ಕರವೇ ಅಪ್ಪುಸೇನೆ ವತಿಯಿಂದ ಕೋಗಲೂರು ತಿಪ್ಪೇಸ್ವಾಮಿ ರಾಜ್ಯ ಪ್ರಶಸ್ತಿ ಪ್ರದಾನ

ವಿಜಯ ಸಂಘರ್ಷ ನ್ಯೂಸ್ 
ಭದ್ರಾವತಿ: ಗ್ರಾಮೀಣ ಪ್ರದೇಶದಲ್ಲಿ ಹುಟ್ಟಿ ಬೆಳೆದು ಅತ್ಯಂತ ಸೃಜನಾತ್ಮಕ ಹಾಗೂ ವೆಚ್ಚದಾಯಕ ಸಾಹಿತ್ಯ ಹಾಗೂ ಶಿಕ್ಷಣದ ಮೂಲಕ ನಾಡಿನ ಮನೆ ಮಾತಾಗಿ, ನಾಡಿನ ಸಾಹಿತ್ಯ ಹಾಗೂ ಶಿಕ್ಷಣದ ಕ್ಷೇತ್ರದಲ್ಲಿ ಗುರುತಿಸಿ ಕೊಂಡಿರುವ ಕೋಗಲೂರು ತಿಪ್ಪೇಸ್ವಾಮಿ ರವರ ಕನ್ನಡ ಸೇವೆ ಗುರುತಿಸಿ ಕನ್ನಡ ರಕ್ಷಣಾ ವೇದಿಕೆ ಅಪ್ಪುಸೇನೆ ವತಿಯಿಂದ ಇಂದು ಸೊರಬದಲ್ಲಿ ನಡೆದ ರಾಜ್ಯೋತ್ಸವದ ಸಂದರ್ಭದಲ್ಲಿ ರಾಜ್ಯಪ್ರಶಸ್ತಿ ನೀಡಿ ಗೌರವ ಸಮರ್ಪಿಸಲಾಯಿತು.

ಪಟ್ಟಣಕ್ಕೆ ಆಗಮಿಸಿದ್ದ ಕನ್ನಡ ರಥದ ಮೆರವಣಿಗೆಯಲ್ಲಿ ಪಾಲ್ಗೊಂಡು ಪಟ್ಟಣದ ರಂಗಮಂದಿರದಲ್ಲಿ ನಡೆದ ಸಭೆಯಲ್ಲಿ ಕರವೇ ಅಪ್ಪುಸೇನೆಯ ರಾಜ್ಯಾಧ್ಯಕ್ಷ ಆರ್.ವಿಜಯ್ ಕುಮಾರ್ ಸಿದ್ದಾಪುರ ಮಾತನಾಡಿ ಸಮು ದಾಯದ ಸೃಜನಶೀಲರನ್ನು ಗುರುತಿಸಿ ಗೌರವಿಸುವುದು ಸಮಾಜದ ಕರ್ತವ್ಯ ಎಂದು ಭಾವಿಸಿ ಕರವೇ ಅಪ್ಪುಸೇನೆ ವತಿಯಿಂದ ಗೌರವಿಸಲಾಗುತ್ತಿದೆ. ನಿಮ್ಮ ಸೇವೆ ಸದಾ ಹಸಿರಾಗಿರಲಿ, ಬೆಳೆಯುವ ಮುಂದಿನ ಪೀಳಿಗೆಗೆ ಮಾದರಿಯಾಗಿರಲಿ ಎಂದು ಹಾರೈಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು