ಕ್ರೀಡೆಯಿಂದ ದೈಹಿಕ- ಮಾನಸಿಕವಾಗಿ ಸದೃಢರಾಗಲು ಸಾಧ್ಯ: ಹೆಚ್.ಆರ್ ಶ್ರೀಧರ್

ವಿಜಯ ಸಂಘರ್ಷ ನ್ಯೂಸ್ 
ಕೆ ಆರ್ ಪೇಟೆ: ಹೊಸಹೊಳಲು ರಾಘು ಮಾಲೀಕತ್ವದ ರಾಯಲ್ ಸ್ಪೋರ್ಟ್ಸ್ ಕ್ಲಬ್,ಪ್ರತಿಭಾವಂತ ಕ್ರೀಡಾಪಟುಗಳಿಗೆ ಸೂಕ್ತ ವೇದಿಕೆ ಕಲ್ಪಿಸುವ ಪ್ರಮುಖ ಕೇಂದ್ರ ಬಿಂದು ವಾಗಿದೆ ಎಂದು ಹೊಸಹೊಳಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಹೆಚ್.ಆರ್ ಶ್ರೀಧರ್ ತಿಳಿಸಿದರು.

ಪಟ್ಟಣದಲಿರುವ ಪರಮಪೂಜ್ಯ ಡಾ: ಶ್ರೀ ಬಾಲಗಂಗಾಧರನಾಥ ಮಹಾ ಸ್ವಾಮೀ ಕ್ರೀಡಾಂಗಣ ಆವರಣದಲ್ಲಿ ಡಿ:12 ರಿಂದ 14 ವರೆಗೆ ರಾಯಲ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಹೊಸಹೊಳಲು ಪ್ರೇಮಿಯರ್ ಲೀಗ್ ಸೀಸನ್ 2 ನ ಆಟಗಾರರ ಹರಾಜು ಪ್ರಕ್ರಿಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. 

ಕಳೆದ ಬಾರಿಯೂ ಕೂಡ ರಾಯಲ್ ಸ್ಪೋರ್ಟ್ಸ್ ಕ್ಲಬ್ ಸಂಪೂರ್ಣ ವ್ಯವಸ್ಥೆ ಕಲ್ಪಿಸಿ ಅದ್ದೂರಿ ಕ್ರೀಡಾಕೂಟ ಆಯೋಜಿಸುವಲ್ಲಿ ಯಶಸ್ವಿಯಾಗಿತ್ತು. ಆ ಮಾದರಿಯಲ್ಲೇ ಮತ್ತೊಮ್ಮೆ ಕೈಗೊಳ್ಳಲು ಪ್ರಕ್ರಿಯೆಗೆ ಉದ್ಘಾಟನೆ ನೆರವೇರಿಸಿದ್ದೇವೆ.

ಹೊಸಹೊಳಲು ರಾಘು ಮಾಲೀಕತ್ವದ ರಾಯಲ್ ಸ್ಪೋರ್ಟ್ಸ್ ಕ್ಲಬ್ ಪ್ರತಿಭಾವಂತ ಕ್ರೀಡಾಪಟುಗಳ ಪ್ರತಿಭೆಯವರ ತರುವ ಸೂಕ್ತ ವೇದಿಕೆ ಯಾಗಿ ಹೊರಹೊಮ್ಮುತ್ತಿದೆ. ಈ ವಿಶೇಷ ಪ್ರೀಮಿಯರ್ ಲೀಗ್ ಸೀಸನ್ 2 ಸಂಪೂರ್ಣವಾಗಿ ಯಶಸ್ವಿಯಾಗಲಿ. ಯುವಜನರಲ್ಲಿ ಕ್ರೀಡೆಯ ಬಗ್ಗೆ ಆಸಕ್ತಿ ಕಡಿಮೆಯಾಗಿದೆ.ಸದಾ ಕಾಲ ಸಾಮಾಜಿಕ ಜಾಲತಾಣಗಳ ಬಳಕೆ ಯಲ್ಲಿ ಮಗ್ನರಾಗಿರುತ್ತಾರೆ. ಆದ್ದರಿಂದ ಕ್ರೀಡೆಯ ಬಗ್ಗೆ ಹೆಚ್ಚು ಗಮನ ಹರಿಸ ಬೇಕು ಎಂದ ಅವರು ಕ್ರೀಡೆ ಮತ್ತು ಶಿಕ್ಷಣ ಒಂದೇ ಮುಖದ ಎರಡು ನಾಣ್ಯಗಳಿದ್ದಂತೆ. ಶಿಕ್ಷಣದಿಂದ ಮಾನಸಿಕ ಬೆಳವಣಿಗೆ ಯಾದರೆ, ಕ್ರೀಡೆಯಿಂದ ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಢರಾಗಲು ಸಾಧ್ಯ. ಯುವಕರು ಕ್ರೀಡೆಗಳಲ್ಲಿ ಹೆಚ್ಚು ಭಾಗವಹಿಸಬೇಕು.ಮೊಲ ಮತ್ತು ಆಮೆಯ ನೀತಿಕತೆಯನ್ನು ಉದಾಹರಣೆಯಾಗಿ ಹೇಳಿದ ಅವರು, ‘ಯುವ ಜನರು ಕ್ರೀಡೆಯಲ್ಲಿ ಭಾಗವಹಿಸಿ, ಉತ್ತಮ ಸಾಧನೆ ಮಾಡಿ ಊರಿಗೆ ಮತ್ತು ದೇಶಕ್ಕೆ ಕೀರ್ತಿ ತರಬೇಕು ಎಂದು ಹಾರೈಸಿದರು.

ಪ್ರೇಮಿಯರ್ ಲೀಗ್ ಸೀಸನ್ 2ನಲ್ಲಿ ಪಾಲ್ಗೊಳ್ಳುವ ಪ್ರತಿಭಾವಂತ ತಂಡಗಳ ಆಟಗಾರರ ಹರಾಜು ಪ್ರಕ್ರಿಯ ಸಂದರ್ಭದಲ್ಲಿ ಟಿ.ಎ.ಪಿ.ಸಿ.ಎಂ ಎಸ್ ನಿರ್ದೇಶಕ ಹೆಚ್. ಟಿ ಲೋಕೇಶ್ ಪಾಲ್ಗೊಂಡು ಯಶಸ್ವಿಗೊಳಿಸಿ ಕ್ರೀಡಾಸಕ್ತರಿಗೆ ಸಲಹೆ ನೀಡಿದರು. 

ಈ ಸಂದರ್ಭದಲ್ಲಿ ರಾಯಲ್ ಸ್ಪೋರ್ಟ್ಸ್ ಕ್ಲಬ್ ವ್ಯವಸ್ಥಾಪಕ ಹೊಸ ಹೊಳಲು ರಾಘು, ನ್ಯೂ ಅಪೂರ್ವ ಆಸ್ಪತ್ರೆಯ ಸಹವ್ಯವಸ್ಥಾಪಕ ಅವಿನಾಶ್, ಹೊಸಹೊಳಲು ಮಾರುತಿ ಯುವಕರ ಸಂಘದ ಅಧ್ಯಕ್ಷ ಶ್ರೀನಿವಾಸ್,ಗ್ರಾ.ಪಂ ಮಾಜಿ ಅಧ್ಯಕ್ಷ ಚೌಡೇನಹಳ್ಳಿ ಹರೀಶ್,ಯುವ ಮುಖಂಡ ಬಾಬು,ಅಜಯ್ ಕುಮಾರ್, ಕಾರ್ತಿಕ್, ಜೈಕುಮಾರ್, ಧನುಷ್ ಗೌಡ, ಅನಿಲ್, ಪುನೀತ್, ಸಾಗರ್ ಸೇರಿದಂತೆ ಕ್ರೀಡಾಪಟುಗಳು ಭಾಗವಹಿಸಿದ್ದರು.

*ಸುದ್ದಿಯೊಂದಿಗೆ ಮನು ಮಾಕವಳ್ಳಿ ಕೆ ಆರ್ ಪೇಟೆ*

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು