ಡಾ.ಇಂದಿರಾ ಗೋವಿಂದರಾಜು ರವರಿಗೆ ಪಿ.ಹೆಚ್.ಡಿ ಪದವಿ

ವಿಜಯ ಸಂಘರ್ಷ ನ್ಯೂಸ್ 
ಭದ್ರಾವತಿ: ಮಣಿಪಾಲ್ ಹೈಯರ್ ಎಜುಕೇಶನ್ ಅಕಾಡೆಮಿಯಲ್ಲಿ ಡಾ.ಇಂದಿರಾ ಗೋವಿಂದರಾಜು ಪಿ.ಹೆಚ್.ಡಿ. ಯಶಸ್ವಿಯಾಗಿದ್ದಾರೆ.

ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (MAHE)ನ ಮಣಿಪಾಲ್ ಸ್ಕೂಲ್ ಆಫ್ ಲೈಫ್ ಸೈನ್ಸಸ್, ಬಯೋಫಿಸಿಕ್ಸ್ ವಿಭಾಗದ ಡಾ.ಇಂದಿರಾ ಗೋವಿಂದರಾಜು ಅವರು “ಸ್ಟ್ರಕ್ಚರಲ್ ಆಂಡ್ ಕೆಮಿಕಲ್ ಕ್ಯಾರೆಕ್ಟರೈಜೇಷನ್ of ಸ್ಟಾರ್ಚ್ ಗ್ರ್ಯಾನುಲ್ಸ್ using microscopy ಆಂಡ್ ಸ್ಪೆಕ್ಟ್ರೋಸ್ಕೋಪಿ ಟೆಕ್ನಿಕ್ಸ್” ಎಂಬ ವಿಷಯದ ಮೇಲಿನ ತಮ್ಮ ಪಿ.ಹೆಚ್.ಡಿ. ಪ್ರಬಂಧವನ್ನು ಮಂಡಿಸಿದ್ದರು. 

ಮಣಿಪಾಲ್ ಸ್ಕೂಲ್ ಆಫ್ ಲೈಫ್ ಸೈನ್ಸಸ್‌ನ ಸಹ ಪ್ರಾಧ್ಯಾಪಕರಾದ ಡಾ. ನಿರ್ಮಲ್ ಮಜುಂದರ್ ಅವರ ಮಾರ್ಗದರ್ಶನದಲ್ಲಿ ನಡೆಸಿದ ಇವರ ಸಂಶೋಧನೆ, ಪರಂಪರ ವಾಗಿ ಬೆಳೆದ ವಿವಿಧ ಅಕ್ಕಿ ತಳಿಗಳಿಂದ ಪಡೆದ ಸ್ಟಾರ್ಚ್ ಗ್ರ್ಯಾನುಲ್ಸ್‌ಗಳ ರಚನೆ ಮತ್ತು ರಾಸಾಯನಿಕ ಗುಣಗಳನ್ನು ವಿಶ್ಲೇಷಿ ಸಲು ಕೇಂದ್ರೀಕರಿಸಿತ್ತು. 
ಈ ಅಧ್ಯಯನವು ಅಕ್ಕಿಯ ಸ್ಟಾರ್ಚ್ ರಚನೆ, ಜೀರ್ಣನಶೀಲತೆ ಹಾಗೂ ಗ್ಲೈಸೆಮಿಕ್ ಸೂಚ್ಯಂಕಗಳ ನಡುವಿನ ಸಂಬಂಧವನ್ನು ವಿವರಿಸುತ್ತಿದ್ದು, ಮಧು ಮೇಹಿಗಳಿಗೆ ಅನುಕೂಲ ಕರವಾದ ಆಹಾರ ಅಭಿವೃದ್ಧಿಗೆ ಸಹಾಯಕಾರಿಯಾಗಿದೆ.

ಬಯೋಕೆಮಿಸ್ಟ್ರಿಯಲ್ಲಿ ಎಂ.ಎಸ್‌ಸಿ. ಪೂರ್ಣಗೊಳಿಸಿದ ತಕ್ಷಣವೇ GATE ಪರೀಕ್ಷೆಯಲ್ಲಿ ತೇರ್ಗಡೆಯಾದ ಡಾ. ಇಂದಿರಾ, ತಮ್ಮ ಸಂಶೋಧನಾ ಶಕ್ತಿಗೆ ಮಾನ್ಯತೆ ದೊರೆತ ಹಿನ್ನೆಲೆಯಲ್ಲಿ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ಯಿಂದ ಸೀನಿಯರ್ ರಿಸರ್ಚ್ ಫೆಲೋಶಿಪ್ (SRF) ಪಡೆದಿದ್ದರು.

