ಯುವಕರು ಸಂಗೊಳ್ಳಿ ರಾಯಣ್ಣರ ಆದರ್ಶಗುಣಗಳನ್ನು ಮೈಗೂಡಿಸಿಕೊಳ್ಳಿ: ಮಲ್ಲಿಕಾರ್ಜುನ್

ವಿಜಯ ಸಂಘರ್ಷ ನ್ಯೂಸ್ 
ಕೆ.ಆರ್.ಪೇಟೆ: ದೇಶ ಭಕ್ತ ಸಂಗೊಳ್ಳಿ ರಾಯಣ್ಣನಂತೆ ಇಂದಿನ ಯುವಕರು ದೇಶಭಕ್ತಿ ಮೆರೆಯುವುದರ ಜತಗೆ ಜೀವನದಲ್ಲಿ ಅವರ ಆದರ್ಶಗುಣ ಗಳನ್ನು ಮೈಗೂಡಿಸಿಕೊಂಡು ದೇಶ ಕ್ಕಾಗಿ ದುಡಿಯುವ ಕೆಲಸ ಮಾಡಬೇಕು ಎಂದು ಸಮಾಜ ಸೇವಕ ಆರ್.ಟಿ.ಓ ಮಲ್ಲಿಕಾರ್ಜುನ್ ಹೇಳಿದರು.

ತಾಲ್ಲೂಕಿನ ಕಿಕ್ಕೇರಿ ಹೋಬಳಿಯ ಬೇವಿನ ಹಳ್ಳಿ ಕೊಪ್ಪಲು ಗ್ರಾಮದ ಸಂಗೊಳ್ಳಿ ರಾಯಣ್ಣ ಯುವಕರ ಬಳಗದ ಸದಸ್ಯರು ಗ್ರಾಮದಲ್ಲಿ ನೂತನವಾಗಿ ಶ್ರೀ ಸಂಗೊಳ್ಳಿ ರಾಯಣ್ಣ ಪುತ್ಥಳಿ ನಿರ್ಮಾಣಕ್ಕೆ ಆರ್ಥಿಕ ಧನ ಸಹಾಯ ನೀಡಿ ಮಾತನಾಡಿದರು.

ಸಂಗೊಳ್ಳಿ ರಾಯಣ್ಣ ಒಂದು ಸಮುದಾಯಕ್ಕೆ ಸೇರಿದ ವ್ಯಕ್ತಿಯಲ್ಲ ಸದೃಢದ ಸಮಾಜದ ನಿರ್ಮಾಣಕ್ಕೆ ಹೋರಾಟ ನಡೆಸಿದ ಮಹಾನ್ ಶಕ್ತಿ ಅವರಲ್ಲಿ ಇದ್ದಂತಹ ದೇಶ ಪ್ರೇಮ, ಕೆಚ್ಚೆದೆಯ ವೀರಾವೇಶ ಪ್ರತಿಯೊಬ್ಬ ಯುವಕರಲ್ಲಿ ಬರಬೇಕು ಧರ್ಮ, ಜಾತಿ, ಎನ್ನದೇ ಸಂಗೊಳ್ಳಿರಾಯಣ್ಣ ನಂತಹ ವೀರ ಗುಣಲಕ್ಷಣಗಳನ್ನು ಯುವಕರು ಮೈಗೂಡಿಸಿ ಕೊಳ್ಳಬೇಕು. ಪುತ್ಥಳಿ ಉದ್ಘಾಟನಾ ದಿನದಂದು ಸಂಗೊಳ್ಳಿ ರಾಯಣ್ಣ ಚರಿತ್ರೆ ತಿಳಿದವರ ಸಂಪ ನ್ಮೂಲ ವ್ಯಕ್ತಿಗಳಿಂದ ಪ್ರಧಾನ ಭಾಷಣ ಗಾರರನ್ನ ಸ್ವಾಗತಿಸಿ ರಾಯಣ್ಣನ ಇತಿಹಾಸದ ಬಗ್ಗೆ ಯುವ ಪೀಳಿಗೆಗೆ ಬೆಳಕು ಚೆಲ್ಲುವ ಕಾರ್ಯಕೈಗೊಳ್ಳ ಬೇಕು ಹಾಗೂ ಬೇವಿನಹಳ್ಳಿ ಕೊಪ್ಪಲು ಯುವಕರು ಬರಿ ರಾಯಣ್ಣನ ಪುತ್ಥಳಿ ನಿರ್ಮಾಣಕ್ಕೆ ಸೀಮಿತ ರಾಗಬಾರದು ರಾಯಣ್ಣನಲ್ಲಿದ್ದ ಆದರ್ಶಗುಣಗಳನ್ನು ಮೈಗೂಡಿಸಿಕೊಂಡು ದೇಶಕ್ಕಾಗಿ ದುಡಿಯುವ ಕೆಲಸ ಯುವ ಸಮುದಾಯ ಮಾಡಬೇಕು ಎಂದರು.

ಈ ಸಂದರ್ಭದಲ್ಲಿ ತಾ.ಪಂ ಮಾಜಿ ಸದಸ್ಯ ದೇವರಾಜು, ಗ್ರಾ.ಪಂ ಸದಸ್ಯರಾದ ರವಿ, ಮುಖಂಡರಾದ ಚಿಕ್ಕ ಮಂದಗೆರೆ ಶಿವರಾಮು, ಸುರೇಶ್, ಶೇಖರ್, ನಾರಾಯಣ್, ಶ್ರೀನಿವಾಸ್, ನಾಗೇಶ್, ಮಂಜುನಾಥ್, ಮುರುಳಿ, ನಂಜುಂಡ, ಜವರೇಗೌಡ, ಷಣ್ಮುಖ, ಕೃಷ್ಣೆಗೌಡ, ರಂಗಸ್ವಾಮಿ, ಸಣ್ಣಪ್ಪ, ಯೋಗೇಶ್, ಸಂಗೊಳ್ಳಿ ರಾಯಣ್ಣ ಯುವಕರ ಬಳಗ ಸದಸ್ಯರು ಸೇರಿದಂತೆ ಉಪಸ್ಥಿತರಿದ್ದರು.

(✍️ಸುದ್ದಿಯೊಂದಿಗೆ ಮನು ಮಾಕವಳ್ಳಿ ಕೆ ಆರ್ ಪೇಟೆ)

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು