ದಕ್ಷತಾ ಪದಕ ವಿಜೇತ ಪ್ರಕಾಶ ರಾಥೋಡ್ ಭದ್ರಾವತಿ ಡಿವೈಎಸ್ ಪಿ

ವಿಜಯ ಸಂಘರ್ಷ ನ್ಯೂಸ್ 
ಭದ್ರಾವತಿ: ಪೊಲೀಸ್ ಉಪವಿಭಾಗದ ಡಿವೈಎಸ್ ಪಿ ಹುದ್ದೆಗೆ ಬೆಂಗಳೂರಿನ ಕೆಜೆ ಹಳ್ಳಿ ಉಪವಿಭಾಗದ ಎಸಿಪಿ ಪ್ರಕಾಶ ರಾಥೋಡ್ ಅವರನ್ನು ವರ್ಗಾವಣೆಗೊಳಿಸಿ ಆದೇಶಿಸಲಾಗಿದೆ.

ಈ ಹಿಂದೆ ಡಿವೈಎಸ್ ಪಿ ಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಕೆ.ಆರ್ ನಾಗರಾಜು ಅವರನ್ನು ಅ.6ರಂದು ವರ್ಗಾವಣೆ ಗೊಳಿಸಲಾಗಿತ್ತು. ಪ್ರಕಾಶ ರಾಥೋಡ್ ಅವರನ್ನು ಅಧಿಕೃತವಾಗಿ ನೇಮಕಗೊಳಿಸಿ ಪೊಲೀಸ್‌ ಮಹಾ ನಿರ್ದೇಶಕರು ಆದೇಶ ಹೊರಡಿಸಿದ್ದಾರೆ.

ತನಿಖಾ ವಿಭಾಗದಲ್ಲಿ ಪ್ರಕಾಶ ರಾಥೋಡ್ ಉತ್ತಮ ಸಾಧನೆ ಮಾಡಿದ್ದಾರೆ. ಈಚೆಗೆ ಇವರಿಗೆ ಕೇಂದ್ರ ಗೃಹ ಸಚಿವರ ದಕ್ಷತಾ ಪದಕ ಲಭಿಸಿದೆ. ಈಚೆಗೆ ರಾಜ್ಯದ ಗಮನ ಸೆಳೆದಿದ್ದ ಈಚೆಗೆ ಬಿಕ್ಲು ಶಿವು ಕೊಲೆ ಪ್ರಕರಣ ದಲ್ಲಿ ಮಾಜಿ ಸಚಿವ ಭೈರತಿ ಬಸವ ರಾಜ್‌ ಅವರನ್ನು ಎಸಿಪಿ ಪ್ರಕಾಶ ರಾಥೋಡ್‌ ವಿಚಾರಣೆ ಮಾಡಿದ್ದರು. ದಿವ್ಯ ಹಾಗರಗಿ ಪ್ರಕರಣದಲ್ಲಿ ಸಹ ಖಡಕ್ ಕಾರ್ಯಾಚರಣೆ ನಡೆಸಿದ್ದರು. ಇವರಿಗೆ ಕಳೆದ 4 ದಿನಗಳ ಹಿಂದೆಯೇ ವರ್ಗಾವಣೆ ಆದೇಶ ಹೊರಡಿಸ ಲಾಗಿತ್ತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು