ವಿಜಯ ಸಂಘರ್ಷ ನ್ಯೂಸ್
ಭದ್ರಾವತಿ: ಮೆಸ್ಕಾಂ ನಗರ ಉಪ ವಿಭಾಗದ ಬಿ.ಹೆಚ್.ರಸ್ತೆಯಲ್ಲಿ ರಸ್ತೆ ಅಗಲೀಕರಣ ಹಾಗೂ ಮಾರ್ಗ ನಿರ್ವಹಣೆ ಕಾರ್ಯದ ಸಂಬಂಧವಾಗಿ ವಿದ್ಯುತ್ ಮಾರ್ಗ ತೆರವು ಕಾಮಗಾರಿ ಯನ್ನು ಹಮ್ಮಿಕೊಂಡಿರುವುದರಿಂದ ಘಟಕ-3 ರ ಶಾಖಾ ವ್ಯಾಪ್ತಿ ಹಾಗೂ ಗ್ರಾಮೀಣ ಉಪವಿಭಾಗ ವ್ಯಾಪ್ತಿಯ ಈ ಕೆಳಕಂಡ ಪ್ರದೇಶಗಳಲ್ಲಿ ಅ:23. ಗುರುವಾರ ಬೆಳಿಗ್ಗೆ 10:00 ಘಂಟೆ ಯಿಂದ ಸಂಜೆ 06.00 ಘಂಟೆಯವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
ಲೋಯರ್ ಹುತ್ತಾ, ಲೋಯರ್ ಹುತ್ತಾ ಕೈಗಾರಿಕಾ ಪ್ರದೇಶ, ಐ.ಟಿ.ಐ, ಕಡದಕಟ್ಟೆ, ಹೆಬ್ಬಂಡಿ,ಎ.ಕೆ.ಕಾಲೋನಿ, ಲಕ್ಷ್ಮಿಪುರ,ಬಿಳಿಕಿ, ಪದ್ಮನಹಳ್ಳಿ, ಹೊಳೆನೇರಳೆಕೆರೆ, ದೊಣಬಘಟ್ಟ, ತಡಸ ಮುಂತಾದೆಡೆ ವಿದ್ಯುತ್ ಅಡಚಣೆಯಾಗಲಿದ್ದು,ಗ್ರಾಹಕರು ಸಹಕರಿಸಲು ಮೆಸ್ಕಾಂ ಪ್ರಕಟಣೆಯಲ್ಲಿ ಕೋರಿದೆ.