ಕನ್ನಡದ ನಾಮಫಲಕಗಳ ಬಗ್ಗೆ ನಗರಸಭೆ ಆಯುಕ್ತರು ಕ್ರಮಕ್ಕೆ ಮುಂದಾಗಲಿ: ಕರವೇ ಆಗ್ರಹ

ವಿಜಯ ಸಂಘರ್ಷ ನ್ಯೂಸ್ 
ಸಾಗರ: ಅಂಗಡಿ ಮುಂಗಟ್ಟುಗಳಲ್ಲಿ ಕನ್ನಡ ನಾಮಫಲಕಗಳನ್ನು ಕಡ್ಡಾಯ ವಾಗಿ ಅಳವಡಿಸುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆಯ (ನಾರಾಯಣ ಗೌಡ ಬಣ) ಸಾಗರ ತಾಲ್ಲೂಕು ಅಧ್ಯಕ್ಷ ಮನೋಜ್ ಕುಗ್ವೆ ನೇತೃತ್ವದಲ್ಲಿ ಗುರುವಾರ ಸಾಗರ ನಗರದಾಧ್ಯಾಂತ ಬೈಕ್ ಜಾಥಾ ದೊಂದಿಗೆ ಕನ್ನಡ ಭಾಷಾ ಜಾಗೃತಿ ಅಭಿಯಾನ ನಡೆಸಲಾಯಿತು.

ರಾಜ್ಯದಲ್ಲಿ ಅಂಗಡಿ ಮುಂಗಟ್ಟುಗಳ ನಾಮಫಲಕಗಳಲ್ಲಿ ಶೇ. 60 ಕನ್ನಡ ಮತ್ತು ಶೇ. 40 ಇತರೆ ಭಾಷೆ ಇರುವಂತೆ ನಿಯಮ ಜಾರಿಯಲ್ಲಿದೆ. ಇದೇ ನಿಯಮವನ್ನು ಸಾಗರದಲ್ಲಿಯೂ ಪಾಲಿಸುವಂತೆ ವೇದಿಕೆಯ ಪ್ರಮುಖರು ಆಗ್ರಹಿಸಿದರು.

ಇದಲ್ಲದೆ ಸ್ಥಳೀಯ ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳಲ್ಲಿ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಕನ್ನಡದಲ್ಲಿ ಆಡಳಿತ ವ್ಯವಹಾರ ನಡೆಸಬೇಕು. ಹೊರ ರಾಜ್ಯ ಗಳಿಂದ ವರ್ಗಾವಣೆಗೊಂಡು ಬಂದಿರುವ ಸಿಬ್ಬಂದಿಗಳು ಕರ್ನಾಟಕದಲ್ಲಿ ಕನ್ನಡ ಕಲಿತು ವ್ಯವಹಾರ ನಡೆಸಲು ಆಡಳಿತ ಮಂಡಳಿ ಗಳು ಕ್ರಮ ಕೈಗೊಳ್ಳಬೇಕು ಎಂದು ಹಕ್ಕೊತ್ತಾಯ ಮಂಡಿಸಲಾಯಿತು.

ಈ ಎಲ್ಲ ಬೇಡಿಕೆಗಳನ್ನು ತಕ್ಷಣ ಜಾರಿಗೆ ತರಬೇಕು ಎಂದು ವೇದಿಕೆಯ ಸದಸ್ಯರು ನಗರಸಭೆ ಪೌರಾಯುಕ್ತರಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ವೇದಿಕೆಯ ಮಹಿಳಾ ಜಿಲ್ಲಾಧ್ಯಕ್ಷೆ ಡಾ:ಜ್ಯೋತಿ ಸೋಮಶೇಖರ್, ಪ್ರಮುಖರಾದ ಶ್ಯಾಮಲಾ, ತಿ.ನಾ. ಶ್ರೀನಿವಾಸ್. ಹೆಚ್. ಬಿ.ರಾಘವೇಂದ್ರ, ರಾಜೇಶ ಕುಗ್ವೆ,ಕುಂಟಗೋಡು ಸೀತಾರಾಮ್, ಸಂದೀಪ ಅಣಲೇಕೊಪ್ಪ, ಸಾಗರ, ಅಣ್ಣಪ್ಪ ಕೆಳದಿಪುರ, ಷಣ್ಮುಖ ಕೆಂಚಾಳಸರ, ಮಂಜುನಾಥ ಅಣಲೇಕೊಪ್ಪ, ಹರೀಶ್ ಕುಗ್ವೆ ಇನ್ನಿತರರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು