ಭದ್ರಾವತಿ-ಪ್ರತಿಭಾ ಕಾರಂಜಿ: ಅಖಿಲ್ ಜಿಲ್ಲಾಮಟ್ಟಕ್ಕೆ ಆಯ್ಕೆ

ವಿಜಯ ಸಂಘರ್ಷ ನ್ಯೂಸ್ 
ಭದ್ರಾವತಿ: ನಗರದ ಜೆಪಿಎಸ್ ಕಾಲೋನಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 4ನೇ ತರಗತಿ ವಿದ್ಯಾರ್ಥಿ ಅಖಿಲ್ ಕನ್ನಡ ಕಂಠಪಾಠ ಸ್ಪರ್ಧೆಯಲ್ಲಿ ತಾಲ್ಲೂಕು ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾನೆ. 

ನ್ಯೂಕಾಲೋನಿ ಸಮೀಪದ ಕೂಲಿ ಬ್ಲಾಕ್ ಶೆಡ್ ನಿವಾಸಿ ಸುನಿಲ್ ಹಾಗೂ ಸ್ಟೆಲ್ಲಾ ದಂಪತಿಗಳ ಪುತ್ರನಾಗಿದ್ದಾನೆ. 

ಜಿಲ್ಲಾಮಟ್ಟಕ್ಕೆ ಆಯ್ಕೆಯಾದ ಅಖಿಲ್ ಗೂ ಕಲಿಸಿದ ಶಾಂತಲ ಶಿಕ್ಷಕಿಗೂ ಶಾಲಾ ಎಸ್ ಡಿಎಂ ಸಿ ಅಧ್ಯಕ್ಷರು, ಸದಸ್ಯರು,ಮುಖ್ಯ ಶಿಕ್ಷಕಿ ಕಲಾವತಿ ಹಾಗೂ ಶಿಕ್ಷಕರು ಅಭಿನಂದಿಸಿದ್ದಾರೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು