ವಿಜಯ ಸಂಘರ್ಷ ನ್ಯೂಸ್
ಅಕ್ಕ ಅನ್ನೋ ಜೀವ ಸಿಗೋದಿಲ್ಲ ಅಂದ್ರೆ ಸಿಕ್ಕರೂ ಮಾತ್ರ ಅದೃಷ್ಟವಂತರು ಅಂತ ಹೇಳಬಹುದು.ಜೀವನದಲ್ಲಿ ಎಲ್ಲಾ ಸಂಬಂಧಗಳು ಕೂಡ ಅದರದ್ದೆ ಆದ ಒಂದು ವಿಶೇಷವಾದ ಸ್ಥಾನವನ್ನ ಹೊಂದಿರುತ್ತವೆ ಎಂಬುದು ಹೇಳಬಹುದು. ಆದ್ರೆ ಅಕ್ಕ ಅನ್ನೋ ಆ ಒಂದು ಜೀವ ಮಾತ್ರ ತಮ್ಮನ ಸರ್ವಸ್ವವಾಗಿ ಅವನ ಎಲ್ಲಾ ಕೆಲಸದಲ್ಲೂ ಶಕ್ತಿಯಾಗಿ,ಪ್ರೋತ್ಸಾಹ ನೀಡುವ ವ್ಯಕ್ತಿಯಾಗಿ ಹಾಗೆ ತಮ್ಮನ ಹಸಿವನ್ನ ಅರುವ ಎರಡನೇ ತಾಯಿಯಾಗಿ ಬದುಕುತ್ತಾ ಇರ್ತಾಳೆ. ಹಾಗಾಗಿ ಎಲ್ಲಾ ತಮಂದಿರಿಗೂ ಅಮ್ಮನನ್ನ ಬಿಟ್ಟರೆ ತಮ್ಮ ನೋವನ್ನ ಹಂಚಿಕೊಳ್ಳಲು ಇಷ್ಟ ಆಗೋದು ಅಕ್ಕನಲ್ಲಿ ಮಾತ್ರ.
ಹಾಗಂತ ಎಲ್ಲರಿಗೂ ಸ್ವಂತ ಅಕ್ಕನೆ ಜೊತೆಯಾಗಿರೋದು ಕಷ್ಟ ಆದರೂ ಸಾಮಾನ್ಯವಾಗಿ ನಮ್ಮನ್ನ ಅರಿತುಕೊಂಡು ನಮ್ಮ ಜೊತೆಯಾಗೋ ಒಂದು ಜೀವ ಅಕ್ಕ ಅನ್ನೋ ಸಂಬಂಧವನ್ನ ಕಲ್ಪಿಸಿಕೊಂಡು ಜೊತೆಯಾಗಿ ಜೀವನದ ಉದ್ದಕ್ಕೂ ಪ್ರೀತಿ ಹಂಚಿ ತಮ್ಮ ಎಂದು ಹರಿಸಿ ನಮ್ಮ ಖುಷಿ ಯಲ್ಲಿ ತನ್ನ ಖುಷಿ ಪಡೋ ಎಷ್ಟೋ ವ್ಯಕ್ತಿಗಳ ಉದಾಹರಣೆಗಳು ಎಲ್ಲಾ ಕಡೆಯಲ್ಲೂ ಕಾಣಬಹುದು ಅಂತಹ ಒಂದು ಜೀವ ಜೊತೆ ಆಗಲು ಅದೃಷ್ಟ ಮಾಡಿರಬೇಕು ಅಂತ ಹೇಳಬಹುದು ಅಷ್ಟೇ ಹೊರತು ಇನ್ನೂ ಏನು ಹೇಳಲು ಸಾಧ್ಯ ಹೇಳಿ..?
ಅದೆಲ್ಲ ಬಿಟ್ಟು ನನ್ನ ಬಗ್ಗೆ ಹೇಳೋದಾದ್ರೆ ನನಗಂತೂ ದೇವರು ಒಡ ಹುಟ್ಟಿದ ಅಕ್ಕನನ್ನು ನೀಡಿ ನಾನು ಅದೃಷ್ಟವಂತ ಎಂದು ಗರ್ವದಿಂದ ಹೇಳಿಕೊಳ್ಳಲು ಅವಕಾಶವನ್ನಂತೂ ನೀಡಿದ್ದಾನೆ.ಅವಳ ಬಗ್ಗೆ ಎಷ್ಟು ಅಂತ ವರ್ಣಿಸಲಿ ತಿಳಿಯೆ ಅವಳು ನನ್ನ ಜೀವನದಲ್ಲಿ ಮಾತ್ರ ಒಳ್ಳೆ ಗೆಳತಿಯಾಗಿ, ಮಾರ್ಗದರ್ಶಕಳಾಗಿ ಹಾಗೆ ಎರಡನೇ ತಾಯಿಯ ಸ್ಥಾನವನ್ನ ತುಂಬುತಿರುವು ದಂತ್ತೂ ನಾನು ಹೆಮ್ಮೆಯಿಂದ ಹೇಳಿ ಕೊಳ್ಳುವ ವಿಷಯ ಅವಳು ನನ್ನ ಅದೃಷ್ಟ ದೇವತೆ ಅವಳನ್ನ ಮುಂದೆ ನಾನು ಖುಷಿ ಪಡಿಸೋ ದಿನಗಳು ಬೇಗನೆ ಬರಲಿ ಅವಳ ಜೀವನದಲ್ಲೂ ನನಗೆ ವಿಶೇಷ ಸ್ಥಾನವಂತ್ತು ಇದೆ ಇನ್ನೂ ವಿಶೇಷವಾದ ಸ್ಥಾನ ಸಿಗಲಿ ಅಂತ ಅಷ್ಟೆ ಕೇಳೋದು.
ಚಿಕ್ಕವರಿದ್ದಾಗ ನಾನು ಅಕ್ಕ ಮಾಡಿದ ಗಲಾಟೆ ಜಗಳಗಳು ಇಂದು ನೆನಪಾದರೆ ಮುಖದಲ್ಲಿ ನಗು ತರುತಿವೆ ಆದರೆ ಇಂದು ಅದೇ ಜಾಗದಲ್ಲಿ ನಮ್ಮ ಅಕ್ಕ ನೀಡೋ ಪ್ರೀತಿಯನ್ನ ನೋಡಿದರೆ ನಾನೆಷ್ಟು ಪುಣ್ಯ ಮಾಡಿದ್ದೆ ಎಂಬ ಆಲೋಚನೆಯಂತೆ ಆಗುತ್ತದೆ. ಹಾಗಂತ ನಾವೇನು ಇವಾಗ ಜಗಳ ಆಡೊಲ್ಲ ಅನ್ನೋ ಹಾಗಿಲ್ಲ ಕೆಲವೊಮ್ಮೆ ತುಂಬಾನೇ ಜಗಳಾಡಿ ಒಂದೆರಡು ದಿನಗಳ ಕಾಲ ಮುನಿಸಲ್ಲಿ ಇರೋದು ಸಹಜ ಆದ್ರೆ ಅದನ್ನ ಬೆಳೆಸದೆ ಬೇಗನೆ ಮರೆತು ಬಿಡ್ತೀವಿ ಅಷ್ಟೇ
ಇನ್ನೊಂದು ಅವಾಗಲೇ ಅವಳು ನನಗೆ ಎರಡನೇ ತಾಯಿ ಅಂದೆ ಹೌದು ಯಾಕಂದ್ರೆ ದೂರದಲ್ಲಿದ್ದರೂ ನನ್ನ ಧ್ವನಿಯಲ್ಲಿ ಅವಳಿಗೆ ಅರ್ಥ ಆಗುತ್ತೆ ನನಗೆ ಏನು ಬೇಕು ಅಂತ
ಕೆಲವೊಮ್ಮೆ ನನಗೆ ಮುಜುಗರ ಆಗುತ್ತೆ ಕೈಯಲ್ಲಿ ಹಣ ಇಲ್ಲದಾಗ ಕೇಳೋಕೆ ಸುಮ್ಮನೆ ಫೋನ್ ಮಾಡಿ ಮಾತಾಡ್ತೀನಿ ಹಣ ಕೇಳದೆ ಸುಮ್ಮನಾಗ್ತೀನಿ ಆದ್ರೆ ಫೋನ್ ಕಾಲ್ ಮುಗಿಸಿ ಫೋನ್ ಕೆಳಗೆ ಇಡುವುದರಲ್ಲಿ ನನ್ನ ಖಾತೆಗೆ ಹಣ ಬಂದ ಮೆಸೇಜ್ ಬರುತ್ತೆ ಹಾಗೆ ನನ್ನ ಅರ್ಥ ಮಾಡಿಕೊಳ್ಳೋ ಜೀವ ನನ್ನ ಅಕ್ಕ.
ನನಗೂ ಆಸೆ ಇದೆ ಮುಂದೊಂದಿನ ನಾನ್ ಹೇಗ್ ಬೇಳಿಬೇಕು ಅಂದ್ರೆ ನನ್ನಕ್ಕ ಬೇಕು ಅನ್ನೋ ಮುಂಚೆ ನಾನೇ ಅದನ್ನ ತಿಳಿದು ಎಲ್ಲವನ್ನು ಅಕ್ಕನಿಗೆ ನಾನು ದುಡಿಮೆ ಆರಂಭಿಸಿದ ಮೇಲೆ ನನ್ನಕ್ಕ ಹೇಗೆ ಬದುಕ ಬೇಕು ಅಂದ್ರೆ ಇವತ್ತು ಆಸೆ ಪಟ್ಟ ವಸ್ತುನ ಅಂದೆ ಅವಳು ಪಡೆದುಕೊಳ್ಳಬೇಕು ಹಾಗೆ ಮಾಡಬೇಕು ಅನ್ನೋ ಆಸೆ ಇದೆ ಏನಾಗುತ್ತೋ ಗೊತ್ತಿಲ್ಲ ಆದಷ್ಟು ಪ್ರಯತ್ನ ಮಾಡಿ ಕೆಲಸ ಮಾಡಿ ಪ್ರಯತ್ನಿಸುವುದಂತು ಸತ್ಯ ಅದನ್ನ ದಿನಾಲು ದೇವರಲ್ಲಿ ಪ್ರಾರ್ಥನೆ ಮಾಡ್ತಾ ಇರುತ್ತೇನೆ.
.
ಕೊನೆದಾಗಿ ಹೇಳಬೇಕು ನನ್ನ ಸಾಕಿದ ತಂದೆ ತಾಯಿ ನನಗೇನು ಕೊರತೆ ಮಾಡಿಲ್ಲ ನಾನು ಬೇಕು ಅಂದ ತಕ್ಷಣ ನನ್ನ ಎದುರು ಕಣ್ಣ ಮುಂದೆ ಇರುತ್ತೆ ಹಾಗೆ ಅವರು ನಾನು ಕೇಳೋಕು ಮುಂಚೆ ನನಗೆ ನೀಡಿದ ಉಡುಗೊರೆ ಅಂದ್ರೆ ಅದು ನನ್ನ ಅಕ್ಕ ಅವಳು ನೋವನ್ನು ನನ್ನಲ್ಲಿ ಹೇಳೋದು ಕಡಿಮೆ ಯಾಕಂದ್ರೆ ನಾನು ಬೇಸರ ಹಾಕ್ತಿನಿ ಅಂತ ಆದ್ರೆ ನನ್ನ ನೋವನ್ನು ಮಾತ್ರ ಜೀವನ ನಡೆಸಲು ಸಾಧ್ಯವಾಗಿರುವ ಅಕ್ಕನಿಗೆ ಒಂದೆರಡು ಸಾಲು ಹೇಳೋದಾದರೆ ತುಂಬಾ ಜನ ಬಂದಿದ್ದಾರೆ ಜೀವನದಲ್ಲಿ ಯಾರಿಗೂ ನನ್ನ ಮೇಲೆ ನಂಬಿಕೆನು ಇಲ್ಲ ಕಾಳಜಿ ವಹಿಸೋ ಮನಸು ಇಲ್ಲ ಆದರೆ ದೇವರು ಕೊಟ್ಟ ಅಪರೂಪದ ಗೆಳತಿ ನೀನು ಏನಾದರೂ ನನ್ನನ್ನು ಬಿಟ್ಟು ಕೊಡದೆ ಕಾಳಜಿ ವಹಿಸಿ ಉತ್ತಮ ಮಾರ್ಗನಾ ತೋರಿಸ್ತೀನಿ ನಂಜೊತೆ ಎಂದು ಹೀಗೆ ಇರು ಅಂತ ಅಷ್ಟೇ ಕೇಳಿಕೊಳ್ಳುವುದಕ್ಕ ಇನ್ಯಾವ್ದು ಬಾಕಿ ಇಲ್ಲ.
✍️ನೇಮಿರಾಜ್ ಎಂ ಜೈನ್
ಪತ್ರಿಕೋದ್ಯಮ ವಿದ್ಯಾರ್ಥಿ
ಕುವೆಂಪು ವಿಶ್ವವಿದ್ಯಾಲಯ.
Tags
ಅಕ್ಕನ ಕುರಿತ ಬರಹ