ವಿಜಯ ಸಂಘರ್ಷ ನ್ಯೂಸ್
ಶಿವಮೊಗ್ಗ: ಮಾಜಿ ಸಚಿವ ಹಾಗೂ ಹಾಲಿ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಇತ್ತೀಚೆಗೆ ಸವಿತಾ ಸಮಾಜ ವನ್ನು ಅವ್ಯಾಚ ಶಬ್ದ ಬಳಸಿ ನಿಂದಿಸಿ ರುವುದನ್ನು ಜಿಲ್ಲಾ ಕಾಂಗ್ರೆಸ್ ವಿಭಾಗವು ತೀವ್ರವಾಗಿ ಖಂಡಿಸುತ್ತದೆ ಎಂದು ಕಾಂಗ್ರೆಸ್ ಪಕ್ಷದ ಹಿಂದುಳಿದ ವರ್ಗಗಳ ವಿಭಾಗದ ಜಿಲ್ಲಾಧ್ಯಕ್ಷ ಎಂ.ರಮೇಶ್ ಶಂಕರಘಟ್ಟ ತಿಳಿಸಿದ್ದಾರೆ.
ಅವರು ಇಂದು ಮಾಜಿ ಸಚಿವರ ವಿರುದ್ಧ ಕಾಂಗ್ರೆಸ್ ಪಕ್ಷದ ಹಿಂದುಳಿದ ವರ್ಗಗಳ ವಿಭಾಗದಿಂದ ಜಿಲ್ಲಾ ಪೊಲೀಸ್ ಅಧೀಕ್ಷರಿಗೆ ದೂರು ಸಲ್ಲಿಸಿ ಮಾತನಾಡಿದರು.
ಸಿ.ಟಿ.ರವಿಯವರು ಶಾಸಕರಾಗಿ, ಮಂತ್ರಿಗಳಾಗಿದ್ದ ಸಂದರ್ಭದಲ್ಲಿ ಅವರ ದುರಾಂಹಕಾರ ವರ್ತನೆಯಿಂದಾಗಿ ಅವರ ಕ್ಷೇತ್ರದ ಜನ ಹೀನಾಯವಾಗಿ ಸೋಲಿಸುವುದರ ಮೂಲಕ ಅವರ ತಲೆಗೆ ಏರಿದ್ದ ಅಧಿಕಾರದ ಅಮಲನ್ನು ಇಳಿಸಿದ್ದಾರೆ, ಆದರೂ ಬುದ್ದಿ ಕಲಿಯದ ಅವರು ಇನ್ನೂ ಕೂಡ ಇಂತಹ ಗೊಂದಲಕಾರಿ ಹೇಳಿಕೆಯನ್ನು ನೀಡುವುದನ್ನು ನಿಲ್ಲಿಸಿಲ್ಲ ಎಂದು ದೂರಿದರು.
ಹಿಂದುಳಿದ ವರ್ಗಗಳ ಸಮುದಾಯಕ್ಕೆ ಸೇರಿದ ಸವಿತಾ ಸಮಾಜದ ವಿರುದ್ಧ ಸಂವಿಧಾನ ಮತ್ತು ಕಾನೂನುಗಳ ಮೂಲ ಭೂತ ಆಶಯಗಳಿಗೆ ವಿರುದ್ಧವಾಗಿ ಮಾತನಾಡಿ ಆ ಸಮಾಜ ವನ್ನು ಅತ್ಯಂತ ತುಚ್ಚವಾಗಿ ಕಂಡಿದ್ದಾರೆ. ಆ ಹಿನ್ನೆಲೆಯಲ್ಲಿ ಘನತೆವೆತ್ತ ರಾಜ್ಯಪಾಲರು ಮಧ್ಯೆ ಪ್ರವೇಶಿಸಿ ವಿಧಾನಪರಿಷತ್ ಸದಸ್ಯತ್ವದಿಂದ ಅವರನ್ನು ವಜಾ ಮಾಡಬೇಕು ಹಾಗೂ ಪೊಲೀಸ್ ಇಲಾಖೆ ಕೂಡಲೇ ಅವರನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ರಾದ ಶರತ್ ಮರಿಯಪ್ಪ, ನಾಗರಾಜ್ ಕಂಕಾರಿ,ಹೆಚ್.ಪಾಲಾಕ್ಷಿ, ಜಿ.ಡಿ. ಮಂಜುನಾಥ್, ಚೈತ್ರ ಮೋಹನ್, ಎಸ್ .ಕೆ. ಭಾಸ್ಕರ್, ಪಿ.ಮೋಹನ್.ಆರ್ ರಾಘವೆಂದ್ರ ಬಸವರಾಜ್, ಗಂಗಾಧರ್, ಟಿ.ಡಿ. ಶಶಿ ಕುಮಾರ್, ರವಿಕುಮಾರ್, ಮುರುಗೇಶ್, ಚಂದ್ರಶೇಖರ್, ಮಂಜುನಾಥ್, ಗಂಗಾಧರ್. ಜಯಶೀಲ, ಎಂ.ಸಿದ್ದರಾಮು ಮತ್ತಿತರರಿ ದ್ದರು.