ಭದ್ರಾವತಿ-ನಾಳೆಯಿಂದ ಮೂರುದಿನ ಇಲ್ಲೆಲ್ಲಾ ಕರೆಂಟ್ ಇರಲ್ಲ: ಎಲ್ಲೆಲ್ಲಿ..?

ವಿಜಯ ಸಂಘರ್ಷ ನ್ಯೂಸ್ 
ಭದ್ರಾವತಿ: ಮೆಸ್ಕಾಂ ನಗರ ಉಪ ವಿಭಾಗಗಳ ಘಟಕ-2 ರ ಶಾಖಾ ವ್ಯಾಪ್ತಿಯಲ್ಲಿ ವಿದ್ಯುತ್ ಮಾರ್ಗ ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿ ರುವುದರಿಂದ ಕೆಳಕಂಡ ಪ್ರದೇಶಗಳಲ್ಲಿ ಬೆಳಗ್ಗೆ 10:00 ಘಂಟೆಯಿಂದ ಸಂಜೆ 6.00 ಘಂಟೆಯವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. 

ಎಲ್ಲೆಲ್ಲಿ ವಿದ್ಯುತ್ ಕರೆಂಟ್ ಇರಲ್ಲ:

ಅ: 15 ರ ನಾಳೆ ಜನ್ನಾಪುರ, ಹುತ್ತಾ ಕಾಲೋನಿ, ಸೆಂಟ್ ಚಾರ್ಲ್ಸ್ ಶಾಲೆ, ಜಿಂಕ್‌ಲೈನ್, ವೇಲೂರು ಶೆಡ್, ಭಂಡಾರ ಹಳ್ಳಿ, ಕಡದಕಟ್ಟೆ ಸುತ್ತ ಮುತ್ತ.

ಅ: 16 ರ ಗುರುವಾರ ಮೂಲೆಕಟ್ಟೆ, ಬೊಮ್ಮನಕಟ್ಟೆ, ಹೊಸಸಿದ್ದಾಪುರ, ಹೊಸೂರು ತಾಂಡ, ತಿಮ್ಲಾಪುರ, ಹಿರಿಯೂರು, ಅರಳೀಕೊಪ್ಪ, ರಬ್ಬ‌ರ್ ಕಾಡು, ಸುಲ್ತಾನಮಟ್ಟಿ, ಗೊಂದಿ, ಚಿಕ್ಕ ಗೊಪ್ಪೇನಹಳ್ಳಿ, 

ಅ: 17 ಶುಕ್ರವಾರ,ಬಿ.ಹೆಚ್, ರಸ್ತೆ, ರೈಲ್ವೇ ಸ್ಟೇಷನ್, ಕ.ರಾ.ರ. ಸಾ.ನಿ. ಬಸ್ ನಿಲ್ದಾಣ, ಚಾಮೇಗೌಡಬೀದಿ, ಗೌಳಿಗರ ಬೀದಿ, ಲೋಯರ್ ಹುತ್ತಾ ಸುತ್ತ ಮುತ್ತಲ ಪ್ರದೇಶಗಳಲ್ಲಿ ವಿದ್ಯುತ್ ಅಡಚಣೆ ಯಾಗಲಿದ್ದು ಗ್ರಾಹಕರು ಸಹಕರಿಸುವಂತೆ ಮೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಅಧಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು