ಮನೆಯಲ್ಲಿ ಮಕ್ಕಳಿಗೆ ಕನ್ನಡ ಕಲಿಕೆಗೆ ಗಮನ ನೀಡಿ: ಡಾ:ಹರಿಣಾಕ್ಷಿ

ವಿಜಯ ಸಂಘರ್ಷ ನ್ಯೂಸ್ 
ಭದ್ರಾವತಿ: ಕುವೆಂಪು ವಿರಚಿತ ಅಧಿಕೃತ ನಾಡಗೀತೆ ಜಯ ಭಾರತ ಜನನಿಯ ತನುಜಾತೆಗೆ ನೂರು ವರ್ಷ ತುಂಬಿದ ಸಂಭ್ರಮ. ಕೆ.ವಿ.ಪುಟ್ಟಪ್ಪ ನವರು ಈ ಪದ್ಯ ವನ್ನ 1924ರಲ್ಲಿ ಕಿಶೋರ ಚಂದ್ರವಾಣಿ ಎಂಬ ಕಾವ್ಯ ನಾಮದಿಂದ ಬರೆದರು. 2004ರಲ್ಲಿ ಕುವೆಂಪು ಜನ್ಮ ಶತಮಾನೋತ್ಸವ ಸಂದರ್ಭ ದಲ್ಲಿ ಕರ್ನಾಟಕ ಸರ್ಕಾರ ಈ ಗೀತೆಯನ್ನು ಅಧಿಕೃತ ನಾಡಗೀತೆ ಯನ್ನಾಗಿ ಗೌರವಿಸಿ ಅದಕ್ಕೊಂದು ವಿಶೇಷ ಸ್ಥಾನಮಾನ ನೀಡಿತು ಎಂದು ಎಸ್qಎವಿ ಕಾಲೇಜ್ ಪ್ರಾಂಶುಪಾಲೆ ಡಾ:ಹರಿಣಾಕ್ಷಿ ಹೇಳಿದರು.

ಹಳೇನಗರ ಗಾಯಿತ್ರಿ ಧರ್ಮಶಾಲಾ ಭವನ ದಲ್ಲಿ ಭೂಮಿಕಾ ವೇದಿಕೆ ಆಯೋಜಿಸಿದ್ದ 70ನೇ ಕನ್ನಡ ರಾಜ್ಯೋತ್ಸವದ ಆಚರಣೆಯಲ್ಲಿ ಉಪನ್ಯಾಸ ನೀಡಿ,ಇಂದಿನ ದಿನ ಗಳಲ್ಲಿ ಮಕ್ಕಳು ಕನ್ನಡವನ್ನು ಸರಿಯಾಗಿ ಕಲಿಯದೇ ಅತ್ತ ಆಂಗ್ಲ ಭಾಷೆಯಲ್ಲಿ ಪರಿಣಿತಿಯನ್ನು ಪಡೆಯದೆ ದುಸ್ಥಿತಿ ಯಲ್ಲಿದ್ದಾರೆ. ಕನ್ನಡ ಭಾಷೆಯನ್ನು ಪ್ರಾಥಮಿಕ ಹಂತದಲ್ಲಿ ಓದಲು, ಬರೆಯಲು ಮಾತನಾಡಲು ಕಲಿತರೆ ಯಾವ ಭಾಷೆಯನ್ನಾದರೂ ಮುಂದೆ ಕಲಿಯಬಹುದಾಗಿದೆ. ಮನೆಯಲ್ಲಿ ಹಿರಿಯರು ಮಕ್ಕಳಿಗೆ ಕನ್ನಡ ಕಲಿಕೆಗೆ ಆಸಕ್ತಿ ವಹಿಸಿ ಗಮನ ನೀಡಬೇಕೆಂದು ಅವರು ಕಿವಿ ಮಾತು ಹೇಳಿದರು.
 
ಭೂಮಿಕ ವೇದಿಕೆಯ ಅಧ್ಯಕ್ಷ ಡಾ: ಕೃಷ್ಣ ಭಟ್ ಮಾತನಾಡಿ,ಮನೆಯಲ್ಲಿ ಮಕ್ಕಳೊಂದಿಗೆ ಅಚ್ಚ ಕನ್ನಡದಲ್ಲಿ ಸಂವಹನ ಮಾಡಿದಾಗ ಹೊಸ ಹೊಸ ಕನ್ನಡ ಶಬ್ದಗಳು ಅವರಿಗೆ ಅರಿವಾಗಿ ಕನ್ನಡ ಮನೆಯಲ್ಲಿ ಬೆಳೆದು ಮನದಲ್ಲಿ ಉಳಿಯುತ್ತದೆ. ಕನ್ನಡಕ್ಕೆ ಬಿಕ್ಕಟ್ಟು ಎದುರಾಗಿದೆ ಎಂದು ಬಿಕ್ಕಳಿ ಸುತ್ತ ಕೂತರೆ ಪ್ರಯೋಜನವಿಲ್ಲ. ಇಚ್ಛಾಶಕ್ತಿ ಮತ್ತು ವಿಶ್ವಾಸದಿಂದ ನಮ್ಮ ಸ್ವಂತ ನೆಲಕಟ್ಟಿನಲ್ಲಿ ಕಾರ್ಯಪ್ರವೃತ್ತರಾದಾಗ ಮಾತ್ರ ಕನ್ನಡ ಉಳಿದು ಬೆಳೆದು ಪಸರಿಸುತ್ತದೆ.

ವ್ಯಕ್ತಿ ಸಮಸ್ತಿ ಚಿಂತನೆ ಯಿಂದ ವ್ಯಕ್ತಿಗತವಾಗಿ ವೃತ್ತಿಗತವಾಗಿ ಕೌಟುಂಬಿಕವಾಗಿ ಮತ್ತು ಸಾಮಾಜಿಕ ವಾಗಿ ಕನ್ನಡದಲ್ಲಿಯೇ ಮಾತನಾಡಿ ಕನ್ನಡವನ್ನ ಉಳಿಸಿ ಬೆಳೆ ಬೆಳೆಸೋಣ ವೆಂದು ಅಭಿಪ್ರಾಯ ಪಟ್ಟರು.

ಅಪರಂಜಿ ಶಿವರಾಜ್ ಸ್ವಾಗತಿಸಿ, ಡಾ ನಾಗರಾಜ್ ನಿರೂಪಿಸಿದರೆ, ರೂಪಾರಾವ್ ವಂದಿಸಿದರು. ಪ್ರಾರಂಭ ದಲ್ಲಿ ಆನಂದ ರಸಪ್ರಶ್ನೆ ಕಾರ್ಯಕ್ರಮ, ಶಾರದಾ ಶ್ರೀನಿವಾಸ ಆಶುಭಾಷಣ ಸ್ಪರ್ಧೆ ನಡೆಸಿಕೊಟ್ಟರು. ಭೂಮಿಕಾ ಸದಸ್ಯ ತಂಡದವರು ಕನ್ನಡ ಕವಿಗಳ ಭಾವಗೀತೆಗಳನ್ನು ಹಾಡಿದರು.

ರೂಪ ಮತ್ತು ದಿವಾಕರ್ ಸಾಲುಮರದ ತಿಮ್ಮಕ್ಕನಿಗೆ ಭಾವನುಡಿ ನಮನವನ್ನು ನಡೆಸಿಕೊಟ್ಟರು. ಶೋಭಾ ಗಂಗರಾಜ ಕಾರ್ಯಕ್ರಮ ನಿರ್ವಹಿಸಿದರು. ಡಾ:ವೀಣಾಭಟ್ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: 9743225795

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು