ವಿಜಯ ಸಂಘರ್ಷ ನ್ಯೂಸ್
ಭದ್ರಾವತಿ: ಹಳೇನಗರ ಉಪ್ಪಾರ ಬೀದಿ ನಿವಾಸಿ ದಿ:ದುರ್ಗಪ್ಪ ರವರ ಪತ್ನಿ ಶತಾಯುಷಿ ಕರಿಯಮ್ಮ(107) ಭಾನುವಾರ ಸಂಜೆ ನಿಧನ ಹೊಂದಿದರು.
ಮೃತರಿಗೆ ಎರಡು ಗಂಡು,ನಾಲ್ಕು ಹೆಣ್ಣು ಮಕ್ಕಳು,10 ಮೊಮ್ಮಕ್ಕಳು,11 ಮರಿ ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗವನ್ನು ಬಿಟ್ಟಗಲಿದ್ದಾರೆ.
ವಿವಿಧ ಸಂಘಸಂಸ್ಥೆಗಳ ಮುಖಂಡರು, ಸಮಾಜದ ಪ್ರಮುಖರು ಮೃತರ ಅಂತಿಮ ದರ್ಶನ ಪಡೆದು ಸಂತಾಪ ಸೂಚಿಸಿದರು.
ನಗರದ ಹಿಂದೂ ರುದ್ರಭೂಮಿಯಲ್ಲಿ ಮೃತರ ಅಂತ್ಯ ಕ್ರಿಯೆ ನೆರವೇರಿತು.