ಗುಳಬಾಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಮೈಕ್ ಸೌಂಡ್ ಸಿಸ್ಟಮ್ ದೇಣಿಗೆ

ವಿಜಯ ಸಂಘರ್ಷ ನ್ಯೂಸ್ 
ಗುಳಬಾಳ: ಹುಣಸಗಿ ತಾಲ್ಲೂಕಿನ ಗುಳಬಾಳ ಗ್ರಾಮದ ನಿವಾಸಿ ಯಂಕಮ್ಮ ಬಮ್ಮನಳ್ಳಿ ಯವರು"ನಾನು ಕಲಿತ ಶಾಲೆ ನನ್ನ ಹೆಮ್ಮೆ" ಎಂದು ತಿಳಿದು ಶಾಲೆಯಲ್ಲಿ ನಡೆಯುವ ಕಾರ್ಯಕ್ರಮಗಳ ಅನುಕೂಲ ಕ್ಕಾಗಿ ವೈಯಕ್ತಿಕ ಹಣದಲ್ಲಿ ಶಾಲೆಗೆ ಮೈಕ್ ಹಾಗೂ ಸೌಂಡ್ ಸಿಸ್ಟಮ್,ಸ್ಪೀಕರ್ ಬಾಕ್ಸ್ ದೇಣಿಗೆ ನೀಡಿದ್ದಾರೆ.

ಅವರು ತಾಲೂಕಿನ ಗುಳಬಾಳ ಗ್ರಾಮದ ಸರ್ಕಾರಿ ಶಾಲೆಗೆ ಸ್ಪೀಕರ್ ಬಾಕ್ಸ್ ದೇಣಿಗೆ ನೀಡಿ ನಂತರ ಮಾತನಾಡಿದರು.
 
ಮುಖ್ಯ ಶಿಕ್ಷಕ ಭೀಮನಗೌಡ ಬಿರಾದಾರ ಮಾತನಾಡಿ ಗ್ರಾಮದ ವಿದ್ಯಾವಂತರು ಹಾಗೂ ಉಳ್ಳವರು ತಮ್ಮ ಊರಿನ ಶಾಲೆಗೆ ದೇಣಿಗೆ ನೀಡಿ ಮಾದರಿ ಹಾಗೂ ಈ ಪ್ರಯತ್ನಕ್ಕೆ ನಮ್ಮ ಶಾಲೆಯ ಎಲ್ಲಾ ಶಿಕ್ಷಕರ ಪ್ರೇರಣೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ರಾಜ್ಯ ದೈಹಿಕ ಶಿಕ್ಷಕರ ಸಂಘದ ಉಪಾಧ್ಯಕ್ಷ ಬಸನಗೌಡ ವಠಾರ, ಶಿಕ್ಷಕರಾದ ಪ್ರಭುಗೌಡ ಬಿರಾದಾರ, ಕಡ್ಲಬಾಳಪ್ಪ, ಹುಲಗಣ್ಣ ಹೊಸಮನಿ, ಯಂಕಮ್ಮ ಬಮ್ಮನಳ್ಳಿ,ಭಾಗ್ಯಶ್ರೀ ಕಕ್ಕೇರಿ, ಸರೋಜಾ ಅಂಬಿಗೇರ ಇನ್ನಿತರರು ಇದ್ದರು,

ವರದಿ : ✍️ ಶಿವು ರಾಠೋಡ.

ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: 9743225795 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು