ವಿಜಯ ಸಂಘರ್ಷ ನ್ಯೂಸ್
ಭದ್ರಾವತಿ: 2024ರ ಅಕ್ಟೋಬರ್ 22 ರಂದು ಶಿವಮೊಗ್ಗ -ಭದ್ರಾವತಿ ಮಾರ್ಗದ ಬಸ್‌ನಲ್ಲಿ ಪಯಣಿಸುತ್ತಿದ್ದ ಭದ್ರಾವತಿ ಬೈಪಾಸ್ ರಸ್ತೆ, ಹಳೇ ಭಂಡಾರಹಳ್ಳಿ ವಾಸಿ 19 ವರ್ಷದ ಯುವತಿಯು ಹೇಮಾವತಿ ಬಸ್‌ನಿಂದ ಕೆಳಗೆ ಬಿದ್ದು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆ.
ನ. 10 ರಂದು ಹೇಮಾವತಿ ತಂದೆ ರಮೇಶ್ ಎಂಬುವವರಿಗೆ ಅಪಘಾತ ಪರಿಹಾರ ನಿಧಿಯಿಂದ ರೂ. 10 ಲಕ್ಷಗಳ ಚೆಕ್‌ನ್ನು ಕ.ರಾ.ರ.ಸಾ. ನಿಗಮದ ಶಿವಮೊಗ್ಗ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಟಿ.ಆರ್.ನವೀನ್ ಹಸ್ತಾಂತರ ಮಾಡಿದ್ದಾರೆ ಎಂದು ಕರಾರಸಾನಿ ಗಮದ ಪ್ರಕಟಣೆ ತಿಳಿಸಿದೆ.