಲ್ಲಿ ಅತ್ಯಂತ ಪ್ರಮುಖ ವಾದ ದಾನ ರಕ್ತದಾನ. ಇಂದು ಜಿಲ್ಲೆಯಲ್ಲಿ ರಕ್ತದಾನದ ಕೊರತೆ ಯಿಂದ ಸಾಕಷ್ಟು ಜನ ತೊಂದರೆಗೆ ಒಳಗಾಗುತ್ತಿದ್ದಾರೆ ಹಾಗೂ ಪ್ರಾಣವನ್ನು ಸಹ ಕಳೆದುಕೊಳ್ಳುತ್ತಿದ್ದಾರೆ ಸಕಾಲದಲ್ಲಿ ಅಗತ್ಯವಾದ ರಕ್ತ ಸಿಗದೇ ಸಾರ್ವಜ ನಿಕರು ಪರದಾಡುತ್ತಿದ್ದಾರೆ. ಆದ್ದರಿಂದ ಪ್ರತಿಯೊಬ್ಬರೂ ರಕ್ತದಾನ ಮಾಡುವು ದರ ಮುಖಾಂತರ ಸದೃಢವಾದ ಆರೋಗ್ಯವಂತ ಸಮಾಜವನ್ನು ನಿರ್ಮಾಣ ಮಾಡೋಣ ಎಂದು ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಡಾ: ದಿನೇಶ್ ಅವರು ನುಡಿದರು
ರಾಷ್ಟ್ರೀಯ ರಕ್ತದಾನ ದಿನಾಚರಣೆಯ ಅಂಗವಾಗಿ ರೆಡ್ ಕ್ರಾಸ್ ಸಂಜೀವಿನಿ ಬ್ಲಡ್ ಬ್ಯಾಂಕಿನಲ್ಲಿ. ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಹಾಗೂ ಸಂಜೀವಿನಿ ರೆಡ್ ಕ್ರಾಸ್ ಸಂಸ್ಥೆ ಮತ್ತು ವಿವಿಧ ಸಂಘಟನೆ ಗಳಿಂದ ಆಯೋಜಿಸಲಾಗಿದ್ದ ಬೃಹತ್ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.

ಇತ್ತೀಚಿನ ವಿಶ್ವ ಆರೋಗ್ಯ ಸಂಸ್ಥೆಯ ವರದಿ ಪ್ರಕಾರ ರಕ್ತದಾನದಿಂದ ಶೇಕಡ 80% ಹೃದಯಾಘಾತ ಕಡಿಮೆಯಾಗು ತ್ತದೆ ಹಾಗೂ ನಮಗೆ ದೇಹದಲ್ಲಿ ಗೊತ್ತಿಲ್ಲದೇ ಇರುವಂತಹ ಕಾಯಿಲೆ ಗಳು ಸಹ ಪತ್ತೆಯಾಗುತ್ತವೆ ಈ ನಿಟ್ಟಿ ನಲ್ಲಿ ನಾವು ನೀವು ಎಲ್ಲರೂ ಸೇರಿ ರಕ್ತದಾನ ಮಾಡುವುದರ ಮುಖಾಂತರ ರಕ್ತದ ಕೊರತೆಯನ್ನು ನೀಗಿಸೋಣ ಎಂದು ನುಡಿದರು

ಇದೇ ಸಂದರ್ಭದಲ್ಲಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ವಿಜಯಕುಮಾರ್, ಮಾತನಾಡುತ್ತಾ ರಕ್ತದಾನಿಗಳು ಸಮಾಜದಲ್ಲಿ ನಿಜವಾದ ಹೀರೋಗಳು ರಕ್ತವನ್ನು ಕೃತಕವಾಗಿ ಉತ್ಪಾದನೆ ಮಾಡಲು ಆಗುವುದಿಲ್ಲ ದಾನಿಗಳಿಂದ ಮಾತ್ರ ಸಂಗ್ರಹಿಸಿದ ರಕ್ತವನ್ನು ಉಪಯೋಗಿಸಬಹುದು ಈ ನಿಟ್ಟಿನಲ್ಲಿ ಯುವಕ, ಯುವತಿಯರು ಹಾಗೂ ರಕ್ತದಾನ ಮಾಡಬೇಕು. ಸಮಾಜದಲ್ಲಿ ನಿಜವಾದ ದಾನಿಗಳಾಗ ಬೇಕು ಎಂದು ಕರೆ ನೀಡಿದರು

ರಕ್ತದಾನ ಶಿಬಿರದಲ್ಲಿ 118 ಬಾರಿ ರಕ್ತದಾನ ಮಾಡಿದ ಧರಣೇಂದ್ರ ದಿನಕರ್ ರಕ್ತದಾನದ ಮಹತ್ವವನ್ನು ತಿಳಿಸಿದರು.

ಕಾರ್ಯಕ್ರಮದಲ್ಲಿ ಚೇಂಬರ್ ಆಫ್ ಕಾಮರ್ಸ್ ನ ಖಜಾಂಚಿ ಆರ್ ಮನೋಹರ್ ಕಟೀಲ್ ಅಶೋಕ್ ಪೈ ಆಸ್ಪತ್ರೆಯ ಡಾ: ವಿಕ್ರಂ ಹಾಗೂ ರೆಡ್ ಕ್ರಾಸಿನ ಪದಾಧಿಕಾರಿಗಳು ಉಪಸ್ಥಿತ ರಿದ್ದರು. ಇದೇ ಸಂದರ್ಭದಲ್ಲಿ ದಾನಿ ಗಳಿಂದ ರಕ್ತದಾನ ನಡೆದು ದಾನಿಗಳಿಗೆ ಪ್ರಮಾಣ ಪತ್ರ ಹಾಗೂ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು