ಅನಾಧಿಕೃತ ಸಮುದಾಯ ಭವನಕ್ಕೆ ಎನ್ಓಸಿ ನೀಡದಿರಲು ಮನವಿ

ವಿಜಯ ಸಂಘರ್ಷ ನ್ಯೂಸ್ 

ಭದ್ರಾವತಿ: ನಗರದ ಜನ್ನಾಪುರ ಫಿಲ್ಟರ್ ಶೆಡ್ ನಲ್ಲಿ ನಿರ್ಮಾಣ ಗೊಂಡಿರುವ ಸಮುದಾಯ ಭವನ ಕಾನೂನು ಬಾಹಿರ ವಾಗಿದ್ದು ಯಾವುದೇ ಕಾರಣಕ್ಕೂ ನಗರಸಭೆ ವತಿಯಿಂದ ಮೂಲಭೂತ ಸೌಕರ್ಯ ಒದಗಿಸಬಾರದು ಎಂದು ಒತ್ತಾಯಿಸಿ ಸಾಮಾಜಿಕ ಹೋರಾಟಗಾರ ಶಶಿಕುಮಾರ್ ಎಸ್ ಗೌಡ ನಗರಸಭೆ ಪೌರಯುಕ್ತರಿಗೆ ಗುರುವಾರ ಮನವಿ ಸಲ್ಲಿಸಿದರು.

ಕೆಲವು ಪ್ರಭಾವಿ ವ್ಯಕ್ತಿಗಳಿಂದ ಅನಾಧಿಕೃತವಾಗಿ ನಿರ್ಮಾಣಗೊಂಡಿ ರುವ ಭವನಕ್ಕೆ ಸೂಕ್ತ ದಾಖಲೆ ಇರುವುದಿಲ್ಲ. ಈ ಹಿನ್ನೆಲೆಯಲ್ಲಿ ಒಂದು ವರ್ಷದಿಂದ ಸಮುದಾಯ ಭವನ ಸ್ಥಳದಲ್ಲಿ ಪ್ರತಿಭಟನೆ ನಡೆಸ ಲಾಗುತ್ತಿದೆ. ಸಂಬಂಧಿತ ಅಧಿಕಾರಿ ಗಳಿಗೆ ಮನವಿ ಸಲ್ಲಿಸಲಾಗಿದ್ದರು ಸಹ ಯಾವುದೇ ಕ್ರಮ ಕೈಗೊಂಡಿರುವುದಿಲ್ಲ. ಆದ್ದರಿಂದ ನಗರಸಭೆವತಿಯಿಂದ ಶೌಚಾಲಯ ನಿರ್ಮಾಣ, ನೀರಿನ ಸೌಕರ್ಯ ಹಾಗೂ ವಿದ್ಯುತ್ ಸೌಕರ್ಯಕ್ಕೆ ಎನ್ ಓ ಸಿ ತಡೆ ಹಿಡಿಯುವಂತೆ ಮನವಿಯಲ್ಲಿ ಒತ್ತಾಯಿಸಲಾಯಿತು.

ಈ ಸಂದರ್ಭದಲ್ಲಿ ಪ್ರಮುಖರಾದ ಸಂಕೇತ್, ವೆಂಕಟೇಶ್ ಮತ್ತಿತರರು ಭಾಗವಹಿಸಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು