ಶಿವಮೊಗ್ಗ-ಹಿರಿಯ ನಾಗರಿಕರು ದೇವರ ಪ್ರತಿರೂಪ: ಕೆ.ಪಿ.ಶೆಟ್ಟಿ

ವಿಜಯ ಸಂಘರ್ಷ ನ್ಯೂಸ್ 
ಶಿವಮೊಗ್ಗ: ಹಿರಿಯ ನಾಗರಿಕರು ದೇವರ ಪ್ರತಿರೂಪ.ಅಶಕ್ತರು, ವೃದ್ಧರು, ಬುದ್ಧಿ ಮಾಂದ್ಯರ ಹಿರಿಯ ನಾಗರೀಕರ ಸೇವೆ ದೇವರನ್ನು ಪೂಜಿಸಿದಂತೆ ಎಂದು ರೋಟರಿ ಸಹಾಯಕ ಗೌರ್ನರ್ ಕೆ.ಪಿ.ಶೆಟ್ಟಿ ಅವರು ಅಭಿಮತ ವ್ಯಕ್ತಪಡಿಸಿದರು.
 
ಅವರು ಸೋಮವಾರ ನಗರದ ಗುಡ್ ಲಕ್ ಆರೈಕೆ ಕೇಂದ್ರದಲ್ಲಿ ಹಿರಿಯ ನಾಗರೀಕರ ದಿನಾಚರಣೆ ಅಂಗವಾಗಿ ಆಶ್ರಮ ವಾಸಿಗಳಿಗೆ ಅನ್ನಪೂರ್ಣ ಯೋಜನೆ ಅಡಿಯಲ್ಲಿ ಒಂದು ದಿನದ ಪ್ರಸಾದ ವ್ಯವಸ್ಥೆ ಹಾಗೂ ಗುಡ್ ಲಕ್ ಆರೈಕೆ ಕೇಂದ್ರಕ್ಕೆ ಬೇಕಾಗಿರುವ ಅಗತ್ಯ ವಸ್ತುಗಳು ಮತ್ತು ಮೈಕ್ ಸೆಟ್ ಅನ್ನು ನೀಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

 ಸಮಾಜದಲ್ಲಿ ಇಂದು ಹೊಂದಾಣಿಕೆ ಪ್ರೀತಿ ವಿಶ್ವಾಸ ಇದರ ಕೊರತೆ ಹೆಚ್ಚಾಗಿ ಕಾಣುತ್ತಿದೆ ಅನಾಥಾಶ್ರಮಗಳು ಹಾಗೂ ವೃದ್ಧಾಶ್ರಮ ಗಳು ಸಮಾಜದಲ್ಲಿ ಹೆಚ್ಚಾಗದಂತೆ ನಾವು ನೀವೆಲ್ಲರೂ ನೋಡಿಕೊಳ್ಳಬೇಕು. ನಮ್ಮ ಹಿರಿಯರು ನಮ್ಮ ಕುಟುಂಬಕ್ಕೆ ಮಾಡಿದ ತ್ಯಾಗ ಸೇವೆ ಹಾಗೂ ವ್ಯವಸ್ಥೆ ಎಂದು ಮರೆಯಲು ಸಾಧ್ಯವಿಲ್ಲ. ಆಧುನಿಕತೆ ಹೆಚ್ಚಾದಂತೆ ಪರಸ್ಪರರಲ್ಲಿ ಒಡನಾಟದ ಕೊರತೆ ಎದ್ದು ಕಾಣುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ರೋಟರಿ ಸಹಾಯಕ ಮಾಜಿ ಗೌರ್ನರ್ ವಿಜಯಕುಮಾರ್ ಮಾತನಾಡುತ್ತಾ, ತಂದೆ ತಾಯಿಗಳ ಗುರಿ ಹಿರಿಯರ ಆಶೀರ್ವಾದವೇ ನಮ್ಮ ಬೆನ್ನಿಗೆ ವಜ್ರ ಕವಚ ಅವರ ಮಾರ್ಗದರ್ಶನ ನಮ್ಮಲ್ಲಿ ಎಲ್ಲೂ ದಾರಿ ತಪ್ಪಾದ ಹಾಗೆ ನೋಡಿಕೊಳ್ಳು ತ್ತದೆ. ಸಂಸ್ಕಾರ ಹಾಗೂ ಮಾನವೀಯ ಮೌಲ್ಯಗಳ ಕೊರತೆ ಎದ್ದು ಕಾಣಿಸುತ್ತಿದೆ ಈ ನಿಟ್ಟಿನಲ್ಲಿ ನಮ್ಮ ಗುಡ್ ಲಕ್ ಆರೈಕೆ ಕೇಂದ್ರ ದಾನಿಗಳ ಸಹಾಯದಿಂದ ಯಾವುದೇ ಸರ್ಕಾರದ ನೆರವು ಇಲ್ಲದ ಹಾಗೆ ಪ್ರತಿನಿತ್ಯ ವ್ಯವಸ್ಥಿತವಾಗಿ ಒಂದು ಮಾದರಿ ಸಂಸ್ಥೆ ಯಾಗಿ ಹೊರಹೊಮ್ಮಿದೆ. ಜನರು ನಮ್ಮ ಹಾರೈಕೆ ಕೇಂದ್ರದ ಮೇಲೆ ಇಟ್ಟಂತಹ ಗೌರವ ಪ್ರೀತಿ ವಿಶ್ವಾಸಕ್ಕೆ ನಾವು ಚಿರಋಣಿ ಎಂದು ನುಡಿದರು. 

ಗುಡ್ ಲಕ್ ಆರೈಕೆ ಕೇಂದ್ರದ ಅಧ್ಯಕ್ಷ ಯು. ರವೀಂದ್ರನಾಥ್ ಐತಾಳ್ ಮಾತನಾಡುತ್ತಾ ಆರೈಕೆ ಕೇಂದ್ರದಲ್ಲಿ ಎಲ್ಲರಿಗೂ ಮುಕ್ತ ಅವಕಾಶವಿದೆ.ಹುಟ್ಟುಹಬ್ಬ, ವಿವಾಹ ವಾರ್ಷಿಕೋತ್ಸವ ಹಾಗೂ ಯಾವುದೇ ವಿಶೇಷ ಕಾರ್ಯಕ್ರಮಗಳನ್ನು ಚಿಕ್ಕದಾಗಿ ಮಾಡಲು ಆರೈಕೆ ಕೇಂದ್ರಗಳಿಗೆ ಭೇಟಿ ನೀಡಿ ಸಹಾಯ ಹಸ್ತ ನೀಡಬೇಕೆಂದು ಕರೆ ನೀಡಿದರು. 

ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಪಂಚಾಕ್ಷರಿ ಹಿರೇಮಠ. ಕೆಪಿ ಶೆಟ್ಟಿ ಮತ್ತಿತರರಿದ್ದರು. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು