ಬೇಸಿಗೆ ಹಂಗಾಮಿನ ನೀರು ಮೇ.17 ರ ಮಧ್ಯರಾತ್ರಿಯಿಂದ ಬಂದ್

ವಿಜಯ ಸಂಘರ್ಷ ನ್ಯೂಸ್ 
ಭದ್ರಾವತಿ: ಭದ್ರಾ ಜಲಾಶಯದಿಂದ ಬೇಸಿಗೆ ಹಂಗಾಮಿನ ಬೆಳೆಗಳಿಗೆ ಬಲದಂಡೆ ಮತ್ತು ಎಡದಂಡೆ ಕಾಲುವೆ ಗಳಲ್ಲಿ ಮೇ.17ರವರೆಗೆ ಹೆಚ್ಚುವರಿ ಯಾಗಿ ನೀರು ಹರಿಸುತ್ತಿದ್ದು, ಮೇ 17 ರ ಮಧ್ಯರಾತ್ರಿಯಿಂದ ನಿಲ್ಲಿಸಲಾಗುವುದು ಎಂದು ಭದ್ರಾ ಯೋಜನಾ ನೀರಾವರಿ ಸಲಹಾ ಸಮಿತಿ ಸದಸ್ಯ ಕಾರ್ಯದರ್ಶಿ ಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

      ಭದ್ರಾ ಜಲಾಶಯದಲ್ಲಿ ಕುಡಿಯುವ ನೀರು ಶೇಖರಣೆ ಮಾತ್ರ ಉಳಿದಿದ್ದು, ಹೆಚ್ಚುವರಿ ಯಾಗಿ ಬೆಳೆಗಳಿಗೆ ನೀರನ್ನು ಹರಿಸಲು ಜಲಾಶಯದಲ್ಲಿ ನೀರಿನ ಲಭ್ಯತೆ ಇರುವು ದಿಲ್ಲ. ಅಚ್ಚುಕಟ್ಟು ಭಾಗದ ಎಲ್ಲಾ ರೈತರು ಗಳು ಇಲಾಖೆಯೊಂದಿಗೆ ಸಹಕರಿಸುವಂತೆ ಕೋರಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು