ವಿಜಯ ಸಂಘರ್ಷ ನ್ಯೂಸ್
ಭದ್ರಾವತಿ: VISL ಕಾರ್ಖಾನೆಯ ಆವರಣ ಮತ್ತು ನಗರ ಪ್ರದೇಶದಲ್ಲಿ ಅರಣ್ಯಕರಣಕ್ಕೆ ಕೊಡುಗೆ ನೀಡುವು ದಲ್ಲದೆ, ಗಣರಾಜ್ಯೋತ್ಸವ, ಸೈಲ್ ದಿನಾಚರಣೆ, ಸಂಸ್ಥಾಪಕರ ದಿನಾಚರಣೆ, ಸ್ವಾತಂತ್ರ್ಯ ದಿನಾಚರಣೆ ಯಂತಹ ವಿಶೇಷ ಕಾರ್ಯಕ್ರಮಗಳ ಸಂದರ್ಭಗಳಲ್ಲಿ ಸಾರ್ವಜನಿಕರಿಗೆ ಉಪಯೋಗವಾಗುವ ನುಗ್ಗೆ,ಪಪಾಯ, ಕರಿಬೇವು ಸಸಿಗಳನ್ನು ಉಚಿತವಾಗಿ ವಿತರಿಸುವ ಕಾರ್ಯ ಶ್ಲಾಘನೀಯ ವಾದದ್ದು ಎಂದು ಅರಣ್ಯ ಇಲಾಖೆಯ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕೆ.ಟಿ. ಹನುಮಂತಪ್ಪ ತಿಳಿಸಿದರು.
ಅವರು ಗುರುವಾರ SAIL-VISL ನ 'ಹಸಿರೀಕರಣದೆಡೆಗೆ' ಮತ್ತು 'ಸ್ವಚ್ಛತಾ ಹಿ ಸೇವಾ' ಉಪಕ್ರಮದ ಭಾಗವಾಗಿ ಸಾಮಾಜಿಕ ಅರಣ್ಯಕರಣದ ಅಡಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಕಾರ್ಯಪಾಲಕ ನಿರ್ದೇಶಕ ಬಿ.ಎಲ್. ಚಂದ್ವಾನಿ ಯವರಿಂದ ಹೊಂಗೆ, ಹಲಸು, ಮಾವು ಮತ್ತು ಜಂಬೂ ನೇರಳೆಯ 1100 ಸಸಿಗಳನ್ನು ಸ್ವೀಕರಿಸಿ ಮಾತನಾಡಿದರು.
ಗ್ರಾಮೀಣ ಪ್ರದೇಶದಲ್ಲಿ ಸಾಮಾಜಿಕ ಸಾಂಸ್ಥಿಕ ಹೊಣೆಗಾರಿಕೆ ಅಡಿಯಲ್ಲಿ ಆಯೋಜಿಸಲಾದ ಉಚಿತ ಆರೋಗ್ಯ ತಪಾಸಣಾ ಶಿಬಿರಗಳಲ್ಲಿ ಉಚಿತ ಬೀಜಗಳು/ಸಸಿಗಳ ವಿತರಣೆಯ ಮೂಲಕ ಈ ವರ್ಷ ಸುಮಾರು 8500 ಸಸಿಗಳನ್ನು 3000 ಬೀಜಗಳನ್ನು ವಿತರಿಸಿ, ಅರಣ್ಯಕರಣ ಪ್ರಯತ್ನ ಗಳನ್ನು ಪ್ರೋತ್ಸಾಹಿಸುವ SAIL- VISL ನ ಕಾರ್ಯ ಶ್ಲಾಘನೀಯ ವೆಂದರು.
VISL ಮತ್ತು ಅರಣ್ಯ ಇಲಾಖೆಯ ನಡುವಿನ ಸಂಬಂಧವು ನಮ್ಮ ಸುತ್ತಮುತ್ತಲಿನ ಪ್ರದೇಶಗಳನ್ನು ಹಸಿರು ಮತ್ತು ಸ್ವಚ್ಛವಾಗಿಡುವಲ್ಲಿ ಬಹಳ ದೂರ ಸಾಗುತ್ತದೆ ಎಂದು ಅವರು ಆಶಿಸಿದರು.
ಈ ಸಂದರ್ಭದಲ್ಲಿ VISL ಮಹಾ ಪ್ರಬಂಧಕರು (ಸ್ಥಾವರ) ಕೆ.ಎಸ್. ಸುರೇಶ್, ಮುಖ್ಯ ಮಹಾಪ್ರಬಂಧಕರು (ಹೆಚ್.ಆರ್ & ಪಿ.ಆರ್) ಎಲ್. ಪ್ರವೀಣ್ ಕುಮಾರ್, ಪರಿಸರ ನಿರ್ವಹಣಾ ಇಲಾಖೆಯ ಮಹಾ ಪ್ರಬಂಧಕ ಮುತ್ತಣ್ಣ ಸುಬ್ಬರಾವ್, ಕಾರ್ಮಿಕರ ಸಂಘದ ಅಧ್ಯಕ್ಷ ಜೆ. ಜಗದೀಶ, ಅಧಿಕಾರಿಗಳ ಸಂಘದ ಉಪಾಧ್ಯಕ್ಷ ಡಾ|| ಎಸ್.ಎನ್. ಸುರೇಶ್ ಮತ್ತು ಖಜಾಂಚಿ ಇಳಯರಾಜ ಉಪಸ್ಥಿತರಿದ್ದರು.
ಅರಣ್ಯ ಇಲಾಖಾಧಿಕಾರಿಗಳಾದ ರವೀಂದ್ರ ಕುಮಾರ್, ರತ್ನಪ್ರಭಾ, ಉಮರ್ ಭಾಷಾ, ಪ್ರದೀಪ್. ಎಂ.ಎಸ್. ರಾಘವೇಂದ್ರ.ಕೆ.ಬಿ. ದಿನೇಶ್, ಶಫಿ ಉಪಸ್ಥಿತರಿದ್ದರು.