 ಪಿ.ಹೆಚ್.ಡಿ. ಅವಧಿಯಲ್ಲಿ ಅವರು 20ಕ್ಕೂ ಹೆಚ್ಚು ಸಂಶೋಧನಾ ಲೇಖನಗಳನ್ನು ಅಂತರರಾಷ್ಟ್ರೀಯ ಪತ್ರಿಕೆಯಲ್ಲಿ ಪ್ರಕಟಿಸಿದ್ದು, ಅನೇಕ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಸಮ್ಮೇಳನಗಳಲ್ಲಿ ತಮ್ಮ ಸಂಶೋಧನಾ ಫಲಿತಾಂಶಗಳನ್ನು ಮಂಡಿಸಿದ್ದಾರೆ.

MAHE ಪರವಾಗಿ ಅವರು ಇಟಲಿಯ ಇಂಟರ್ನ್ಯಾಷನಲ್ ಸೆಂಟರ್ ಫಾರ್ ಥಿಯೋರೇಟಿಕಲ್ ಫಿಸಿಕ್ಸ್ (ICTP) ನಲ್ಲಿ 2019ರಲ್ಲಿ ತಮ್ಮ ಸಂಶೋಧನೆ ಮಂಡಿಸಿದ್ದು, ಅಲ್ಲಿ SPIE-LAMP ಉತ್ತಮ ಪೋಸ್ಟರ್ ಪ್ರಶಸ್ತಿಯನ್ನು ಪಡೆದರು. 2019 ಮತ್ತು 2022ರಲ್ಲಿ ICTP ಟ್ರಾವೆಲ್ ಗ್ರಾಂಟ್ಸ್ ಸಹ ಪಡೆದಿದ್ದಾರೆ. 2022ರಲ್ಲಿ ಅವರು ಅಮೆರಿಕದ ರೋಚೆಸ್ಟರ್‌ನಲ್ಲಿ ನಡೆದ OPTICA ಫ್ರಾಂಟಿಯರ್ಸ್ ಇನ್ ಆಪ್ಟಿಕ್ಸ್ ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ ಸಂಪೂರ್ಣ ಪ್ರಯಾಣ ಸಹಾಯದೊಂದಿಗೆ ತಮ್ಮ ಸಂಶೋಧನೆ ಪ್ರದರ್ಶಿಸಿದರು.

ಅವರ ಸಂಶೋಧನೆ interdisciplinary ವಿಜ್ಞಾನದ ಶಕ್ತಿಯನ್ನು ಪ್ರತಿಬಿಂಬಿಸುತ್ತದೆ. ಅತಿ ಆಧುನಿಕ ಮೈಕ್ರೋಸ್ಕೋಪಿ ಮತ್ತು ಸ್ಪೆಕ್ಟ್ರೋಸ್ಕೋಪಿ ತಂತ್ರಜ್ಞಾನಗಳನ್ನು ಬಳಸಿ ಕೊಂಡು ಪೋಷಣಾ ವಿಜ್ಞಾನ ಹಾಗೂ ಆರೋಗ್ಯದ ಅಣುಮಟ್ಟದ ಅಂಶಗಳನ್ನು ಅರ್ಥಮಾಡಿಕೊಳ್ಳಲು ಮಹತ್ವದ ಕೊಡುಗೆ ನೀಡಿದೆ.

ಡಾ. ಇಂದಿರಾ ಅವರು ಭದ್ರಾವತಿ ನ್ಯೂಟೌನ್ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕಿ ನಿರ್ಮಲಾ.ಕೆ ಹಾಗೂ ಗೋವಿಂದರಾಜು ಅವರ ಪುತ್ರಿ. ತಂದೆ - ತಾಯಿಯ ಪ್ರೋತ್ಸಾಹ ಮತ್ತು ನಿಷ್ಠೆಯು ಇವರ ಶಿಕ್ಷಣ ಮತ್ತು ಸಂಶೋಧನಾ ಪ್ರಯಾಣಕ್ಕೆ ಪ್ರೇರಣೆ ಯಾಗಿದ್ದಾಗಿದೆ.

ತಮ್ಮ ಸಾಧನೆಯ ಕುರಿತು ಮಾತನಾಡಿದ ಡಾ. ಇಂದಿರಾ, ತಮ್ಮ ಮಾರ್ಗದರ್ಶಕ ಡಾ. ನಿರ್ಮಲ್ ಮಜುಂದರ್, ಸಹೋದ್ಯೋಗಿ ಗಳು ಹಾಗೂ ಮಣಿಪಾಲ್ ಸ್ಕೂಲ್ ಆಫ್ ಲೈಫ್ ಸೈನ್ಸಸ್‌ನ ಎಲ್ಲಾ ಶಿಕ್ಷಕ ವೃಂದದ ನಿರಂತರ ಬೆಂಬಲಕ್ಕಾಗಿ ಕೃತಜ್ಞತೆ ಸಲ್ಲಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು