ಪೊಲೀಸ್ ಮಕ್ಕಳ ಕ್ರೀಡಾಕೂಟದಲ್ಲಿ ಸಂಭ್ರಮದ ಕ್ಷಣಗಳು

ವಿಜಯ ಸಂಘರ್ಷ ನ್ಯೂಸ್ 
ಭದ್ರಾವತಿ: ನಗರದ ನ್ಯೂಟೌನ್ ವಿಐಎಸ್‌ಎಲ್ ಕ್ರೀಡಾಂಗಣದಲ್ಲಿ ಪೊಲೀಸ್ ಉಪವಿಭಾಗದಿಂದ ಆಯೋಜಿಸಲಾಗಿದ್ದ ಮಕ್ಕಳ ಕ್ರೀಡಾ ಕೂಟದಲ್ಲಿ ಪೊಲೀಸ್ ಅಧಿಕಾರಿಗಳು ಹಾಗು ಸಿಬ್ಬಂದಿಗಳು ತಮ್ಮ ಕುಟುಂಬದ ಮಕ್ಕಳು ವಿವಿಧ ಕ್ರೀಡೆಗಳಲ್ಲಿ ಪಾಲ್ಗೊಂಡು ಸಂಭ್ರಮಿಸಿ ಕಣ್ತುಂಬಿ ಕೊಂಡರು.
ಉಪವಿಭಾಗದಿಂದ ಪ್ರತಿವರ್ಷ ವಾರ್ಷಿಕ ಪೊಲೀಸ್ ಕ್ರೀಡಾಕೂಟ ಆಯೋಜಿಸಿ ಕೊಂಡು ಬರಲಾಗುತ್ತಿದೆ. ಕ್ರೀಡಾಕೂಟದಲ್ಲಿ ಅಧಿಕಾರಿಗಳು, ಸಿಬ್ಬಂದಿಗಳು ಹಾಗು ಕುಟುಂಬ ಸದಸ್ಯರು ಪಾಲ್ಗೊಳ್ಳುವುದು ಸಾಮಾನ್ಯ. ಆದರೆ ಈ ಬಾರಿ ವಿಶೇಷ ವಾಗಿ ಮಕ್ಕಳಿಗಾಗಿಯೇ ಕ್ರೀಡಾಕೂಟ ಆಯೋಜನೆ ಮಾಡಲಾಗಿತ್ತು.

ಕ್ರೀಡಾಕೂಟಕ್ಕೆ ಡಿವೈಎಸ್ ಪಿ ಪ್ರಕಾಶ್ ರಾಥೋಡ್ ಗುಂಡು ಎಸೆಯುವ ಮೂಲಕ ಚಾಲನೆ ನೀಡಿದರು. 

ಕಪ್ಪೆ ಜಿಗಿತ, ಓಟ, ಬಕೆಟ್‌ಗೆ ಬಾಲ್ ಎಸೆಯುವುದು, ಗುಂಡು ಎಸೆತ ಮತ್ತು ಸ್ಲೋ ಸೈಕಲ್ ರೇಸ್ ಸೇರಿದಂತೆ ವಿವಿಧ ಸ್ಪರ್ಧೆಗಳು ಜರುಗಿದವು.

ದೈಹಿಕ ಕ್ರೀಡಾ ಶಿಕ್ಷಕ ಶಿವಲಿಂಗೇಗೌಡ, ಚರಣ್ ಸಿಂಗ್, ರೇವತಿ ಮತ್ತು ಅಂತೋಣಿ ತೀರ್ಪುಗಾರರಾಗಿ ಕಾರ್ಯ ನಿರ್ವಹಿಸಿದರು. ವೃತ್ತ ನಿರೀಕ್ಷಕರಾದ ನಾಗಮ್ಮ, ಚಿದಾನಂದ, ವಿವಿಧ ಠಾಣೆಗಳ ಪಿ ಎಸ್ ಐ ರವರುಗಳಾದ ಕವಿತಾ, ಭಾರತಿ, ರಮೇಶ್, ಸುನಿಲ್ ಬಿ.ತೇಲಿ, ಶಿಲ್ಪಾನಾಯನೇಗಲಿ, ಶ್ರೀಶೈಲ ಕೆಂಚಣ್ಣನವ‌ರ್ ಹಾಗೂ ಉಪ ವಿಭಾಗದ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗಳು, ಕುಟುಂಬ ವರ್ಗದವರು ಪಾಲ್ಗೊಂಡಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು