ವಿಜಯ ಸಂಘರ್ಷ ನ್ಯೂಸ್
ಭದ್ರಾವತಿ: ಮಾಹಿತಿ ಹಕ್ಕು ಬಳಕೆ ದಾರರ ಮೇಲೆ ಕೊಲೆ ಮತ್ತು ದಬ್ಬಾಳಿಕೆ ಪ್ರತಿನಿತ್ಯ ರಾಜ್ಯದಲ್ಲಿ ನಡೆಯತ್ತ ಬಂದಿದ್ದು, ಬಳಕೆ ದಾರರಿಗೆ ಪ್ರತ್ಯೇಕ ಕಾನೂನು ರಚಿಸ ಬೇಕೆಂದು ರಾಜ್ಯ ಮಾಹಿತಿ ಹಕ್ಕು ಬಳಕೆದಾರರ ಹಿತ ರಕ್ಷಣ ವೇದಿಕೆ ವತಿಯಿಂದ ಸೋಮ ವಾರ ಪ್ರತಿಭಟನೆ ನಡೆಸಿ ತಹಸೀಲ್ದಾರ್ ರವರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.
ಪ್ರಜಾಪ್ರಭುತ್ವದಲ್ಲಿ ಸರ್ಕಾರದ ಎಲ್ಲಾ ಮಾಹಿತಿಯನ್ನು ತಿಳಿಯುವ ಹಕ್ಕು ಪ್ರಜೆಗಳಿಗಿದೆ ಎಂಬುದನ್ನು 2005 ಅಕ್ಟೋಬರ್ 12 ರಂದು "ಮಾಹಿತಿ ಹಕ್ಕು ಕಾಯ್ದೆ"(ಆರ್.ಟಿ.ಐ) ಯನ್ನು ಜಾರಿಗೆ ತರಲಾಗಿದೆ. ರಾಜ್ಯದಲ್ಲಿ/ದೇಶದಲ್ಲಿ ಸರ್ಕಾರಿ ಅಧಿಕಾರಿಗಳಿಗೆ ರಕ್ಷಣೆಗೆ, ಪ್ರಾಣಿಗಳಿಗೂ ಹಾಗೂ ವಕೀಲರಿಗೆ ಪ್ರತ್ಯೇಕ ಕಾನೂನು ರಚಿಸ ಲಾಗಿದೆ ಈ ಹಿನ್ನಲೆಯಲ್ಲಿ ಮಾಹಿತಿ ಹಕ್ಕು ಬಳಕೆ ದಾರರ ಹಿತರಕ್ಷಣೆಗೂ ಪ್ರತ್ಯೇಕ ಕಾನೂನು ಜಾರಿಗೆ ತರುವಂತೆ ಪ್ರತಿಭಟನಾ ಕಾರರು ಅಗ್ರಹಿಸಿದರು.
ಮಾಹಿತಿ ಹಕ್ಕು ಬಳಕೆದಾರರ ಮೇಲೆ ಭ್ರಷ್ಟ ವ್ಯವಸ್ಥೆ ಮತ್ತು ರಾಜಕೀಯದ ಕೆಲವು ವ್ಯಕ್ತಿಗಳಿಂದ ದೇಶಾದ್ಯಂತ ಹಾಗೂ ರಾಜ್ಯದಲ್ಲಿ 'ಸಾವಿರಾರು ಮಾಹಿತಿ ಹಕ್ಕು ಬಳಕೆದಾರರು ಕೊಲೆ ಯಾಗಿ ಹೋಗಿದ್ದಾರೆ. ದಿನನಿತ್ಯ ಅವರ ಕುಟುಂಬದವರಿಗೆ ಮತ್ತು ಬಳಕೆದಾರ ರಿಗೆ ದಬಬಾಳಿಕೆ ದೌರ್ಜನ್ಯ ನಡೆಸುವ ಪ್ರವೃತ್ತಿಯನ್ನು ರೂಢಿಮಾಡಿ ಕೊಂಡು ಬಂದಿರುತ್ತಾರೆ. ಪ್ರಜಾಪ್ರಭುತ್ವದಲ್ಲಿ ಪ್ರಶ್ನೆ ಮಾಡಲು ಅಧಿಕಾರ ಇದೆ ಆದರೆ ಎಲ್ಲಾದಕ್ಕೂ ಸಾಕ್ಷಿ ಆಧಾರಗಳು ಬೇಕು ಅದಕ್ಕೆ ಪ್ರಜೆಗಳಿಗೆ ಇರುವುದೇ ಏಕೈಕಾ ಅಸ್ತ್ರ ಮಾಹಿತಿ ಹಕ್ಕುಕಾಯ್ದೆ ಬಳಕೆ ದಾರರಿಗೆ ರಕ್ಷಣೆ ಇಲ್ಲದಂತಾಗಿರುವುದು ಶೋಚನೀಯ ಸಂಗತಿಯಾಗಿದೆ ಎಂದರು.
ಪ್ರತಿಭಟನೆಯಲ್ಲಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ತೀರ್ಥೇಶ್,ಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಬಿ. ಎನ್ ರಾಜು, ಕರ್ನಾಟಕ ಮಾಹಿತಿ ಹಕ್ಕು ವೇದಿಕೆಯ ಬಸವರಾಜ್, ವಕೀಲರಾದ ಭರತ್ ಬಿ.ಎಸ್. ಅಬ್ದುಲ್ ಖದೀರ್, ಡಿಎಸ್ಎಸ್ ಮುಖಂಡ ರಾದ ದಾಸರ ಕಲ್ಲಳ್ಳಿ ನಾಗರಾಜ್,ಇಮ್ರಾನ್,ಮಂಜುನಾಥ್, ವಿನೋದ್ ಇನ್ನಿತರರು ಭಾಗವಹಿಸಿದ್ದರು.